/newsfirstlive-kannada/media/post_attachments/wp-content/uploads/2025/06/BNG-HUSBAND-1.jpg)
ಪ್ರೀತಿ ಮಾಡಬಾರದು ಮಾಡಿದರೆ ಜಗತ್ತಿಗೆ ಹೆದರಬಾರದು ಅಂತ ಪ್ರೀತಿಯನ್ನ ಗೆದ್ದು ಮದುವೆಯಾಗಿದ್ದ ಜೋಡಿ ಬದುಕಿನ ಬಂಡಿ ಸಾಗಿಸೋದ್ರಲ್ಲಿ ಸೋತಿದೆ. ಕಣ್ಣಲ್ಲಿ ಕಣ್ಣಿಟ್ಟು ಕಾಪಾಡ್ತಿದ್ದ ಪತಿ ಬಾಳಲ್ಲಿ ಚೆಲ್ಲಾಟವಾಡಿ ಪ್ರಿಯತಮನ ಜೊತೆ ಚೆಲ್ಲಾಟವಾಡಿದ ಪತ್ನಿಯನ್ನ ಪತಿಯೇ ಕೈಲಾಸಕ್ಕೆ ಸೇರಿಸಿದ್ದಾನೆ.
ಪ್ರೀತಿಸಿ ಮದುವೆಯಾಗಿ ಪುಟ್ಟದೊಂದು ಗೂಡು ಕಟ್ಟಿಕೊಂಡು ಬದುಕುತ್ತಿದ್ದ ಜೋಡಿ ಇದು.. ಈ ಒಲವಿಗೆ ಉಡುಗೊರೆ ಎಂಬಂತೆ ಪುಟ್ಟದೊಂದು ಮಗವೂ ಇತ್ತು.. ಆದ್ರೆ ಪರಸಂಗದಾಟಕ್ಕೆ ದಾಸಿಯಾದ ಪತ್ನಿಯಿಂದ ಒಂದೇ ಒಂದೇ ಕ್ಷಣದಲ್ಲಿ ಈ ಪುಟ್ಟ ಸಂಸಾರ ಸೂತ್ರ ಹರಿದ ಗಾಳಿ ಪಟದಂತಾಗಿದೆ.
ಪತಿಗೆ ಪ್ರಾಣ ಸಂಕಟ
ಶಂಕರ್ ಎಂಬಾತ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಪತ್ನಿ ಮಾನಸ ಮತ್ತು ಮಗುವಿನೊಂದೊಗೆ ವಾಸ ಮಾಡ್ತಿದ್ದ. ಆದ್ರೆ ಇವತ್ತು ಪೊಲೀಸ್ ಸ್ಟೇಷನ್ಗೆ ಈ ಶಂಕರ್ ಎಂಟ್ರಿಕೊಟ್ಟ ರೀತಿ ಪೊಲೀಸರನ್ನೇ ತಬ್ಬಿಬ್ಬಾಗಿಸಿತ್ತು. ಪತ್ನಿ ರುಂಡವನ್ನೇ ಚಂಡಾಡಿ ಅದನ್ನ ಕೈನಲ್ಲಿ ಹಿಡಿದು ಠಾಣೆಗೆ ಬಂದ ಈತನ ಕಂಡು ಪೊಲೀಸರೇ ಶಾಕ್ ಆಗಿದ್ದರು.
ಇದನ್ನೂ ಓದಿ: ಕಮಲ್ ಹಾಸನ್ ಬಳಿಕ ರಾಮ್ ಗೋಪಾಲ್ ವರ್ಮಾ ಕನ್ನಡ ವಿರೋಧಿ ಹೇಳಿಕೆ; ಗೋಲ್ಡನ್ ಸ್ಟಾರ್ ಗಣೇಶ್ ತಿರುಗೇಟು
ಹೆಂಡತಿ ರುಂಡ ಚೆಂಡಾಡಿದ ಗಂಡ!
ಕೆಲ ವರ್ಷಗಳ ಹಿಂದೆ ಮೃತ ಮಾನಸ ಹಾಗೂ ಶಂಕರ್ ಇಬ್ರು ಪ್ರೀತಿಸಿ ಮದುವೆ ಆಗಿದ್ರು. ತಿಂಗಳ ಹಿಂದೆ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಮಾನಸ ಹಾಗೂ ಶಂಕರ್ ಶಿಫ್ಟ್ ಆಗಿದ್ರು. ಇದೇ ತಿಂಗಳು 2ನೇ ತಾರೀಖಿನಂದು ರಾತ್ರಿ ಕೆಲಸ ನಿಮಿತ್ತ ತೆರಳಿದ್ದ ಪತಿ ಶಂಕರ್, ಪತ್ನಿಗೆ ನಾಳೆ ಬೆಳಗ್ಗೆ ಬರುವುದಾಗಿ ಹೇಳಿದ್ದ.. ಆದರೆ ಕೆಲಸ ಬೇಗ ಮುಗಿಸಿ ಪತ್ನಿ ಒಬ್ಬಳೇ ಇದ್ದಾಳೆಂದು ತಡರಾತ್ರಿಯೇ ಮನೆಗೆ ವಾಪಸ್ ಆಗಿದ್ದ. ಈ ವೇಳೆ ಪತ್ನಿ ಮಾನಸ ಮನೆಯಲ್ಲಿ ಪ್ರಿಯಕರನ ಜೊತೆ ಚಕ್ಕಂದವಾಡ್ತಿದ್ಳು. ಪತಿ ಶಂಕರ್ ಕೈಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಳು. ಈ ವೇಳೆ ಆಕ್ರೋಶಗೊಂಡ ಶಂಕರ್ ಇಬ್ಬರ ಮೇಲೂ ಹಲ್ಲೆ ಮಾಡಿದ್ದ. ಬಳಿಕ ಇದೇ ವಿಷಯವಾಗಿ ಪತ್ನಿ ಮಾನಸ ಪದೇ ಪದೇ ಪತಿಗೆ ಟಾರ್ಚರ್ ಮಾಡುತ್ತಿದ್ದಳು. ನಿನ್ನೆ ರಾತ್ರಿಯೂ ಸಹ ಪತಿ ಮನೆಗೆ ಬಂದಾಗ ಗಲಾಟೆ ಮಾನಸ ಮಾಡಿದ್ದಳು. ಇದರಿಂದ ಆಕ್ರೋಶಗೊಂಡ ಪತಿ ಶಂಕರ್ ಆಕೆ ತಲೆ ಕಡಿದು ಠಾಣೆಗೆ ಬಂದು ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಒಟ್ನಲ್ಲಿ ಮನಮೆಚ್ಚಿದ ಪತಿ ತನ್ನ ಮನೆತುಂಬಿಸಿಕೊಂಡು ಪ್ರೀತಿಯನ್ನ ಧಾರೆ ಎರೆದ್ರೂ ಮತ್ತೊಬ್ಬನ ಸಹವಾಸ ಮಾಡಿದ ಮಾನಸ ಪ್ರಾಣವನ್ನೇ ಕಳೆಕೊಂಡಿದ್ದಾಳೆ. ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ಸಾವಿನ ಮನೆ ಸೇರಿದ ತಾಯಿ, ಜೈಲು ಪಾಲಾದ ತಂದೆ ಮಧ್ಯೆ ಈ ಪುಟ್ಟ ಕಂದಮ್ಮ ಅನಾಥವಾಗಿದೆ.
ಇದನ್ನೂ ಓದಿ: ಗೋಯೆಂಕ ಮತ್ತೆ ಗರಂ.. ಪಂತ್ ಒಬ್ಬರೇ ಅಲ್ಲ LSGಯಲ್ಲಿ ಮೂವರ ತಲೆದಂಡ ಪಕ್ಕಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ