/newsfirstlive-kannada/media/post_attachments/wp-content/uploads/2025/06/huli-karthik-1.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಸಖತ್ ಖುಷಿಯಲ್ಲಿದ್ದಾರೆ. ಬಿಗ್ಬಾಸ್ ಬಳಿಕ ಮತ್ತೊಂದು ಶೋನಲ್ಲಿ ಮಿಂಚುತ್ತಿದ್ದಾರೆ. ದಿನೇ ದಿನೇ ರಕ್ಷಕ್ ಬುಲೆಟ್ ಸಖತ್ ಆಗಿ ಪರ್ಫಾರ್ಮೆನ್ಸ್ ಕೊಡುತ್ತಿದ್ದಾರೆ.
ಇದನ್ನೂ ಓದಿ: ಜೋಗನ ಹಕ್ಕಲು ಜಲಪಾತ ವೀಕ್ಷಣೆಗೆ ಹೋದಾಗ ಘೋರ ದುರಂತ.. ಕಾಲು ಜಾರಿ ಯುವಕ ಕಣ್ಮರೆ
ಬಿಗ್ಬಾಸ್ ಸೀಸನ್ 10 ಮೂಲಕ ಫೇಮಸ್ ಆಗಿದ್ದ ರಕ್ಷಕ್ ಬುಲೆಟ್ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಮಿಂಚುತ್ತಿದ್ದಾರೆ. ಸದ್ಯ ರಕ್ಷಕ್ ಬುಲೆಟ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ ರಕ್ಷಕ್ ಬುಲೆಟ್ ಹುಟ್ಟು ಹಬ್ಬವಿತ್ತು.
ಹೀಗಾಗಿ ಅಭಿಮಾನಿಗಳು, ಆಪ್ತರು, ಸ್ನೇಹಿತರು ಸೇರಿದಂತೆ ಎಲ್ಲರೂ ರಕ್ಷಕ್ ಬುಲೆಟ್ ಹುಟ್ಟು ಹಬ್ಬಕ್ಕೆ ಶಭಾಶಯ ತಿಳಿಸಿದ್ದರು. ಅಷ್ಟೇ ಅಲ್ಲದೇ ಭರ್ಜರಿ ಬ್ಯಾಚುಲರ್ಸ್ ಟೀಮ್ ಕೂಡ ರಕ್ಷಕ್ ಬುಲೆಟ್ಗಾಗಿ ಸ್ಪೆಷಲ್ ಕೇಕ್ ಕಟ್ ಮಾಡಿಸಿ ವಿಶ್ ಮಾಡಿದ್ದಾರೆ. ಅಲ್ಲದೇ ರಕ್ಷಕ್ ಬುಲೆಟ್ ಬರ್ತ್ ಡೇ ದಿನ ಬಿರಿಯಾನಿ ಊಟ ಹಾಕಿಸಿದ್ದಾರೆ. ಅಷ್ಟೇ ಅಲ್ಲದೇ ಆಟೋ ಚಾಲಕರಿಗೆ ಬಟ್ಟೆ ಮತ್ತು ಸಿಹಿ ಹಂಚಿದ್ದಾರೆ.
View this post on Instagram
ಇನ್ನೂ, ಮಜಾ ಭಾರತ, ಗಿಚ್ಚಿಗಿಲಿಗಿಲಿ ಖ್ಯಾತಿಯ ಹುಲಿ ಕಾರ್ತಿಕ್, ರಕ್ಷಕ್ ಬುಲೆಟ್ಗೆ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಸರ್ಪ್ರೈಸ್ ಎಂಬಂತೆ ಜಾಕೆಟ್ ಅನ್ನು ರಕ್ಷಕ್ ಬುಲೆಟ್ಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ಜಾಕೆಟ್ ಹಾಕಿಕೊಂಡ ರಕ್ಷಕ್ ಫುಲ್ ಖುಷ್ ಆಗಿದ್ದಾರೆ. ಇದೇ ವೇಳೆ ಹುಲಿ ಕಾರ್ತಿಕ್, ರಕ್ಷಕ್ ಬುಲೆಟ್ ಕಾಲೆಳೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ