2ನೇ ಮದುವೆ ಆಗ್ತಿದ್ದ ಭಂಡನಿಗೆ ಚಪ್ಪಲಿ ಏಟು.. ರಣರಂಗವಾದ ಕಲ್ಯಾಣ ಮಂಟಪ; ಅಸಲಿಗೆ ಆಗಿದ್ದೇನು?

author-image
admin
2ನೇ ಮದುವೆ ಆಗ್ತಿದ್ದ ಭಂಡನಿಗೆ ಚಪ್ಪಲಿ ಏಟು.. ರಣರಂಗವಾದ ಕಲ್ಯಾಣ ಮಂಟಪ; ಅಸಲಿಗೆ ಆಗಿದ್ದೇನು?
Advertisment
  • ವರದಕ್ಷಿಣೆ ದುರಾಸೆಗಾಗಿ 2ನೇ ಮದುವೆ ಆಗಯಾಗಲು ಸಿದ್ಧನಾಗಿದ್ದ
  • ಮದುವೆ ಮಂಟಪದಲ್ಲೇ ದುರ್ಗೆ ಅವತಾರ ತಾಳಿ, ಧರ್ಮದೇಟು ಕೊಟ್ಟ ಪತ್ನಿ
  • ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ದೊಡ್ಡ ಹೈಡ್ರಾಮ

ಚಿತ್ರದುರ್ಗ: ಮದುವೆ ಆಗಲು ಹುಡುಗರಿಗೆ ಹೆಣ್ಣೇ ಸಿಗ್ತಿಲ್ಲ ಅನ್ನೋ ಕಾಲ ಇದು. ಕೆಲವರಿಗಂತೂ ಮದುವೆ ಆಗೋದೇ ದೊಡ್ಡ ಮಾತಾಗಿದೆ. ಆದರೆ ಇಲ್ಲೊಬ್ಬ ಭೂಪ ಮೊದಲೇ ಮದುವೆಯಾಗಿದ್ದರೂ ಕೂಡ ವರದಕ್ಷಿಣೆ ದುರಾಸೆಗಾಗಿ 2ನೇ ಮದುವೆ ಆಗಯಾಗಲು ಸಿದ್ಧವಾಗಿ ಇನ್ನೇನು ಹಸೆಮಣೆ ಏರಬೇಕು ಅನ್ನುವಷ್ಟರಲ್ಲಿ ಇಡೀ ಚಿತ್ರಣವೇ ಬದಲಾಗಿ ಹೋಗಿದೆ.

ವರದಕ್ಷಿಣೆ ದುರಾಸೆಗೆ 2ನೇ ಮದುವೆಯಾಗ್ತಿದ್ದ ಪತಿಗೆ ಗೂಸಾ!
ಪತಿಗೂ ಚಪ್ಪಲಿ ಸೇವೆ, ಪತಿ ಮನೆಯವರಿಗೂ ಧರ್ಮದೇಟು
ಮುದ್ದಾದ ಪತ್ನಿ ಇದ್ದರೂ ವರದಕ್ಷಿಣೆಯ ದುರಾಸೆಗಾಗಿ ಕದ್ದು ಮುಚ್ಚಿ ಹೆಸರು ಬದಲಿಸಿಕೊಂಡು 2ನೇ ಮದುವೆ ಆಗಲು ಮುಂದಾಗಿದ್ದ ಪತಿಗೆ ಚಿತ್ರದುರ್ಗದಲ್ಲಿ ಪತ್ನಿ ದುರ್ಗಿಯ ಅವತಾರ ತಾಳಿ, ಧರ್ಮದೇಟು ನೀಡಿದ್ದಾಳೆ. ಇದರಿಂದ ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ.

publive-image

ಕಲ್ಯಾಣ ಮಂಟಪದಲ್ಲಿ ಕದನ
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮುಶೇನಾಳ ಗ್ರಾಮದ ತನುಜಾ ಮತ್ತು ಹಾಸನ ಜಿಲ್ಲೆ ಅರಸೀಕೆರೆಯ ತಿಪ್ಪಘಟ್ಟ ಗ್ರಾಮದ ಕಾರ್ತಿಕ್ ನಾಯ್ಕ್ ನಡುವೆ 4 ವರ್ಷದ ಹಿಂದೆಯೇ ಮದುವೆ ಆಗಿತ್ತು. ಮದುವೆ ಆದ ಬಳಿಕ ವರದಕ್ಷಿಣೆ ತರುವಂತೆ ಪತ್ನಿ ತನುಜಾಗೆ ಪೋಷಕರ ಜೊತೆ ಸೇರಿ ಚಿತ್ರ ಹಿಂಸೆ ಕೊಡ್ತಿದ್ನಂತೆ. ಇದೀಗ ವರದಕ್ಷಿಣೆಗಾಗಿ ಯಾರಿಗೂ ಗೊತ್ತಾಗದಂತೆ ಕಾರ್ತಿಕ್​ ಚಿತ್ರದುರ್ಗದಲ್ಲಿ 2ನೇ ಮದುವೆಗೆ ಸಿದ್ಧವಾಗಿದ್ದ. ಆದ್ರೆ ಈ ವಿಷ್ಯ ಹೇಗೋ ಮೊದಲ ಪತ್ನಿಗೆ ಗೊತ್ತಾಗಿದ್ದು, ಕೂಡಲೇ ಕುಟುಂಬಸ್ಥರ ಜೊತೆ ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ. ಆಗ ಕಲ್ಯಾಣ ಮಂಟಪದಲ್ಲಿ ವಾತಾವರಣವೇ ಚೇಂಜ್​ ಆಗಿ ಹೋಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಚೀಟಿ ಪಂಗನಾಮ; ಇಡೀ ಏರಿಯಾ ಜನರನ್ನು ನಂಬಿಸಿ ರಾತ್ರೋರಾತ್ರಿ ಎಸ್ಕೇಪ್‌ 

ಹಸಮಣೆ ಹೇರಲು ಸಿದ್ಧವಾಗಿದ್ದ ಪತಿ ಕಾರ್ತಿಗೆ ಪತ್ನಿ ತನುಜಾ ಹಾಗೂ ಕುಟುಂಬಸ್ಥರು ಸೇರಿಕೊಂಡು ಚಪ್ಪಲಿ ಸೇವೆ ಮಾಡಿದ್ದಾರೆ. ಕೇವಲ ಆರೋಪಿ ಕಾರ್ತಿಕ್​ಗೆ ಮಾತ್ರವಲ್ಲ ಕಾರ್ತಿಕ್​ ಕುಟುಂಬಸ್ಥರಿಗೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ನೋಡ ನೋಡ್ತಿದ್ದಂತೆ ಮದುವೆ ಮನೆ ರಣಾಂಗಣವಾಗಿದೆ. ಸದ್ಯ ಅನ್ಯಾಯಕ್ಕೊಳಗಾದ ಮೊದಲ ಪತ್ನಿ ತನುಜಾ ತನಗೆ ನ್ಯಾಯಬೇಕೆಂದು ಆಗ್ರಹಿಸಿದ್ದಾಳೆ.

publive-image

ಆರೋಪಿ ಕಾರ್ತಿಕ್​ ಈ ಹಿಂದೆಯೂ ಒಂದು ಹುಡುಗಿಯನ್ನು ಪ್ರೀತಿಸಿ ಕೈ ಕೊಟ್ಟಿದ್ನಂತೆ ಬಳಿಕ ಕಾಡಿಬೇಡಿ ತನುಜಾಳನ್ನು ಮದುವೆ ಆಗಿದ್ದ. ಆದ್ರೀಗ ವರದಕ್ಷಿಣೆಗಾಗಿ 2ನೇ ಮದುವೆಗೆ ಸಿದ್ದವಾಗಿದ್ದ. ಕೆಂಪುಗೆ ಬೆಳ್ಳಗೆ ಒಳ್ಳೆ ಉದ್ಯೋಗದಲ್ಲಿದ್ದಾನೆ ಎಂದು ಯಾಮಾರಿ ಹೆಣ್ಣು ಕೊಡುವುದಕ್ಕೂ ಮೊದ್ಲು.. ಯೋಚಿಸಿ ಎಂದು ಮದುವೆಗೆ ಬಂದವರು ಬುದ್ಧಿವಾದ ಹೇಳಿದ್ದಾರೆ.

ಯಾವ ತಂದೆ, ತಾಯಿಯೇ ಆಗಲಿ ಹೆಣ್ಣು ಮಕ್ಕಳನ್ನ ಮದುವೆ ಮಾಡೋಕು ಮುನ್ನ ಹುಡುಗನ ಬಗ್ಗೆ ಸರಿಯಾಗಿ ವಿಚಾರಿಸಬೇಕು. ಇಲ್ಲದಿದ್ರೆ ಇಂಥ ಅನಾಹುತಗಳು ಆಗುತ್ತವೆ. ಸದ್ಯ ಮದುವೆಗೆ ತಯಾರಾಗಿದ್ದ ವಧುವಿನ ಕುಟುಂಬಸ್ಥರು ಇದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment