Advertisment

ತುಂಗಭದ್ರಾ ಡ್ಯಾಂಗೆ ಗೇಟ್ ಅಳವಡಿಸೋದೇ ದೊಡ್ಡ ಚಾಲೆಂಜ್; ಹೇಗಿದೆ ತಜ್ಞರ ಪ್ಲಾನ್..?

author-image
Veena Gangani
Updated On
ತುಂಗಭದ್ರಾ ಡ್ಯಾಂಗೆ ಗೇಟ್ ಅಳವಡಿಸೋದೇ ದೊಡ್ಡ ಚಾಲೆಂಜ್; ಹೇಗಿದೆ ತಜ್ಞರ ಪ್ಲಾನ್..?
Advertisment
  • ತುಂಗಭದ್ರಾ ಡ್ಯಾಂಗೆ ಗೇಟ್ ಅಳವಡಿಸೋ ಕಾರ್ಯ ಚುರುಕು
  • ನಿನ್ನೆ ಕತ್ತಲಾಗಿದ್ರಿಂದ ಸ್ಟಾಪ್​ ಲಾಗ್​ ಗೇಟ್​ ನಿರ್ಮಾಣ ಕಾರ್ಯ ಸ್ಥಗಿತ
  • ಇನ್ನೇನು ಕೆಲವೇ ಹೊತ್ತಲ್ಲಿ ಆರಂಭವಾಗಲಿದೆ ಕಾರ್ಯಾಚರಣೆ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಆರು ದಿನಗಳಾಗಿದ್ದು, ತಾತ್ಕಾಲಿಕ ಗೇಟ್ ಕೂರಿಸುವ ಕಾರ್ಯ ಭರದಿಂದ ಸಾಗಿದೆ. ಇಂದು ಸಂಜೆ ವೇಳೆಗೆ ಗೇಟ್ ಕೂರಿಸುವ ಕಾರ್ಯ ಬಹುತೇಕ ಮುಕ್ತಾಯವಾಗುವ ಸಾಧ್ಯತೆ ಇದೆ.

Advertisment

ಇದನ್ನೂ ಓದಿ:ಮದುವೆ ಆದ ಹೊಸ ಜೋಡಿ ತಿನ್ನಲೇಬೇಕು ಈ ಪಾನ್​​.. ಅಬ್ಬಬ್ಬಾ! ಇದರ ಬೆಲೆ 1 ಲಕ್ಷ ರೂ!

publive-image

ಅಧಿಕಾರಿಗಳು ಡ್ಯಾಂನ ಹಳೇ ಮ್ಯಾಪ್ ತೆಗೆದು, ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ತಂಡ ಮುರಿದ ಕಡೆ ತಾತ್ಕಾಲಿಕ ಗೇಟ್ ಕೂರಿಸಲು ಪ್ಲಾನ್ ರೂಪಿಸುತ್ತಿದೆ. ಇನ್ನೊಂದೆಡೆ 4 ಬೃಹತ್ ಕ್ರೇನ್ ಸರಿಯಾದ ಪೊಜಿಷನ್​ನಲ್ಲಿ ನಿಲ್ಲಿಸಿ ಕೆಲಸ ಆರಂಭಿಸಲಾಗಿದೆ. ರೈಲ್ವೇ ಟ್ರ್ಯಾಕ್ ಮಾದರಿಯಲ್ಲಿ, ತಾತ್ಕಾಲಿಕ ಗೇಟ್ ಅಳವಡಿಸಲು ಮೊದಲ ಹಂತದ ಪೂರ್ವ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿತ್ತು. ಕೆಲಸನೂ ಆರಂಭವಾಯ್ತು. ಆದ್ರೆ ಹರಿಯೋ ನೀರು ಸಹಕರಬೇಕೆಲ್ವಾ ಅದಕ್ಕೆ ಬೇಕಾದ ಪ್ಲಾನ್​ಗಳು ಕೂಡ ತಯಾರಾಗಿ ವರ್ಕೌಟ್ ಮಾಡೋ ಕಸರತ್ತಿನಲ್ಲಿ ಡ್ಯಾಂ ತಜ್ಞ ಕನ್ಹಯ್ಯ ತಂಡ ತೊಡಗಿದೆ.

publive-image

ಹೇಗಿದೆ ತಜ್ಞರ ಪ್ಲಾನ್?

ಮೊದಲ ಗೇಟ್ ಕೂರಿಸೋದು ದೊಡ್ಡ ಚಾಲೇಂಜ್ ಆಗಿದ್ದು, ಅದನ್ನ ಹಾಕಿದ್ರೆ ನಂತರದಲ್ಲಿ ಅಷ್ಟೊಂದು ಕಷ್ಟ ಆಗುವುದಿಲ್ಲ. ಒಟ್ಟು ಐದು ಸ್ಟಾಪ್ ಲಾಗ್ ಗೇಟ್‌ಗಳನ್ನ ಅಳವಡಿಕೆ ಮಾಡಲು ಕಾರ್ಯಾಚರಣೆ ಪ್ರಾರಂಭ ಮಾಡಲಾಗಿದೆ. ಒಟ್ಟು 5 ಗೇಟ್‌ಗಳನ್ನ ಅಳವಡಿಕೆ ಮಾಡಲಾಗ್ತಿದ್ದು, ಒಂದು ಸ್ಟಾಪ್ ಲಾಗ್ ಗೇಟ್ 25 TMC ನೀರನ್ನ ತಡೆಯುತ್ತೆ. ಅವಶ್ಯಕತೆ ಬಿದ್ದರೆ ಇನ್ನು ಮೂರು ಗೇಟ್‌ಗಳನ್ನ ಅಳವಡಿಕೆ ಮಾಡಲು ತಜ್ಞರ ತಂಡ ಪ್ಲಾನ್​ ಮಾಡಿಕೊಂಡಿದೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ತಂಡ ಒಟ್ಟು 90 TMC ನೀರನ್ನ ಸಂಗ್ರಹ ಮಾಡುವ ಪ್ರಯತ್ನದಲ್ಲಿದೆ.

Advertisment

publive-image

ಜನಕ್ಕೆ ಬೇಕಾಗಿರೋ ನೀರಿಗಾಗಿ ಡ್ಯಾಂನ ಸ್ಟಾಪ್ ಗೇಟ್ ಅಳವಡಿಸೋ ಕಾರ್ಯದಲ್ಲಿ ತೊಡಗಿರೋ ಕಾರ್ಮಿಕರಿಗೆ ಬಂಪರ್‌ ಬಹುಮಾನ ಅರಸಿ ಬಂದಿದೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರೋ ಜಮೀರ್‌ ಅಹ್ಮದ್, ಗೇಟ್ ಅಳವಡಿಸೋ ಪ್ರತಿಯೊಬ್ಬ ಕಾರ್ಮಿಕರಿಗೆ ತಲಾ 50 ಸಾವಿರ ಬಹುಮಾನ ಘೋಷಿಸಿದ್ದಾರೆ. ತಾಂತ್ರಿಕ ತೊಡಕಿನಿಂದಾಗಿ‌ ಮೊದಲ ದಿನದ ಸ್ಟಾಪ್ ಗೇಟ್ ಅಳವಡಿಕೆ‌ ವಿಳಂಭವಾದ ಹಿನ್ನೆಲೆ ಸಚಿವ ಜಮೀರ್ ಅಹ್ಮದ್‌ ಸ್ಥಳಕ್ಕೆ‌ ಭೇಟಿ ನೀಡಿದ್ದರು. ಈ ವೇಳೆ ಘೋಷಣೆಯನ್ನ ಮಾಡಿದ್ದಾರೆ.

publive-image

ತಾತ್ಕಾಲಿಕ ಗೇಟ್ ಕೂರಿಸುವ ಕಾರ್ಯ ಭರದಿಂದ ಸಾಗಿದ್ದು, ಶುಭ ಘಳಿಗೆ ಗೇಟ್ ಕಾರ್ಯದಲ್ಲಿ‌ ವಿಘ್ನ ಎದುರಾದಂತೆ ಕಾಣುತ್ತಿದೆ. ತಾಂತ್ರಿಕ ಕಾರಣದಿಂದ ಸಂಜೆಯೊಳಗೆ ಇಳಿಯ ಬೇಕಾದ ಸ್ಟಾಪ್ ಲಾಗ್ ಏಕಾಏಕಿ ಮೇಲೆ ಬಂದಿದೆ. ಸತತ 5 ಗಂಟೆ ಪ್ರಯತ್ನದ ಬಳಿಕ ತದ ಕಾರ್ಯಾರಂಭ ಸ್ಥಗಿತಗೊಂಡಿದ್ದು, ಇಂದು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಶುರುವಾಗಲಿದೆ. ಆದಷ್ಟು ಬೇಗ ಕ್ರಸ್ಟ್ ಗೇಟ್ ಕೂರಿಸಲು ಅನ್ನೋದು ನದಿ ತೀರದ ರೈತರ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment