/newsfirstlive-kannada/media/post_attachments/wp-content/uploads/2025/03/TUM-LADY.jpg)
ಅನುಮಾನಂ ಪೆದ್ದ ರೋಗಂ ಅಂತ ಹಿರಿಯರು ಸುಮ್ನೇ ಹೇಳಿಲ್ಲ. ಅವರಿಬ್ಬರದ್ದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ.. ಆದ್ರೆ, ಅದ್ಯಾಕೋ ಏನೋ ಆ ಪಾಪಿ ಪತಿಗೆ ಮದುವೆಯಾಗೋವರೆಗೂ ಇದ್ದ ಪ್ರೀತಿ ಮದುವೆಯಾದ್ಮೇಲೆ ಇರ್ಲಿಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಡೌಟ್ ಮೇಲೆ ಡೌಟ್ ಪಡ್ತಿದ್ದ ಪತಿರಾಯ ಪತ್ನಿ, 8 ತಿಂಗಳ ತುಂಬು ಗರ್ಭಿಣಿ ಅಂತಾನೂ ನೋಡದೇ ಆಕೆ ಜೀವ ತೆಗೆದಿರುವ ಆರೋಪ ಕೇಳಿ ಬಂದಿದೆ.
ನಗ್ಮಾ ಹಾಗೂ ಸೈಯದ್ ಅನ್ನೋರು ಮನೆಯವ್ರ ವಿರೋಧದ ನಡುವೆನೂ ಪ್ರೀತಿಸಿ ಮದುವೆಯಾಗಿದ್ದರು. ಇನ್ನೊಂದು ವಿಚಾರ ಅಂದರೆ ಇಬ್ಬರದ್ದೂ ಸೆಕೆಂಡ್ ಮ್ಯಾರೇಜ್. ಸಂಸಾರ ಏನೋ ಸುಖವಾಗಿತ್ತು. ಆದ್ರೆ, ಅದ್ಯಾಕೋ ಏನೋ ಗೊತ್ತಿಲ್ಲ.. ಈ ನಗ್ಮಾ ಇದೀಗ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: ಬಿಗ್ಬಾಸ್ ಖ್ಯಾತಿಯ ದೀಪಿಕಾ ದಾಸ್ ಮದುವೆ ವಾರ್ಷಿಕೋತ್ಸವ.. ಕ್ಯೂಟ್ ವಿಡಿಯೋ ಇಲ್ಲಿದೆ!
ಕಲ್ಪತರು ನಾಡು ತುಮಕೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದುಹೋಗಿದೆ. ಎಂಟು ವರ್ಷದ ಮಗನನ್ನು ಬಿಟ್ಟು, ಗರ್ಭಿಣಿ ಮಹಿಳೆ ಅನುಮಾನಾಸ್ಪದ ರೀತಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
‘ಆ’ ದಿನ ಆಗಿದ್ದೇನು?
ಅಷ್ಟಕ್ಕೂ ನಗ್ಮಾ ಹಾಗೂ ಸೈಯದ್ ಇರ್ಫಾನ್ ಇಬ್ಬರದ್ದೂ ಎರಡನೇ ಮದುವೆ. ನಗ್ಮಾಗೇ ಮೊದಲ ಪತಿಯಿಂದ 8 ವರ್ಷದ ಮಗನಿದ್ದಾನೆ. ಆದರೆ, ಮದುವೆಯಾದ ಕೆಲ ದಿನಗಳಲ್ಲೇ ಸೈಯದ್ ಹೆಂಡತಿಗೆ ಕಿರುಕುಳ ಕೊಡ್ತಿದ್ನಂತೆ. ಹೀಗೆ ಸದಾ ಹೆಂಡತಿಯ ವಿರುದ್ಧ ಸಂಶಯ ಹೊರಹಾಕಿ ಕಿರುಕುಳ ನೀಡ್ತಿದ್ದನಂತೆ.. ಅದೇ ರೀತಿ ಮೊನ್ನೆ ಕೂಡ ಇಬ್ಬರ ನಡುವೆ ಜಗಳ ನಡೆದಿದೆ.. ನಗ್ಮಾ ಫಂಕ್ಷನ್ಗೆ ಹೋಗಿ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾಳೆ. ಇದನ್ನೇ ದೊಡ್ಡದು ಮಾಡಿದ ಪತಿರಾಯ ಮಗನ ಎದುರೇ ಹೆಂಡತಿ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಹೆಂಡತಿ ಕಿರುಚದಂತೆ ಮನಬಂದಂತೆ ಥಳಿಸಿ ಬಾಯಿಗೆ ಮಣ್ಣು ಹಾಕಿದ್ದಾನಂತೆ.
ಇದನ್ನೂ ಓದಿ: ಪಾಸ್‌ಪೋರ್ಟ್‌ಗೆ ಜನನ ಪ್ರಮಾಣಪತ್ರವೇ ಆಧಾರ.. ದೇಶಾದ್ಯಂತ ಹೊಸ ಕಾನೂನು ಜಾರಿ!
ಪತ್ನಿ ಮೇಲಿನ ಅನುಮಾನದಿಂದ ಎಂಟು ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನ ಪಾಪಿ ಪತಿರಾಯನೇ ನೇಣು ಬಿಗಿದು ಕೊಲೆಗೈದಿದ್ದಾನೆಂದು ನಗ್ಮಾ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತದೇಹವನ್ನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ನೀಡಲಾಯ್ತು.. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು..
ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನು ನಗ್ಮ ಪತಿ ಸೈಯದ್ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಪೊಲೀಸರ ತನಿಖೆಯ ಬಳಿಕವಷ್ಟೇ ಪ್ರಕರಣದ ಬಗ್ಗೆ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.
ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹುಡುಗಿ ಜನ್ಮದಿನಾಂಕ ಕಡ್ಡಾಯ.. ಸರ್ಕಾರದ ಆದೇಶ! ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ