RCBಗೆ ಬಿಗ್ ಶಾಕ್​; ಈ ಆಟಗಾರರು ತಂಡದಲ್ಲಿ ಆಡುವುದೇ ಅನುಮಾನ.. ಏನಾಯಿತು?

author-image
Bheemappa
Updated On
ಆರ್​ಸಿಬಿ ಮುಂದಿನ ಪಂದ್ಯ ಯಾವಾಗ..? ಅಭಿಮಾನಿಗಳು ಓದಲೇಬೇಕಾದ ಸ್ಟೋರಿ..!
Advertisment
  • RCB ಆಟಗಾರ ಇದುವರೆಗೂ ಸಂಪೂರ್ಣ ಫಿಟ್ ಆಗಿಲ್ಲವೇ?
  • ಸಿಹಿ ಸುದ್ದಿ ಬೆನ್ನಲ್ಲೇ ಬೆಂಗಳೂರು ತಂಡಕ್ಕೆ ಕಹಿ ಸುದ್ದಿ, ಏನದು?
  • ಐಪಿಎಲ್​ ಬಳಿಕ ಮಹತ್ವದ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​

ಇದೀಗ ಐಪಿಎಲ್​ ಸೀಸನ್​ 18ರ ಪುನಾರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಈ ಒಮದು ಮಾತಿನಿಂದ ಅಭಿಮಾನಿಗಳ ವಲಯದಲ್ಲಿ ಸಂತಸ ಮೂಡಿದೆ. ಆದ್ರೆ, ಈ ಕುರಿತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಖುಷಿಯ ಜೊತೆ ಜೊತೆಗೆ ಕಹಿನೇ ಹೆಚ್ಚಿದೆ ಎನ್ನಲಾಗಿದೆ. ಪೇಸ್ ಬೌಲರ್ ಹ್ಯಾಜಲ್​ವುಡ್ ಸೇರಿ ಈ ಪ್ಲೇಯರ್ಸ್​ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

publive-image

ಆರ್​ಸಿಬಿಯ ಬೌಲಿಂಗ್​ ವಿಭಾಗದ ಜೋಶ್​ ಹೆಚ್ಚಿಸಿದ್ದ ಜೋಶ್​ ಹೇಜಲ್​ವುಡ್​ಗೆ ಶೋಲ್ಡರ್​ ಇಂಜುರಿ ಕಾಡ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ನಡೆದಿದ್ದ ಚೆನ್ನೈ ವಿರುದ್ಧ ಪಂದ್ಯದಿಂದ ಹೊರಗುಳಿದಿದ್ದರು. ಈಗಲೂ ಕೂಡ ಆಸಿಸ್​​ ವೇಗಿ ಸಂಪೂರ್ಣ ಫಿಟ್​​ ಆಗಿಲ್ಲ ಎನ್ನಲಾಗಿದೆ. ಸದ್ಯ ತವರಿಗೆ ಹಾರಿರೋ ಹೇಜಲ್​ವುಡ್​ ಮತ್ತೆ ವಾಪಾಸ್ಸಾಗೋದು ಅನುಮಾನ ಎನ್ನಲಾಗ್ತಿದೆ. ಐಪಿಎಲ್​ ಬಳಿಕ ಮಹತ್ವದ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​ ಇರೋದ್ರಿಂದ ಜೋಶ್​​ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ದೈತ್ಯ ಶೆಫರ್ಡ್​, ಲುಂಗಿ ಎನ್​ಗಿಡಿ ಕೈ ಕೊಡ್ತಾರಾ​​.?

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ಮಾಡಿದ್ದ ರೊಮಾರಿಯೋ ಶೆಫರ್ಡ್​​, ಹೊಸ ಭರವಸೆ ಹುಟ್ಟು ಹಾಕಿದ್ದರು. ಲುಂಗ್​ ಎನ್​ಗಿಡಿ ಕೂಡ ಬೌಲಿಂಗ್​ ವಿಭಾಗದ ಬಲ ಹೆಚ್ಚಿಸಿದ್ದರು. ಇದೀಗ ಉಳಿದ ಪಂದ್ಯಗಳಿಗೆ ಇವ್ರು ಅಲಭ್ಯರಾಗೋ ಸಾಧ್ಯತೆ ಎದುರಾಗಿದೆ. ನ್ಯಾಷನಲ್​ ಡ್ಯೂಟಿಯ ಕಾರಣ ನೀಡಿ ಶೆಫರ್ಡ್​ ತಂಡ ತೊರೆಯಲಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. ಎನ್​ಗಿಡಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಇರೋದ್ರಿಂದ ಅಲಭ್ಯ ಅಗಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಭಾವುಕರಾದ ವಿರಾಟ್​ ಕೊಹ್ಲಿ.. 14 ವರ್ಷದ ಟೆಸ್ಟ್ ಕ್ರಿಕೆಟ್​ ವೃತ್ತಿ ಜೀವನದ​ ಬಗ್ಗೆ ಏನು ಹೇಳಿದರು?

publive-image

ನಾಯಕ ರಜತ್​ ಪಾಟಿದಾರ್, ಫಿಲ್​ ಸಾಲ್ಟ್ ಫಿಟ್​ ಆಗಿರೋದು ಆರ್​​ಸಿಬಿ ಕ್ಯಾಂಪ್​ನಲ್ಲಿ ಸದ್ಯ ಸಮಾಧಾನ ತರಿಸಿದೆ. ಆದ್ರೆ, ಜೋಶ್ ಹೇಜಲ್​ವುಡ್​, ರೊಮಾರಿಯೋ ಶೆಫರ್ಡ್​​ , ಲುಂಗಿ ಎನ್​ಗಿಡಿ ಅಲಭ್ಯರಾಗ್ತಾರೆ ಅನ್ನೋದು ಹಿನ್ನಡೆಯ ಆತಂಕ ಸೃಷ್ಟಿಸಿದೆ. ಸ್ವಲ್ಪ ಸಿಹಿ, ಜಾಸ್ತಿ ಕಹಿಯ ಸನ್ನಿವೇಶವನ್ನ ಆರ್​​ಸಿಬಿ ಹೇಗೆ ಹ್ಯಾಂಡೆಲ್​ ಮಾಡುತ್ತೆ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment