ಹಿಂದೂಸ್ತಾನ್ ಯೂನಿಲಿವರ್​ಗೆ ಸಿಇಓ ಆಗಿ ಪ್ರಿಯಾ ನಾಯರ್ ನೇಮಕ; ಶೇ.5 ರಷ್ಟು ಷೇರುಬೆಲೆ ಏರಿಕೆ!

author-image
Ganesh
Updated On
ಹಿಂದೂಸ್ತಾನ್ ಯೂನಿಲಿವರ್​ಗೆ ಸಿಇಓ ಆಗಿ ಪ್ರಿಯಾ ನಾಯರ್ ನೇಮಕ; ಶೇ.5 ರಷ್ಟು ಷೇರುಬೆಲೆ ಏರಿಕೆ!
Advertisment
  • ಪ್ರಿಯಾ ನಾಯರ್ ಮೇಲೆ ಷೇರುಪೇಟೆಗೆ ಹೊಸ ಭರವಸೆ
  • HUL ಭಾರತದ ಪ್ರಮುಖ ಕನ್ಸೂಮರ್ ಗೂಡ್ಸ್ ಕಂಪನಿ
  • ಪ್ರಿಯಾ ನಾಯರ್ ಯಾರು..? ಅವರ ಹಿನ್ನೆಲೆ ಏನು ಗೊತ್ತಾ..?

ಹಿಂದೂಸ್ತಾನ್ ಯೂನಿಲಿವರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ (Hindustan Unilever Ltd) ನೂತನ ಸಿಇಓ ಆಗಿ ಪ್ರಿಯಾ ನಾಯರ್ (Priya Nair) ನೇಮಕ ಮಾಡಲು ಕಂಪನಿ ನಿರ್ಧರಿಸಿದೆ.

ಈ ತೀರ್ಮಾನವನ್ನು ಬಿಎಸ್‌ಇಗೆ ಕಂಪನಿ ತಿಳಿಸಿದೆ. ಇದು ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದು, ಹೆಚ್‌ಯುಎಲ್ (HUL) ಕಂಪನಿಯ ಷೇರುಗಳ ಬೆಲೆ ಇಂದು ಬೆಳಗ್ಗೆ ಶೇ.5 ರಷ್ಟು ಏರಿಕೆಯಾಗಿವೆ. ಪ್ರಿಯಾ ನಾಯರ್, 92 ವರ್ಷ ಇತಿಹಾಸವುಳ್ಳ ಹೆಚ್‌ಯುಎಲ್ ಕಂಪನಿಯ ಮೊದಲ ಮಹಿಳಾ ಸಿಇಓ ಆಗಿದ್ದಾರೆ. ಭಾರತದ ಷೇರುಪೇಟೆ ಹಾಗೂ ಹೂಡಿಕೆದಾರರು ಪ್ರಿಯಾ ನಾಯರ್ ಮೇಲೆ ಭರವಸೆ ಇಟ್ಟಿರುವುದರ ಸಂಕೇತವಾಗಿಯೇ ಇಂದು ಕಂಪನಿಯ ಷೇರುಗಳ ಬೆಲೆ ಶೇ.5 ರಷ್ಟು ಏರಿಕೆಯಾಗಿವೆ. ಇಂದು ಬೆಳಗ್ಗೆ ಹೆಚ್‌ಯುಎಲ್ ಕಂಪನಿಯ ಷೇರುಗಳ ಬೆಲೆ 2,518 ರೂಪಾಯಿಗೆ ಏರಿಕೆಯಾಗಿದೆ. ಪ್ರಿಯಾ ನಾಯರ್​ರನ್ನು ಸಿಇಓ ಆಗಿ ನೇಮಿಸಿದ್ದು, ದಲಾಲ್ ಸ್ಟ್ರೀಟ್​ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹಿಂದೂಸ್ತಾನ್ ಯೂನಿಲಿವರ್ ಕಂಪನಿಯು ಭಾರತದ ಪ್ರಮುಖವಾದ ಕನ್ಸೂಮರ್ ಗೂಡ್ಸ್ ಕಂಪನಿಯಾಗಿದೆ.

ಇದನ್ನೂ ಓದಿ: ಪತ್ನಿಗೆ ಅಶ್ಲೀಲ ಮೆಸೇಜ್.. ಕಾಮುಕನಿಗೆ ಬುದ್ಧಿ ಕಲಿಸಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ

publive-image

ಇದುವರೆಗೂ ಪ್ರಿಯಾ ನಾಯರ್, ಹೆಚ್‌ಯುಎಲ್ ಕಂಪನಿಯ ಬ್ಯೂಟಿ ಅಂಡ್ ವೆಲ್ ಬೀಯಿಂಗ್​ನ ಅಧ್ಯಕ್ಷರಾಗಿದ್ದು, 13.2 ಬಿಲಿಯನ್ ಡಾಲರ್ ಮೌಲ್ಯದ ಬ್ಯುಸಿನೆಸ್​ನ ಹೇರ್, ಸ್ಕೀನ್ ಕೇರ್ ಬ್ರ್ಯಾಂಡ್​ಗಳ ನಿರ್ವಹಣೆ ಮಾಡುತ್ತಿದ್ದರು. ಡೌವ್, ಸನ್ ಸಿಲ್ಕ್, ಕ್ಲೀಯರ್ ಮತ್ತು ವ್ಯಾಸಲಿನ್ ಉತ್ಪನ್ನಗಳನ್ನು ಪ್ರಿಯಾ ನಾಯರ್ ಇದುವರೆಗೂ ನಿರ್ವಹಣೆ ಮಾಡುತ್ತಿದ್ದರು.

ಇದನ್ನೂ ಓದಿ: ಕೆಲಸಕ್ಕಾಗಿ ಮತ್ತೆ ಕಂಪನಿ ಸೇರಿದ ರಿಷಿ ಸುನಕ್.. ಬ್ರಿಟಿಷ್ ಮಾಜಿ ಪ್ರಧಾನಿಗೆ ಸಂಬಳ ಎಷ್ಟು ಕೊಡಬಹುದು..?

publive-image

53 ವರ್ಷದ ಪ್ರಿಯಾ ನಾಯರ್​ರನ್ನು ಹಿಂದೂಸ್ತಾನ್ ಯೂನಿಲಿವರ್ ಕಂಪನಿಯ ಎಂಡಿ ಮತ್ತು ಸಿಇಓ ಆಗಿ ನೇಮಿಸಿರುವುದು ಕಂಪನಿಯ ಪ್ರಮುಖ ಪರಿವರ್ತನೆಯ ಘಟ್ಟ. ಪ್ರಿಯಾ ನಾಯರ್ ಕಳೆದ 3 ದಶಕಗಳಿಂದ ಎಚ್‌ಯುಎಲ್ ಕಂಪನಿಯಲ್ಲಿದ್ದು, ಇವರ ಬಡ್ತಿಯು ಕಂಪನಿಯ ದಿಟ್ಟ ಕ್ರಮ. ಕಂಪನಿಯ ನಿಧಾನಗತಿಯ ಬೆಳವಣಿಗೆ ಮತ್ತು ಡಿ2ಸಿ ಕಂಪನಿಗಳ ಸ್ಪರ್ಧೆಯಿಂದ ಎದುರಾಗಿದ್ದ ಒತ್ತಡವನ್ನು ಎದುರಿಸಲು ತೆಗೆದುಕೊಂಡ ದಿಟ್ಟ ಹೆಜ್ಜೆಯಾಗಿದೆ. ಜೊತೆಗೆ ಎಚ್‌ಯುಎಲ್ ಕಂಪನಿಗೆ ಹೊಸದಾಗಿ ಬರುತ್ತಿರುವ ಬ್ರ್ಯಾಂಡ್​ಗಳಿಂದಲೂ ಸ್ಪರ್ಧೆ ಎದುರಾಗಿದೆ. ಇವೆಲ್ಲವನ್ನೂ ಎದುರಿಸಿ ಕಂಪನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ, ಸವಾಲು ಪ್ರಿಯಾ ನಾಯರ್ ಮುಂದಿದೆ.

ಇದನ್ನೂ ಓದಿ: ODI ಕ್ಯಾಪ್ಟನ್ಸಿಯಿಂದ ರೋಹಿತ್ ಔಟ್..? ಆಸ್ಟ್ರೇಲಿಯಾ ಸರಣಿಯಿಂದ ಟೀಂ ಇಂಡಿಯಾಗೆ ಹೊಸ ನಾಯಕ..!

publive-image

ಪ್ರಿಯಾ ನಾಯರ್‌ಗೆ ಇದೆ ಸಾಧನೆಯ ಹಿನ್ನೆಲೆ

ಪ್ರಿಯಾ ನಾಯರ್, ಇದುವರೆಗಿನ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿದೆ. ಕಳಪೆ ಸಾಧನೆ ಮಾಡುತ್ತಿದ್ದ ಬ್ಯೂಟಿ ಮತ್ತು ವೆಲ್ ಬೀಯಿಂಗ್ ಉತ್ಪನ್ನಗಳನ್ನು ಹೆಚ್ಚಿನ ಲಾಭದ ಉತ್ಪನ್ನಗಳಾಗಿ ಪರಿವರ್ತಿಸಿದ ಕೀರ್ತಿ ಪ್ರಿಯಾ ನಾಯರ್ ಗೆ ಸಲ್ಲುತ್ತೆ. 2014- 2020 ರವರೆಗೆ ಪ್ರಿಯಾ ನಾಯರ್, ಹೋಮ್ ಕೇರ್ ಉತ್ಪನ್ನಗಳ ಎಕ್ಸಿಕ್ಯುಟೀವ್ ಡೈರೆಕ್ಟರ್ ಆಗಿದ್ದರು. ಈ ವೇಳೆ ಹೋಮ್ ಕೇರ್ ಉತ್ಪನ್ನಗಳ ಲಾಭಾಂಶ ಹೆಚ್ಚಾಯಿತು. ಇದರಿಂದ ಹೆಚ್‌ಯುಎಲ್ ಕಂಪನಿಗಳ ಒಟ್ಟಾರೆ ಲಾಭದ ಮಾರ್ಜಿನ್ ಶೇ.15 ರಿಂದ ಶೇ.22.3 ಕ್ಕೆ ಏರಿಕೆಯಾಯಿತು. ಇದರ ಹಿಂದೆ ಇದ್ದಿದ್ದು ಪ್ರಿಯಾ ನಾಯರ್ ಶ್ರಮ. ಹೀಗಾಗಿ ಇಂದು ಭಾರತದ ಷೇರುಪೇಟೆ ಪ್ರಿಯಾ ನಾಯರ್ ನೇಮಕದ ಮೇಲೆ ನಂಬಿಕೆ, ಭರವಸೆ ವ್ಯಕ್ತಪಡಿಸಿ, ಎಚ್‌ಯುಎಲ್ ಷೇರುಗಳನ್ನು ಹೆಚ್ಚಾಗಿ ಖರೀದಿಸುತ್ತಿದೆ. ಕಂಪನಿಯ ಷೇರುಗಳಿಗೆ ಬೇಡಿಕೆ ಹೆಚ್ಚಾಗಿ ಶೇ.5 ರಷ್ಟು ಷೇರು ಬೆಲೆ ಏರಿಕೆಯಾಗಿದೆ.

ಹೆಚ್‌ಯುಎಲ್ ಕಂಪನಿಯಲ್ಲಿ ಆಗಿರುವ ನಾಯಕತ್ವದ ಬದಲಾವಣೆಯು ಪಾಸಿಟಿವ್ ಸಿಗ್ನಲ್. ಎಚ್‌ಯುಎಲ್ ಕಂಪನಿಗೆ ಸ್ಪರ್ಧೆಯ ಸವಾಲು ಮತ್ತು ಡಿಜಿಟಲ್ ಬದಲಾವಣೆಗೆ ವೇಗ ನೀಡಲು ನಾಯಕತ್ವ ಬದಲಾವಣೆಯು ಅಗತ್ಯವಾದ ಬಲ ಮತ್ತು ಪುಷ್ಟಿಯನ್ನು ನೀಡುತ್ತೆ ಎಂದು ಬ್ರೋಕರೇಜ್ ಸಂಸ್ಥೆ ನೋಮೂರಾ ಹೇಳಿದೆ.

ಇದನ್ನೂ ಓದಿ: ಅಮೆರಿಕ, ರಷ್ಯಾ, ಚೀನಾ ಅಲ್ಲವೇ ಅಲ್ಲ.. ಈ ದೇಶದ ಸೈನಿಕರಿಗೆ ವಿಶ್ವದಲ್ಲೇ ಅತಿ ಹೆಚ್ಚು ಸಂಬಳ..!

publive-image

ಪ್ರಿಯಾ ನಾಯರ್​, ಅನುಭವ, ಜ್ಞಾನ, ದಕ್ಷತೆ, ಕಾರ್ಯತಂತ್ರಗಳು ಹೆಚ್‌ಯುಎಲ್ ಕಂಪನಿಯು ಇನ್ನೂ ಹೆಚ್ಚು ವಿಸ್ತಾರವಾಗಿ ಬೆಳೆಯುವ ಆಕಾಂಕ್ಷೆಗೆ ನೀರೆರೆಯುತ್ತಾವೆ ಎಂಬ ನಂಬಿಕೆಯು ಕಂಪನಿಯಲ್ಲಿದೆ. ಇದೇ ನಂಬಿಕೆಯನ್ನು ಹೆಚ್‌ಯುಎಲ್ ಷೇರು ಹೂಡಿಕೆದಾರರು ಹೊಂದಿದ್ದಾರೆ.

ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment