ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಆರೋಪ; ಪ್ರಕರಣದ ತನಿಖೆಗೆ ಟ್ವಿಸ್ಟ್​..!

author-image
Ganesh
Updated On
ಪತಿ, ಪತ್ನಿ ಮತ್ತು ಗಗನಸಖಿಯರು.. ಅಸ್ಮಾ ಸಾವಿಗೂ 2 ದಿನ ಮೊದಲು ಏನೆಲ್ಲ ನಡೆಯಿತು..?
Advertisment
  • ಹೆಬ್ಬಾಳ ಪೊಲೀಸರಿಂದ ಆರೋಪಿ ಬಂಧನ
  • ಬಶೀರ್​ ವುಲ್ಲಾ​ನನ್ನ​ ಬಂಧಿಸಿ ತೀವ್ರ ವಿಚಾರಣೆ
  • ಆತ್ಮಹತ್ಯೆ ಅಲ್ಲ, ಕೊಲೆ ಎಂದಿರುವ ಅಸ್ಮಾ ಕುಟುಂಬ

ನಿನ್ನೆ ಇಡೀ ಬೆಂಗಳೂರು ಮಾತ್ರವಲ್ಲದೇ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಅದಕ್ಕೆ ಕಾರಣ ಖಾಸಗಿ ಏರ್​ಲೈನ್ಸ್ ಸಿಬ್ಬಂದಿ ಬಷೀರ್ ವುಲ್ಲ ಅವರ ಪತ್ನಿ ಅಸ್ಮಾ (29) ಸಾವು ಪ್ರಕರಣ. ಇದೀಗ ಹೆಬ್ಬಾಳ ಪೊಲೀಸರು ಆರೋಪಿ ಬಷೀರ್​ನನ್ನು ಬಂಧಿಸಿದ್ದಾರೆ. ಆ ಮೂಲಕ ಪ್ರಕರಣ ತನಿಖೆಯು ಹೊಸ ತಿರುವು ಪಡೆದುಕೊಂಡಿದೆ.

ಇನ್ನು, ಯುವತಿಯರ ಜೊತೆ ಪತಿ ಬಶೀರ್ ಅಕ್ರಮ ಸಂಬಂಧ ಆರೋಪ ಬಶೀರ್​ ಸೇರಿ 7 ಜನರ ವಿರುದ್ಧ ಅಸ್ಮಾ ಕುಟುಂಬಸ್ಥರು ದೂರು ದಾಖಲಿಸಿದ್ದರು. ಅಸ್ಮಾ ತಂದೆ ಜಮೀರ್ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಬಶೀರ್​​ ಅನೈತಿಕ ಸಂಬಂಧಕ್ಕೆ ಆತನ ಪೋಷಕರ ಸಹಕಾರ ನೀಡಿದ್ರು ಅಂತಾನೂ ಆರೋಪಿಸಲಾಗಿದೆ. ಚಿತ್ರಹಿಂಸೆ ಕೊಟ್ಟಿದ್ದರಿಂದ ಆತ್ಮಹತ್ಯೆ ಅಂತ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಯಶ್​, ರಾಧಿಕಾ ಪಂಡಿತ್ ನಟಿಸಿದ್ದ​ ಸೂಪರ್​ ಹಿಟ್​ ಧಾರಾವಾಹಿ ಮತ್ತೆ ತೆರೆಗೆ..! ಯಾವುದು ಆ ಹೊಸ ಕಥೆ?

ಪತಿ ಬಶೀರ್​ ಬಂಧನ

ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್​ಲೈನ್ಸ್​ ಸಿಬ್ಬಂದಿ ಹಾಗೂ ಏರ್​ಲೈನ್ಸ್​​​ನ ಕ್ರೂ ಮೆಂಬರ್ಸ್​ಗೆ ಬಶೀರ್ ಟ್ರೈನಿಂಗ್ ಕೊಡ್ತಿದ್ದ. ಬೇರೆ ಯುವತಿಯರ ಜೊತೆ ಬಶೀರ್ ಅಕ್ರಮ ಸಂಬಂಧ ಆರೋಪ ಹೊತ್ತಿದ್ದ ಆರೋಪಿ ಮೇಲೆ ಟ್ರೈನಿಂಗ್​​ಗೆ ಬರ್ತಿದ್ದ ಗಗನಸಖಿಯರ ದುರುಪಯೋಗದ ಶಂಕೆ ವ್ಯಕ್ತವಾಗಿದೆ. ಮೊಬೈಲ್​ನಲ್ಲಿ ಗಗನಸಖಿಯರ ಜೊತೆ ಲವ್ವಿಡವ್ವಿ ಹಾಗೂ ಪೋಲಿ ಮೆಸೇಜ್​ ಕಳಿಸಿದ್ದ. ಅಲ್ಲದೆ ಒಬ್ಬಳ ಜೊತೆ ಮೂರು ವರ್ಷ ಲಿವಿಂಗ್​ ರಿಲೇಶನ್​ಶಿಪ್​ನಲ್ಲಿದ್ದನಂತೆ. ಆಕೆಯೂ ಅಸ್ಮಾಗೆ ಕರೆ ಮಾಡಿ, ಬಶೀರ್ ಸರಿಯಿಲ್ಲ ಅಂತ ಹೇಳಿದ್ದಳಂತೆ. ಇದೇ ವಿಚಾರಕ್ಕೆ ಪತಿ-ಪತ್ನಿ ಮಧ್ಯೆ ಹಲವು ಬಾರಿ ಜಗಳವಾಗಿತ್ತು. ಗಂಡನ ನಡೆ ಬಗ್ಗೆ ಮನನೊಂದು ಅಸ್ಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದ್ರೆ ಆಕೆಯ ಕುಟುಂಬಸ್ಥರು ಗಂಡನೇ ಕೊಲೆ ಮಾಡಿದ್ದಾನೆಂದು ದೂರು ನೀಡಿದ್ದಾರೆ.

ಒಟ್ಟಾರೆ ಮೊನ್ನೆ ನೇಣು ಬಿಗಿದ ಸ್ಥಿತಿಯಲ್ಲಿ ಬಾಹರ್ ಅಸ್ಮಾ ಶವ ಪತ್ತೆಯಾಗಿತ್ತು. ಕಳೆದ ರಾತ್ರಿ ಆರೋಪಿ ಪತಿ ಬಶೀರ್​ನನ್ನ​ ಬಂಧಿಸಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಹೀನಾಯ ಸ್ಥಿತಿಗೆ ತಲುಪಿದ ಚೆನ್ನೈ ಸೂಪರ್ ಕಿಂಗ್ಸ್​.. ಫಿನಿಷರ್ ಪಾತ್ರ ನಿರ್ವಹಿಸುವಲ್ಲಿ ಧೋನಿ ಮತ್ತೆ ಫೇಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment