Advertisment

ಐದು ಹೆಣ್ಣು ಮಕ್ಕಳು.. ಮುಂದಿನ ಮಗು ಗಂಡೋ ಹೆಣ್ಣೋ ತಿಳಿಯಲು ಮುಂದಾಗಿದ್ದ ಗಂಡನಿಗೆ ಶಾಕ್​; ಆಗಿದ್ದೇನು..?

author-image
Veena Gangani
Updated On
ಐದು ಹೆಣ್ಣು ಮಕ್ಕಳು.. ಮುಂದಿನ ಮಗು ಗಂಡೋ ಹೆಣ್ಣೋ ತಿಳಿಯಲು ಮುಂದಾಗಿದ್ದ ಗಂಡನಿಗೆ ಶಾಕ್​; ಆಗಿದ್ದೇನು..?
Advertisment
  • ಗಂಡು ಮಗುವಿನ ವಿಚಾರಕ್ಕೆ ದಂಪತಿ ನಡುವೆ ಆಗಾಗ ನಡೆಯುತ್ತಿದ್ದ ಗಲಾಟೆ
  • ಮಗುವಿನ ಲಿಂಗವನ್ನು ಪತ್ತೆ ಮಾಡಲೆಂದು ಪತ್ನಿಯ ಹೊಟ್ಟೆ ಸೀಳಿದ ಪಾಪಿ ಪತಿ
  • ಪತಿ ಯಡವಟ್ಟಿನಿಂದ ಲೋಕ ಕಾಣುವ ಮೊದಲೇ ಕಣ್ಣು ಮುಚ್ಚಿದ ಗಂಡು ಮಗು

ಲಕ್ನೋ: ಮುಂದೆ ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಅಂತ ತಿಳಿಯಲು ಗಂಡನೊಬ್ಬ ಹೆಂಡತಿಯ ಹೊಟ್ಟೆಯನ್ನೇ ಕತ್ತಿಯಿಂದ ಸೀಳಿದ್ದ ಭಯಾನಕ ಘಟನೆ ಬದೌನ್‌ ಗ್ರಾಮದಲ್ಲಿ ನಡೆದಿದೆ. ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿತ್ತು. ಈಗಾಗಲೇ ಪತ್ನಿ ಅನಿತಾಗೆ ಐದು ಹೆಣ್ಣು ಮಕ್ಕಳು ಇದ್ದರು. ಆದರೆ ಐದು ಹೆಣ್ಣು ಮಕ್ಕಳು ಇದ್ದರು ಪತಿಗೆ ಗಂಡು ಮಗು ಬೇಕೆಂಬ ಆಸೆ ಇತ್ತು.

Advertisment

publive-image

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿ ಕಾರಣವೇನು? 

ಹೀಗಾಗಿ ಇದೇ ವಿಚಾರಕ್ಕೆ ಪತಿ ಹಾಗೂ ಪತ್ನಿಯ ನಡುವೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಬೇಸರಗೊಂಡಿದ್ದ ಪತಿ ಪನ್ನಾಲಾಲ್ (38) ಅನಿತಾಗೆ ವಿಚ್ಛೇದನ ನೀಡಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದನಂತೆ. ಹೀಗೆ ಇದೇ ವಿಚಾರಕ್ಕೆ ಹೆಂಡತಿ ಗರ್ಭದಲ್ಲಿರುವ ಮಗುವಿನ ಲಿಂಗವನ್ನು ಪತ್ತೆ ಜಗಳವಾಡಿದ್ದಾರೆ. ಇದರಿಂದ ಕೋಪಗೊಂಡ ಪತಿ ಪನ್ನಾ ಲಾಲ್ ಪತ್ನಿಯ ಗರ್ಭದಲ್ಲಿ ಗಂಡು ಅಥವಾ ಹೆಣ್ಣು ಮಗುವಿದೆಯೇ ಎಂದು ಪರೀಕ್ಷಿಸಲು ಎಂಟು ತಿಂಗಳ ಗರ್ಭಿಣಿಯಾಗಿದ್ದ ಅನಿತಾಳ ಹೊಟ್ಟೆಗೆ ಹರಿತವಾದ ಕತ್ತಿಯಿಂದ ಕತ್ತರಿಸಿದ್ದಾನೆ.

ಇದನ್ನೂ ಓದಿ: ಅಪಘಾತಕ್ಕೆ ಕ್ರೆಟಾ ಕಾರು ಪುಡಿಪುಡಿ.. 15 ನಿಮಿಷ ಲಾಕ್ ಆಗಿ ತಾಯಿ-ಮಗಳು ಕಿರುಚಾಡಿದ ಹೃದಯ ವಿದ್ರಾವಕ Video 

Advertisment

publive-image

ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅನಿತಾ ಆಚೆ ಓಡಿ ಬಂದಿದ್ದಾಳೆ. ಕೂಡಲೇ ಇದನ್ನು ಗಮನಿಸಿದ ಸಹೋದರ ಅನಿತಾಳ ರಕ್ಷಣೆ ಬಂದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅನಿತಾಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಅದೃಷ್ಟವಶಾತ್ ಆಕೆ ಬದುಕುಳಿದಿದ್ದರೂ, ಆಕೆಯ ಹೊಟ್ಟೆಯಲ್ಲಿದ್ದ ಗಂಡು ಸಾವನ್ನಪ್ಪಿತ್ತು. ಅದು ಗಂಡು ಮಗುವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಇದೇ ವಿಚಾರವಾಗಿ ಅನಿತಾ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ದೂರನ್ನು ದಾಖಲಿಸಿಕೊಂಡ ಪೊಲೀಸರು ಪತಿ ಪನ್ನಾಲಾಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು 313 (ಮಹಿಳೆಯರ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಕಾರಣವಾಗುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಹೆಚ್ಚುವರಿ ಸೆಷನ್ ನ್ಯಾಯಾಧೀಶ ಸೌರಭ್ ಸಕ್ಸೇನಾ ಅವರ ನ್ಯಾಯಾಲಯದಲ್ಲಿ ಈ ವಿಷಯದ ವಿಚಾರಣೆ ನಡೆಯಿತು. ಈ ಸಂಬಂಧ ನ್ಯಾಯಾಲಯವು ಪನ್ನಾಲಾಲ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ ಆರೋಪಿಗೆ 50,000 ರೂಪಾಯಿ ನೀಡುವಂತೆ ಆದೇಶ ಹೊರಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment