ಜಪಾನ್, ಹಾಂಕಾಂಗ್​ಗೂ HMPV ಸೋಂಕು ಹಬ್ಬಿಸಿದ ಚೀನಾ.. ಭಯ ಹುಟ್ಟಿಸಿದ ಚೈನಾ ವೈರಸ್​

author-image
Ganesh
Updated On
ಜಪಾನ್, ಹಾಂಕಾಂಗ್​ಗೂ HMPV ಸೋಂಕು ಹಬ್ಬಿಸಿದ ಚೀನಾ.. ಭಯ ಹುಟ್ಟಿಸಿದ ಚೈನಾ ವೈರಸ್​
Advertisment
  • ಚೀನಾ ಮತ್ತೆ ಪ್ರಕ್ಷುಬದ್ಧ, ಮತ್ತೊಂದು ಹೊಸ ವೈರಸ್ ಸೃಷ್ಟಿ
  • ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವ ಚೀನಾ
  • HMPV ವೈರಸ್​ನ ಪ್ರಮುಖ ಲಕ್ಷಣಗಳು ಏನು?

ಚೀನಾದಲ್ಲಿ ಕೊರೊನಾ ವೈರಸ್ ಮಾದರಿಯ ಹೂಮನ್ ಮೆಟಾನ್ಯುಮೋ ವೈರಸ್ (HMPV ) ಸೋಂಕು ಹರಡಿ ಭಾರೀ ಆತಂಕ ಹುಟ್ಟುಹಾಕಿರುವಾಗಲೇ, ಅತ್ತ ಜಪಾನ್ ಮತ್ತು ಹಾಂಕಾಂಗ್ ದೇಶಗಳಲ್ಲೂ ಇದೇ ಸೋಂಕಿನ ವೈರಸ್ ಭಾರೀ ಪ್ರಮಾಣದಲ್ಲಿ ವ್ಯಾಪಿಸಿರುವ ಸುದ್ದಿ ಹೊರಬಿದ್ದಿದೆ.

ವರದಿ ಪ್ರಕಾರ, 2.150 ವರೆಗೆ ಒಂದೇ ವಾರದಲ್ಲಿ 94,259 ಜನರು ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ಪ್ರಸ್ತುತ ಜಪಾನ್​​ನಲ್ಲಿರುವ ಸೋಂಕಿಗೆ ತುತ್ತಾದವರ ಸಂಖ್ಯೆ 718,000ಕ್ಕೆ ತಲುಪಿದೆ. ಸದ್ಯ ದೇಶದಲ್ಲಿ ಚಳಿಗಾಲ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಸೋಂಕು ಇನ್ನಷ್ಟು ವ್ಯಾಪಕವಾಗುವ ಆತಂಕವೂ ಎದುರಾಗಿದೆ. ಇನ್ನೊಂದೆಡೆ ಚೀನಾದ ನೆರೆಯ ದೇಶವಾದ ಹಾಂಕಾಂಗ್​ನಲ್ಲೂ ಸೊಂಕು ವ್ಯಾಪಿಸಿದ್ದು, 1000ಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿದೆ.

ಇದನ್ನೂ ಓದಿ:14 KG ಚಿನ್ನ ವಂಚನೆ ಕೇಸಲ್ಲಿ ಪಟ್ಟಣಗೆರೆ ಶೆಡ್‌ ಹೆಸರು; ಐಶ್ವರ್ಯಗೂ ಆ ಸ್ಟಾರ್​ ನಟನಿಗೂ ಸಂಬಂಧವೇನು?

ಈ ವೈರಸ್ ದೇಹ ಹೊಕ್ಕಿದ ಮೇಲೆ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡ್ತದೆ. ಕೆಮ್ಮು ಮತ್ತು ಸೀನುವಿಕೆಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಇದರ ಪ್ರೌಢಾವಸ್ಥೆಯ ಅವಧಿ ಮೂರರಿಂದ ಐದು ದಿನಗಳು. ಈ ವೈರಸ್ ಮಕ್ಕಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರೋರ ಮೇಲೆ ಆಕ್ರಮಣ ಮಾಡುತ್ತದೆ.

ಲಕ್ಷಣಗಳು ಏನು..?

ಕೆಮ್ಮು, ಜ್ವರ, ಮೂಗು ಕಟ್ಟುವುದು, ಶೀತ ಈ ವೈರಸ್‌ನ ಸಾಮಾನ್ಯ ಲಕ್ಷಣಗಳಾಗಿವೆ. HMPV ವೈರಸ್ ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಆಗಾಗ್ಗೆ ಕೈ ತೊಳೆಯುವುದಾಗಿದೆ. ಜೊತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಾಗಿದೆ.

ಇದನ್ನೂ ಓದಿ:2025ರ ಐಪಿಎಲ್​​: ರಿಂಕು ಸಿಂಗ್​ಗೆ ಬಿಗ್​ ಶಾಕ್​ ಕೊಟ್ಟ ಕೆಕೆಆರ್; ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment