ಪತ್ನಿಯನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಬೆಂಗಳೂರಿಂದ ಎಸ್ಕೇಪ್ ಆದ ಪತಿ.. ಆಮೇಲೆ ಏನೇನಾಯ್ತು?

author-image
admin
Updated On
ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ.. ಪತ್ನಿಯನ್ನು ತುಂಡು, ತುಂಡು ಮಾಡಿ ಸೂಟ್‌ಕೇಸ್‌ಗೆ ತುಂಬಿದ ಪತಿ!
Advertisment
  • ದೊಡ್ಡ ಕಮ್ಮನಹಳ್ಳಿಯ ಮನೆಯಲ್ಲಿ ಪತ್ನಿಯ ಕೊಂದ ಟೆಕ್ಕಿ ರಾಕೇಶ್
  • ಪಾಪಿ ಪತಿಯೇ ಪೊಲೀಸರಿಗೆ ತನ್ನ ಬಗ್ಗೆ ಸುಳಿವು ನೀಡಿ ಸಿಕ್ಕಿಬಿದ್ದ
  • ಬೆಂಗಳೂರು ಪೊಲೀಸರಿಗೆ ಪಾಪಿ ಪತಿ ಸಿಕ್ಕಿದ್ದೇ ರೋಚಕ ಸ್ಟೋರಿ

ಬೆಂಗಳೂರು: ಇದೇ ಮಾರ್ಚ್ 27ರಂದು ದೊಡ್ಡ ಕಮ್ಮನಹಳ್ಳಿಯ ಮನೆಯಲ್ಲಿ ಭಯಾನಕ ಕೃತ್ಯ ಬೆಳಕಿಗೆ ಬಂದಿತ್ತು. ಹುಳಿಮಾವು ಪೊಲೀಸರು ಮನೆಯ ಬಾಗಿಲು ತೆರೆದು ನೋಡಿದಾಗ ಸೂಟ್‌ಕೇಸ್‌ನಲ್ಲಿ ಗೌರಿ ಅನ್ನೋ ಮಹಿಳೆಯ ತುಂಡು, ತುಂಡಾದ ದೇಹ ಪತ್ತೆಯಾಗಿತ್ತು. ಗೌರಿ ಸಾವಿನ ತನಿಖೆ ಬೆನ್ನತ್ತಿ ಹೋದ ಬೆಂಗಳೂರು ಪೊಲೀಸರಿಗೆ ಪಾಪಿ ಪತಿ ಸಿಕ್ಕಿದ್ದೇ ರೋಚಕ ಸ್ಟೋರಿ ಆಗಿದೆ.

ದೊಡ್ಡ ಕಮ್ಮನಹಳ್ಳಿಯ ಮನೆಯಲ್ಲಿ ಪತ್ನಿಯನ್ನು ಕೊಂದು ಸೂಟ್​ಕೇಸ್​ನಲ್ಲಿ ತುಂಬಿದ್ದ ಕೇಸ್‌ನ ಇಂಚಿಂಚೂ ಮಾಹಿತಿ ಇದೀಗ ಬಯಲಾಗುತ್ತಿದೆ. ಹೆಂಡತಿಯನ್ನು ಬರ್ಬರವಾಗಿ ಕೊಂದಿದ್ದ ಪಾಪಿ ಪತಿಯೇ ಪ್ರಕರಣದ ಸುಳಿವು ಕೊಟ್ಟಿದ್ದ. ಬೆಂಗಳೂರಲ್ಲಿ ಪತ್ನಿಯನ್ನು ಕೊಂದ ರಾಕೇಶ್‌ ತಾನು ಜಿರಳೆ ಔಷಧ ಸೇವಿಸಿ ಸಾವಿಗೆ ಯತ್ನಿಸಿದ್ದ. ಆದರೆ ಪೊಲೀಸರ ಸಮಯ ಪ್ರಜ್ಞೆಯಿಂದ ಗಂಡನ ಜೀವ ಉಳಿದಿದೆ.

ಪಾಪಿ ಪತಿಯ ಸೆರೆಯಾಗಿದ್ದು ಹೇಗೆ?
ಪೊಲೀಸರು ಹೆಂಡತಿಯನ್ನು ಕೊಂದು ಸೂಟ್​ಕೇಸ್​ನಲ್ಲಿ ತುಂಬಿದ್ದ ಟೆಕ್ಕಿ ರಾಕೇಶ್ ಕಡೇಕರ್ ಅನ್ನು ಟೆಕ್ನಿಕಲ್ ಅನಾಲಿಸಿಸ್ ಆಧರಿಸಿ ಸೆರೆ ಹಿಡಿದಿದ್ದಾರೆ. ಪತ್ನಿಯನ್ನ ಕೊಂದ ಪಾಪಿ ಪತಿಯೇ ಪೊಲೀಸರಿಗೆ ತನ್ನ ಬಗ್ಗೆ ಸುಳಿವು ನೀಡಿದ್ದ.

ಪತ್ನಿಯನ್ನು ಕೊಲೆ ಮಾಡಿದ್ದ ಟೆಕ್ಕಿ ರಾಕೇಶ್‌ ಮೊದಲಿಗೆ ತನ್ನ ಮನೆಯ ಕೆಳಗಿನ ಮನೆಯಲ್ಲಿ ವಾಸಿಸುತ್ತಿದ್ದ ಕಾರ್ಪೆಂಟರ್​ಗೆ ಕರೆ ಮಾಡಿದ್ದ. ಕಾರ್ಪೆಂಟರ್‌ಗೆ ತನ್ನ ಪತ್ನಿ ಗೌರಿ ಸೂಸೈಡ್ ಮಾಡಿಕೊಂಡಿರುವುದಾಗಿ ತಿಳಿಸಿದ್ದ. ಕೂಡಲೇ ಗಾಬರಿಗೊಂಡ ಕಾರ್ಪೆಂಟರ್‌ ಆ ಮನೆಯ ಓನರ್​ಗೆ ಸುದ್ದಿ ಮುಟ್ಟಿಸಿದ್ದ.

ಇದಿಷ್ಟೇ ಅಲ್ಲ ಕೊಲೆಯಾದ ಮಾರ್ಚ್ 26ರ ರಾತ್ರಿಯೇ ರಾಕೇಶ್‌ ಪುಣೆಗೆ ಎಸ್ಕೇಪ್ ಆಗಿದ್ದ. ರಾಕೇಶ್ ತನ್ನ ಪತ್ನಿ ಪೋಷಕರಿಗೂ ಫೋನ್ ಮಾಡಿ‌ ತಾನೇ ಕೊಂದಿದ್ದೇನೆ ಎಂದು ಹೇಳಿದ್ದಾನೆ. ಬಳಿಕ ಪೊಲೀಸ್ ಕಂಟ್ರೋಲ್ ರೂಮ್​ಗೂ ರಾಕೇಶ್ ಬ್ಯಾಕ್ ಟು ಬ್ಯಾಕ್ ಕಾಲ್ ಮಾಡಿದ್ದಾನೆ.

ಹುಳಿಮಾವು ಪೊಲೀಸರು ಟೆಕ್ನಿಕಲ್ ಅನಾಲಿಸಿಸ್ ಆಧರಿಸಿ ಆರೋಪಿಯನ್ನ ಟ್ರ್ಯಾಕ್ ಮಾಡಿದ್ದಾರೆ. ಟ್ರ್ಯಾಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ಮುಂಬೈ, ಪುಣೆ ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ. ಬೆಂಗಳೂರಲ್ಲಿ ನಡೆದಿರುವ ಕ್ರೈಂ ಬಗ್ಗೆ ಮೆಸೇಜ್ ಪಾಸ್ ಮಾಡಿ, ರಾಕೇಶ್ ಅನ್ನು ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ಸೂಟ್​ಕೇಸ್​ಗೆ ತುಂಬಿದ ನಂತರ ಕಾಡಿದ ಪಾಪ ಪ್ರಜ್ಞೆ; ಪ್ರಕರಣದ ಬಗ್ಗೆ ಡಿಸಿಪಿ ಹೇಳಿದ್ದೇನು? 

ಪತ್ನಿಯನ್ನು ಕೊಂದ ರಾಕೇಶ್‌ ಬೆಂಗಳೂರಿನಿಂದ ಪುಣೆಗೆ ಎಸ್ಕೇಪ್ ಆಗಿದ್ದ. ಆದರೆ ಪುಣೆ ಹೋಗುತ್ತಿದ್ದಂತೆ ರಾಕೇಶ್​ಗೆ ಪಶ್ಚಾತ್ತಾಪ ಕಾಡಿತ್ತು. ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಜಿರಳೆ ಔಷಧಿ ಖರೀದಿ ಮಾಡಿದ್ದ. ವಿಷ ಸೇವನೆ ಮಾಡಿದ ಮೇಲೆ ಅಸ್ವಸ್ಥನಾಗಿದ್ದ. ಬೈಕ್ ಸವಾರನೋರ್ವ ಅಸ್ವಸ್ಥನಾಗಿದ್ದವನ ಕಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ.

ಬೆಂಗಳೂರಲ್ಲಿ ಪತ್ನಿ ಕೊಂದು ಪುಣೆಯಲ್ಲಿ ರಾಕೇಶ್ ಟ್ರ್ಯಾಕ್ ಮಾಡಿ ವಶಕ್ಕೆ ಪಡೆದ ಕೂಡಲೇ ವಿಷ ಸೇವಿಸಿರುವುದು ಬೆಳಕಿಗೆ ಬಂದಿದೆ. ವಿಷ ಸೇವಿಸಿ ಅಸ್ವಸ್ಥನಾಗಿದ್ದ ರಾಕೇಶ್​ಗೆ ಪುಣೆಯ ಶಿರವಾರ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಜಿರಳೆ ಔಷಧವನ್ನ ಸೇವಿಸಿದ್ದ ರಾಕೇಶ್​ಗೆ ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಪಶ್ಚಾತ್ತಾಪದಲ್ಲಿ ಪರಿತಪಿಸುತ್ತಿರುವ ಆರೋಪಿ ರಾಕೇಶ್‌ ಇನ್ನೂ ಪತ್ನಿ ಕೊಂದದ್ದಕ್ಕೆ ಕಾರಣ ಏನು ಅನ್ನೋದನ್ನ ರಿವೀಲ್ ಮಾಡಿಲ್ಲ. ಆರೋಪಿ ಚೇತರಿಕೆ ಬಳಿಕ ಇಂದು ಬೆಂಗಳೂರಿಗೆ ಕರೆ ತಂದು ಪೊಲೀಸರು ಪತ್ನಿಯ ಕೊಲೆಗೆ ಕಾರಣ ಏನು ಅನ್ನೋದರ ಬಗ್ಗೆ ತನಿಖೆ ಕೈಗೊಳ್ಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment