/newsfirstlive-kannada/media/post_attachments/wp-content/uploads/2025/06/DUBAI.jpg)
764 ಅಪಾರ್ಟ್ಮೆಂಟ್ ಇರುವಂತಹ 67 ಅಂತಸ್ತಿನ ಕಟ್ಟಡದಲ್ಲಿ ಏಕಾಏಕಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದುಬೈನ ಮರೀನಾ ಪಿನಾಕಲ್‌ನಲ್ಲಿರುವ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮರೀನಾ ಪಿನಾಕಲ್‌ನಲ್ಲಿರುವ ಕಟ್ಟಡದ 764 ಅಪಾರ್ಟ್ಮೆಂಟ್ಗಳಲ್ಲಿದ್ದ 3820 ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಯಾರೊಬ್ಬರಿಗೆ ಯಾವುದೇ ಹಾನಿಯಾಗದಂತೆ ಎಲ್ಲರನ್ನು ಕಾಪಾಡಲಾಗಿದೆ. ದುಬೈನ ರಕ್ಷಣಾ ಟೀಮ್ಗಳು 6 ರಿಂದ 7 ಗಂಟೆವರೆಗೆ ನಿರಂತರ ರಕ್ಷಣಾ ಕಾರ್ಯದಲ್ಲಿ ತೊಡಗಿ ಜನರನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: NEET Result; ಕರ್ನಾಟಕಕ್ಕೆ ಮೊದಲ ಸ್ಥಾನ.. ತಂದೆ, ತಾಯಿಗೆ ಘನತೆ ತಂದ ನಿಖಿಲ್ ಸೊನ್ನದ
ಈ ಕಟ್ಟಡದಲ್ಲಿ ಯಾವೊಬ್ಬ ವ್ಯಕ್ತಿಗೂ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ. ಸಂತ್ರಸ್ತ ನಿವಾಸಿಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಹಾಗೂ ಅವರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಟ್ಟಡವನ್ನು ಟೈಗರ್ ಟವರ್ ಎಂದೂ ಕರೆಯಲ್ಪಡುವ ಮರೀನಾ ಪಿನಾಕಲ್‌ನಲ್ಲಿರುವ ಕಟ್ಟಡ ಬೆಂಕಿಗೆ ಆಹುತಿಯಾಗುತ್ತಿರುವುದು ಇದೇ ಮೊದಲಲ್ಲ. 2015ರ ಮೇನಲ್ಲಿ 47ನೇ ಅಂತಸ್ತಿನಲ್ಲಿದ್ದ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಮಾಹಿತಿ ತಕ್ಷಣ ರಕ್ಷಣಾ ಪಡೆಗಳು ಸ್ಥಳಕ್ಕೆ ತೆರಳುವಷ್ಟರಲ್ಲಿ 48ನೇ ಅಂತಸ್ತಿಗೂ ಬೆಂಕಿ ಆವರಿಸಿತ್ತು. ಕಟ್ಟಡ ಅಷ್ಟೇ ಹಾನಿಯಾಗಿತ್ತು.
🚨🇦🇪 BREAKING: Scenes from Dubai pic.twitter.com/XsJ9IgSzes
— The Saviour (@stairwayto3dom)
🚨🇦🇪 BREAKING: Scenes from Dubai pic.twitter.com/XsJ9IgSzes
— The Saviour (@stairwayto3dom) June 14, 2025
">June 14, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ