ಕಾಲ್ತುಳಿತ ಒಂದೇ ಅಲ್ಲ.. 72 ಗಂಟೆ ಟ್ರಾಫಿಕ್​​ನಲ್ಲಿ ಸಿಲುಕಿದ ಜನ.. ಏನೆಲ್ಲ ಸಮಸ್ಯೆ ಆಗ್ತಿದೆ..?

author-image
Ganesh
Updated On
ಕಾಲ್ತುಳಿತ ಒಂದೇ ಅಲ್ಲ.. 72 ಗಂಟೆ ಟ್ರಾಫಿಕ್​​ನಲ್ಲಿ ಸಿಲುಕಿದ ಜನ.. ಏನೆಲ್ಲ ಸಮಸ್ಯೆ ಆಗ್ತಿದೆ..?
Advertisment
  • ತ್ರಿವೇಣಿ ಸಂಗಮದಲ್ಲಿ ಭಯಂಕರ ಕಾಲ್ತುಳಿತ
  • ಟ್ರಾಫಿಕ್ ಜಾಮ್​ನಿಂದ ಯಾರಿಗೆಲ್ಲ ಸಮಸ್ಯೆ ಆಗ್ತಿದೆ?
  • ಕುಂಭಕ್ಕೆ ಹರಿದು ಬರುತ್ತಿರುವ ಕೋಟ್ಯಾಂತರ ಭಕ್ತರು

ಕುಂಭಮೇಳದಿಂದಾಗಿ ಪ್ರಯಾಗ್‌ರಾಜ್ ರಸ್ತೆಗಳಲ್ಲಿ ಭಾರಿ ಜಾಮ್ ಉಂಟಾಗಿದೆ. ಬಿಹಾರದ ಕೈಮೂರ್ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್)-19ರಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ.

ಇದರಿಂದ ಪ್ರಯಾಣಿಕರು ಮತ್ತು ಚಾಲಕರು ತೊಂದರೆಗೀಡಾಗಿದ್ದಾರೆ. ಆಂಬ್ಯುಲೆನ್ಸ್‌ನಂತಹ ತುರ್ತು ಸೇವೆಗಳಿಗೆ ದಾರಿ ಸಿಗುತ್ತಿಲ್ಲ. ಸ್ಥಳೀಯ ಪೊಲೀಸ್ ಆಡಳಿತವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದು, ವಿವಿಧೆಡೆ ವಾಹನಗಳ ನಿಯಂತ್ರಣ ಮಾಡುತ್ತಿದ್ದಾರೆ. ಆದರೂ ಎರಡೂ ಮಾರ್ಗದಲ್ಲೂ ಸಂಚಾರ ಹದಗೆಟ್ಟಿದೆ.

ಇದನ್ನೂ ಓದಿ: ಮೌನಿ ಅಮವಾಸ್ಯೆಗೆ ಯಾಕೆ ಇಷ್ಟೊಂದು ಮಹತ್ವ? ಈ ದಿನ ಸಿಗುವ ಫಲಾಫಲಗಳು ಏನೇನು?

publive-image

ಅನೇಕ ಪ್ರಯಾಣಿಕರು 72 ಗಂಟೆಗಳಿಗೂ ಹೆಚ್ಚು ಕಾಲ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವರು ರೈಲಿನಲ್ಲಿ 8 ಗಂಟೆಗಳ ಕಾಲ ಕಳೆದಿದ್ದಾರೆ. ಸತತ 8 ಗಂಟೆಯಿಂದ ರೈಲು ಒಂದೇ ಜಾಗದಲ್ಲಿ ನಿಂತಿತ್ತು ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.

ಕುಂಭಮೇಳಕ್ಕೆ ಹೋಗುತ್ತಿದ್ದ ಪ್ರಯಾಣಿಕರ ನೋವು ಏನು?

ಮುರ್ಷಿದಾಬಾದ್‌ನಿಂದ ಕುಂಭಮೇಳಕ್ಕೆ ಛೋಟು ಕುಮಾರ್ ಎಂಬಾತ ಬಸ್​ ಡ್ರೈವ್ ಮಾಡಿಕೊಂಡು ಹೊರಟಿದ್ದರು. ಅವರು ಹೇಳುವ ಪ್ರಕಾರ, ನಾನು 30 ಪ್ರಯಾಣಿಕರೊಂದಿಗೆ ಕುಂಭಕ್ಕೆ ಹೋಗುತ್ತಿದ್ದೇನೆ. ಬಿಹಾರ ಪ್ರವೇಶಿಸಿದ ತಕ್ಷಣ ಟ್ರಾಫಿಕ್ ಜಾಮ್ ಎದುರಾಗಿದೆ. ಕೇವಲ 12 ಗಂಟೆಗಳಲ್ಲಿ 50 ಕಿಲೋ ಮೀಟರ್ ದೂರ ಪ್ರಯಾಣಿಸಲು ಸಾಧ್ಯವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಕುಂಭಮೇಳ ಮುಗಿಸಿ ಬರುವಾಗ ಭೀಕರ ಅಪಘಾತ.. ಮೈಸೂರಿನ ಭಕ್ತರು ಕೊನೆಯುಸಿರು

publive-image

ಮೂರು ದಿನಗಳಿಂದ ಟ್ರಾಫಿಕ್‌ನಲ್ಲಿ!

ಅಸನ್ಸೋಲ್‌ನಿಂದ ಚಂದೌಲಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅನಿತಾ ಶುಕ್ಲಾ ಹೇಳುವಂತೆ, ಮೂರು ದಿನಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದೇವು. ಸತತ 8 ಗಂಟೆಗಳಿಂದ ನಮಗೆ ಕಾರು ಒಂದು ಇಂಚು ಕೂಡ ಚಲಿಸಲು ಸಾಧ್ಯವಾಗಲಿಲ್ಲ. ಯಾಕೆ ಇಷ್ಟೊಂದು ಜಾಮ್ ಆಗಿದೆ ಎಂದು ಗೊತ್ತಾಗ್ತಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ಟ್ರಕ್ ಚಾಲಕರದ್ದೂ ಅದೇ ಪರಿಸ್ಥಿತಿ

ಕೋಲ್ಕತ್ತಾದಿಂದ ದೆಹಲಿಗೆ ಹೋಗುತ್ತಿದ್ದ ಟ್ರಕ್ ಡ್ರೈವರ್ ಕೂಡ ಇದೇ ಸಮಸ್ಯೆ ಹೇಳಿದ್ದಾರೆ. ಮೂರು ದಿನ ಟ್ರಾಫಿಕ್ ಜಾಮ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಟ್ರಾಫಿಕ್ ಜಾಮ್ ಆಗದಿದ್ದರೆ ಇಷ್ಟೊತ್ತಿಗೆ ಆಗಲೇ ದೆಹಲಿ ತಲುಪುತ್ತಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಈ ಭಕ್ತನಿಗೆ ಬಾಬಾ ಸಖತ್ ಆಶೀರ್ವಾದ.. ವಿಡಿಯೋ ನೋಡಿದ್ರೆ ನೀವೂ ನಗ್ತೀರಿ..! Video

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment