ಅಮ್ಮ ಕೊಟ್ಟ ಊಟ ಕೂಡ ಮಾಡದೆ ಮಗ ನೇಣಿಗೆ ಶರಣು.. ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಆತ್ಮಹತ್ಯೆ ಶಂಕೆ..

author-image
Ganesh
Updated On
ಅಮ್ಮ ಕೊಟ್ಟ ಊಟ ಕೂಡ ಮಾಡದೆ ಮಗ ನೇಣಿಗೆ ಶರಣು.. ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಆತ್ಮಹತ್ಯೆ ಶಂಕೆ..
Advertisment
  • ಫ್ಯಾನಿಗೆ ನೇಣು ಬಿಗಿದು ಕೊಂಡು ಗೋವರ್ಧನ್ ಸೂಸೈಡ್
  • ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ?
  • ಬೆಂಗಳೂರಿನ ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಘೋರ ಘಟನೆ

ಇರೋದಕ್ಕೆ ಸ್ವಂತ ಮನೆ. ಚಂದದ ಪತ್ನಿ.. ಮುದ್ದಾದ 2 ಮಕ್ಕಳು.. ತನ್ನ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಒಳ್ಳೆ ಬ್ಯುಸಿನೆಸ್​.. ಎಲ್ಲವೂ ಚೆನ್ನಾಗಿತ್ತು ಅಂತಾ ಹೊರ ಪ್ರಪಂಚಕ್ಕೆ ಕಾಣ್ತಿದ್ರೂ ಮನೆಯೊಳಗೆ ಗಲಾಟೆಯ ಗೂಡು ಕಟ್ಟಿತ್ತು. ಪತಿ-ಪತ್ನಿ ನಡುವೆ ಕಲಹ ಕಾಮನ್ ಆಗ್ಬಿಟ್ಟಿತ್ತು. ಈ ಗಲಾಟೆಯಿಂದ ದೊಡ್ಡ ಅನಾಹುತ ನಡೆದು ಹೋಗಿದೆ.

ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಪತಿ ದುಡುಕಿನ ನಿರ್ಧಾರ?

ಹೆಸರು ಗೋವರ್ಧನ್ ಮತ್ತು ಪ್ರಿಯಾ. ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದ ಈ ಜೋಡಿಗೆ ಇಬ್ಬರು ಮಕ್ಕಳು.. ಬೆಂಗಳೂರಿನ ಕೆ.ಪಿ ಅಗ್ರಹಾರದಲ್ಲಿರುವ 12ನೇ ಕ್ರಾಸ್​ನಲ್ಲಿರುವ ಸ್ವಂತ ಮನೆಯಲ್ಲಿ ವಾಸವಾಗಿದ್ರು. ಮೂರಂತಸ್ತಿನ ಮನೆಯಲ್ಲಿ ಕೆಳ ಮಹಡಿಯಲ್ಲಿ ಗೋವರ್ಧನ್ ತಾಯಿ ಮತ್ತು ತಮ್ಮ ವಾಸವಿದ್ರೆ 3ನೇ ಮಹಡಿಯಲ್ಲಿ ಗೋವರ್ಧನ್ ದಂಪತಿ ಇದ್ರು. ಜೀವನಕ್ಕೇನು ತೊಂದರೆ ಇರ್ಲಿಲ್ಲ. ಆದ್ರೆ ಬರ್ತಿರೋ ಸಂಬಳ ಸಾಲ್ತಿಲ್ಲ, ಮನೆಗೆ ಕುಡಿದು ಬರ್ತಿಯಾ ಅಂತಾ ಪತ್ನಿ ಆಗಾಗ ಗಲಾಟೆ ಮಾಡ್ತಿದ್ದಳಂತೆ..

ಮನೆಯಲ್ಲಿ ಗಲಾಟೆ ಮಾಡ್ತಿದ್ದ ಪತ್ನಿ ಪದೇ ಪದೇ ತನ್ನ ತವರು ಮನೆಗೆ ಹೋಗ್ತಿದ್ದಳಂತೆ.. ಅದೇ ರೀತಿ ಒಂದು ತಿಂಗಳ ಹಿಂದೆ ಕೂಡ ಗಲಾಟೆ ಆಗಿ ಪತ್ನಿ ಮನೆ ಬಿಟ್ಟು ತವರು ಮನೆ ಸೇರಿದ್ದಳು. ಇಬ್ಬರು ಮಕ್ಕಳನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಿದ್ಳು. ಅದೇ ನೋವಿನಲ್ಲಿದ್ದ ಗೋವರ್ಧನ್ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ. ಕೆಲಸ ಮುಗಿಸಿ ಬಂದವನಿಗೆ ಸಂಜೆ ತಾಯಿ ಅಡುಗೆ ಮಾಡಿ ತಟ್ಟೆಯಲ್ಲಿ ಅನ್ನ ಹಾಕಿ ಕೊಟ್ಟಿದ್ರು. ಊಟ ಕೂಡ ಮಾಡದೇ ಆತ, ಫ್ಯಾನಿಗೆ ನೇಣು ಬಿಗಿದುಕೊಂಡು ಜೀವ ತೆಗೆದುಕೊಂಡಿದ್ದಾನೆ.
ನಿನ್ನೆ ಬೆಳಗ್ಗೆ ಎದ್ದು ಎಲ್ಲರು ತಮ್ಮ ತಮ್ಮ ಕೆಲಸಕ್ಕೆ ಹೋಗಿದ್ರು. ಫೋನ್ ಮಾಡಿದ್ರೂ ಗೋವರ್ಧನ್ ಕರೆ ಸ್ವೀಕರಿಸ್ತಿರಲಿಲ್ಲ ಹಾಗಾಗಿ ಸಂಜೆ 4 ಗಂಟೆಗೆ ಬಂದು ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಅಗಿತ್ತು. ಎಷ್ಟು ಬಡಿದರೂ ತೆರೆಯದೇ ಇದ್ದಾಗ ಬಾಗಿಲು ಒಡೆದು ಒಳ ಹೋಗಿದ್ದಾರೆ. ಅಗ ಘನಘೋರ ದೃಶ್ಯ ಕಂಡಿದೆ..

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment