/newsfirstlive-kannada/media/post_attachments/wp-content/uploads/2025/03/PAK_PLAYERS_1.jpg)
ಚಾಂಪಿಯನ್ ಟ್ರೋಫಿ ಟೂರ್ನಿಯ ಲೀಗ್ ಹಂತದಲ್ಲೆ ಪಾಕಿಸ್ತಾನ ತಂಡ ಹೊರಗೆ ಹೋಗಿತ್ತು. ಟೂರ್ನಿಯನ್ನು ಆಯೋಜನೆ ಮಾಡಿದ್ದ ದೇಶವೇ ಟೂರ್ನಿಯಿಂದ ಹೊರ ಬಿದ್ದು ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇದರ ಬೆನ್ನಲ್ಲೇ ಇದೀಗ ಪಾಕ್ ಆಟಗಾರರಿಗೂ ದೊಡ್ಡ ಅವಮಾನ ಆದಂತೆ ಆಗಿದೆ. ಹಂಡ್ರೆಡ್ ಲೀಗ್ನಲ್ಲಿ ಪಾಕಿಸ್ತಾನದ ಯಾವುದೇ ಆಟಗಾರರು ಆಯ್ಕೆ ಆಗಿಲ್ಲದಿರುವುದು ಅಚ್ಚರಿ ಮೂಡಿಸಿದೆ.
ಇಂಗ್ಲೆಂಡ್ನ 2025ರ ದಿ ಹಂಡ್ರೆಡ್ ಲೀಗ್ನ ಡ್ರಾಫ್ಟ್ನಲ್ಲಿ ಪಾಕಿಸ್ತಾನದ 5 ಮಹಿಳಾ ಆಟಗಾರ್ತಿಯರು ಹಾಗೂ 45 ಪುರುಷ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ 50 ಪ್ಲೇಯರ್ಗಳನ್ನು ಖರೀದಿ ಮಾಡಲು ಯಾರು ಕೂಡ ಮುಂದೆ ಬಂದಿಲ್ಲ. ಆಟಗಾರ್ತಿಯರಾದ ಅಲಿಯಾ ರಿಯಾಜ್, ಫಾತಿಮಾ ಸನಾ, ಯುಸ್ರಾ ಅಮೀರ್, ಇರಾಂ ಜಾವೇದ್ ಹಾಗೂ ಜವೇರಿಯಾ ರೌಫ್ ಅವರ ಖರೀದಿಗೆ ಯಾರು ಮನಸು ಮಾಡಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:RCB ಎಷ್ಟು ಸಾವಿರ ಕಿಲೋ ಮೀಟರ್ ಪ್ರಯಾಣಿಸುತ್ತೆ.. ಈ ಬಾರಿ ರಾಯಲ್ ಚಾಲೆಂಜರ್ಸ್ಗೆ ‘ಟ್ರಾವೆಲ್’ ಚಾಲೆಂಜ್!
ಪಾಕಿಸ್ತಾನದ 45 ಪುರುಷ ಆಟಗಾರರು ದಿ ಹಂಡ್ರೆಡ್ ಲೀಗ್ನ ಡ್ರಾಫ್ಟ್ನಲ್ಲಿ ರಿಜಿಸ್ಟೆರ್ ಮಾಡಿಕೊಂಡಿದ್ದರು. ನಸೀಮ್ ಶಾ, ಶಬಾದ್ ಖಾನ್, ಶ್ಯಾಮ್ ಅಯೂಬ್, ಶಾಹೀನ್ ಶಾ ಅಫ್ರಿದಿ ಸೇರಿದಂತೆ ಪ್ರಮುಖ ಆಟಗಾರರು ಡ್ರಾಪ್ಟ್ನಲ್ಲಿದ್ದರು. ದಿ ಹಂಡ್ರೆಡ್ ಲೀಗ್ನ 8 ಫ್ರಾಂಚೈಸಿಗಳ ಪೈಕಿ ಯಾವ ಫ್ರಾಂಚೈಸಿ ಕೂಡ ಪಾಕ್ ಆಟಗಾರರ ಖರೀದಿಗೆ ಒಲವು ತೋರದೇ ಇರುವುದು ಅಚ್ಚರಿ ಮೂಡಿಸಿದೆ.
ಅಫ್ಘಾನಿಸ್ತಾನದ ಸ್ಪಿನ್ನರ್ ನೂರ್ ಅಹ್ಮದ್ ಮತ್ತು ನ್ಯೂಜಿಲೆಂಡ್ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಒಳ್ಳೆಯ ದರಕ್ಕೆ ಮಾರಾಟ ಆಗಿದ್ದಾರೆ. ಬ್ರೇಸ್‌ವೆಲ್ ಅವರನ್ನು ಸದರ್ನ್ ಬ್ರೇವ್ ಆಯ್ಕೆ ಮಾಡಿದರೆ, ನೂರ್ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡಕ್ಕೆ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರನ್ನು ಲಂಡನ್ ಸ್ಪಿರಿಟ್ ಖರೀದಿ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ