/newsfirstlive-kannada/media/post_attachments/wp-content/uploads/2025/05/belagavi1.jpg)
ಬೆಳಗಾವಿ: ಹೆಂಡತಿ ಕಾಟಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಪತಿ ಪ್ರಾಣಬಿಟ್ಟಿರೋ ಘಟನೆ ಅನಗೋಳದ ಶಿವಶಕ್ತಿ ಕಾಲನಿಯಲ್ಲಿ ನಡೆದಿದೆ. ಸುನೀಲ ಮೂಲಿಮನಿ (33) ಮೃತ ದುರ್ದೈವಿ.
ಇದನ್ನೂ ಓದಿ:ಭಾರೀ ಮಳೆ.. ಕರ್ನಾಟಕದ ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ..
ಸುನೀಲ ಮೂಲಿಮನಿ ಬೆಳಗಾವಿಯ ಅನಗೋಳದ ಶ್ರೀರಾಮ ಕಾಲನಿ ನಿವಾಸಿ. ನಾಲ್ಕು ವರ್ಷಗಳ ಹಿಂದೆ ಪೂಜಾ ಎಂಬಾಕೆ ಜೊತೆಗೆ ಮದುವೆಯಾಗಿದ್ದ. ಹೀಗಾಗಿ ಪತ್ನಿ ಹಾಗೂ ಪುತ್ರಿ ಜೊತೆಗೆ ಪ್ರತ್ಯೇಕವಾಗಿ ವಾಸವಿದ್ದ. ಶಿವಶಕ್ತಿ ನಗರದ ಬಾಡಿಗೆ ಅಂಗಡಿ ಪಡೆದು ಕಂಪ್ಯೂಟರ್ ರಿಪೇರಿ ಮಾಡ್ತಿದ್ದ. ಆದ್ರೆ, My Wife Reason For My Death ಎಂದು ಬರೆದಿಟ್ಟು ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದಾರೆ. ಈ ಸಂಬಂಧ ಬೆಳಗಾವಿಯ ಉದ್ಯಮಭಾಗ ಠಾಣೆಯಲ್ಲಿ ಸುನೀಲ ಪತ್ನಿ ಪೂಜಾ ವಿರುದ್ಧ ದೂರು ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ