/newsfirstlive-kannada/media/post_attachments/wp-content/uploads/2025/04/coconut-prices.jpg)
ಬೆಂಗಳೂರು: ರಾಜ್ಯದ ಜನತೆಗೆ ಅದರಲ್ಲೂ ಅಡುಗೆ ಪ್ರಿಯರು, ರೆಸ್ಟೋರೆಂಟ್ ಮಾಲೀಕರಿಗೆ ಬಿಗ್ಶಾಕ್ ಎದುರಾಗಿದೆ. ಮತ್ತೆ ದುಬಾರಿ ದುನಿಯಾವಾಗುತ್ತಿದೆ ಸಿಲಿಕಾನ್ ಸಿಟಿ. ಬೆಂಗಳೂರಿನ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ತೆಂಗಿನಕಾಯಿ ಬೆಲೆ ಗರಿಷ್ಠ ಮಟ್ಟಕ್ಕೆ ಹೋಗಿದ್ದು, ತೆಂಗಿನಕಾಯಿ ಕೊಳ್ಳುವುದು ಜೇಬಿಗೆ ಭಾರವಾಗಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೆ ಮಳೆ.. ರಾಜ್ಯದ ಹಲವೆಡೆ ವರುಣನ ಅಬ್ಬರ; ಹವಾಮಾನ ಇಲಾಖೆ ಎಚ್ಚರಿಕೆ ಏನು?
ಹೌದು, ದೈನಂದಿನ ಜೀವನದಲ್ಲಿ ತೆಂಗಿನಕಾಯಿ ಬಳಸುವ ಗ್ರಾಹಕರಿಗೆ ಭಾರೀ ಹೊಡೆತ ಬಿದ್ದಿದೆ. ಪ್ರತಿ ಕೆ.ಜಿ.ಗೆ ₹65 ರಿಂದ ₹85ರಂತೆ ತೆಂಗಿನಕಾಯಿ ಮಾರಾಟವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ತೆಂಗಿನಕಾಯಿ ಅತ್ಯಧಿಕ ದರ ತಲುಪಿದೆ. ಅಲ್ಲದೇ ಶತಕ ಬಾರಿಸುವ ಹಂತಕ್ಕೆ ಬಂದಿದೆ. ದಿನೇ ದಿನೇ ತೆಂಗಿನಕಾಯಿ ಬೆಲೆ ಏರುತ್ತಲೇ ಇದೆ.
ದುಬಾರಿ ತೆಂಗಿನಕಾಯಿಗೆ ಕಾರಣವೇನು?
ಈ ಬಾರಿ ಬೇಸಿಗೆಯಲ್ಲಿ ಕರ್ನಾಟಕದ ಎಳನೀರಿಗೆ ನಮ್ಮ ರಾಜ್ಯ ಹಾಗೂ ಬೇರೆ ರಾಜ್ಯಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆಯಲ್ಲಿ ಈಗ ತೆಂಗಿನಕಾಯಿಯ ಇಳುವರಿ ಕಡಿಮೆ ಆಗಿದೆ.
ಸದ್ಯ ಮಾರುಕಟ್ಟೆಯಲ್ಲಿ 1 ಕೆ.ಜಿ ತೆಂಗಿನಕಾಯಿಯ ಬೆಲೆ 60- 85 ರೂಪಾಯಿವರೆಗೂ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆ ತೆಂಗಿನಕಾಯಿಗೆ ತುಂಬಾ ಡಿಮ್ಯಾಂಡ್ ಬಂದಿದೆ. ದುಬಾರಿ ತೆಂಗಿನಕಾಯಿಯ ಬೆಲೆ ಇನ್ನೂ 15 ದಿನಗಳ ಕಾಲ ಹೀಗೆ ಮುಂದುವರೆಯುವ ಸಾಧ್ಯತೆ ಇದೆ. ಹೀಗಾದ್ರೆ ಸಿಲಿಕಾನ್ ಸಿಟಿ ಮಂದಿಗೆ ಅಡುಗೆ ಮಾಡೋದು ಹೇಗಪ್ಪಾ ಅನ್ನೋ ಪರಿಸ್ಥಿತಿ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ