Advertisment

ಮದುವೆಯಾದ ಮೇಲೂ ಮಾಜಿ ಪ್ರೇಯಸಿ ಜೊತೆ ಸಂಬಂಧ.. ಪತ್ನಿ ವಿರೋಧಿಸಿದಾಗ ಈ ಹೆಜ್ಜೆ ಇಟ್ಟ..!

author-image
Ganesh
Updated On
ಮದುವೆಯಾದ ಮೇಲೂ ಮಾಜಿ ಪ್ರೇಯಸಿ ಜೊತೆ ಸಂಬಂಧ.. ಪತ್ನಿ ವಿರೋಧಿಸಿದಾಗ ಈ ಹೆಜ್ಜೆ ಇಟ್ಟ..!
Advertisment
  • ಡೇಲಿ ಫೋನ್​​ನಲ್ಲಿ ಮಾತುಕತೆ, ಪತ್ನಿ ವಿರೋಧ
  • ಗಂಡ-ಹೆಂಡ್ತಿ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿತು
  • ಪ್ರಕರಣದ ಬಗ್ಗೆ ಪೊಲೀಸರು ನೀಡಿದ ಮಾಹಿತಿ ಏನು?

ಉತ್ತರ ಪ್ರದೇಶದ ಲಕ್ನೋದಲ್ಲಿ ವ್ಯಕ್ತಿಯೊಬ್ಬ ವಿವಾಹೇತರ ಸಂಬಂಧ ಹೊಂದಿದ್ದ. ಇದಕ್ಕೆ ಆತನ ಪತ್ನಿಯಿಂದ ತೀವ್ರ ವಿರೋಧ ಇತ್ತು. ಇದೇ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಜಗಳ ಶುರುವಾಗಿ, ಪತ್ನಿಗೆ ಮನಸೋ ಇಚ್ಛೆ ಥಳಿಸಿ ಆಲ್​ಔಟ್ ಲಿಕ್ವಿಡ್ ಕುಡಿಸಿದ್ದಾನೆ.

Advertisment

ಪರಿಣಾಮ ಆಕೆಯ ಆರೋಗ್ಯ ತೀವ್ರ ಹದಗೆಟ್ಟಿದ್ದು, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಲಕ್ನೋದ ಲವ್ಕುಶ್​ ನಗರದಲ್ಲಿ ಈ ಘಟನೆ ನಡೆದಿದೆ. ಕಾನ್ಪುರದ ಮಹಿಳೆ, 2010ರಲ್ಲಿ ಲಕ್ನೋದ ಯುವಕನೊಂದಿಗೆ ಮದುವೆಯಾಗಿದ್ದಳು. ಯುವಕ ವೃತ್ತಿಯಲ್ಲಿ ಚಾಲಕ. ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. 12 ವರ್ಷದ ಮಗಳು, 9 ವರ್ಷದ ಮಗನಿದ್ದಾನೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್.. ಚಿಕ್ಕಪ್ಪನಿಂದಲೇ ಅಣ್ಣನ ಮಗನ ಬರ್ಬರ ಕೊಲೆ

ಮದುವೆಗೂ ಮುನ್ನೆವೇ ಆರೋಪಿಗೆ ಓರ್ವ ಯುವತಿ ಜೊತೆ ಅಕ್ರಮ ಸಂಬಂಧ ಇತ್ತು. ಇದು ಮದುವೆಯ ನಂತರವೂ ಮುಂದುವರಿದಿದೆ. ಹಲವರು ಬಾರಿ ಆರೋಪಿಯ ಪತ್ನಿ ಆಕೆಯ ಫೋನ್ ನಂಬರ್ ಅನ್ನು ಮೊಬೈಲ್​​ನಿಂದ ಡಿಲೀಟ್ ಮಾಡಿದ್ದಳು. ಹೀಗಿದ್ದೂ, ಮಾತನಾಡುವುದನ್ನು ಬಿಟ್ಟಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದು ಲಿಕ್ವಿಡ್ ಕುಡಿಸಿದ್ದಾನೆ ಎಂದು ವರದಿಯಾಗಿದೆ.

Advertisment

ಪೊಲೀಸರು ಹೇಳಿದ್ದೇನು..?
ಪ್ರಕರಣದ ಬಗ್ಗೆ ನಮಗೆ ಮಾಹಿತಿ ಇದೆ. ಇನ್ನೂ ಯಾವುದೇ ದೂರು ದಾಖಲಾಗಿಲ್ಲ. ದೂರು ಬಂದ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪಾರಿವಾಳ ಉಳಿಸಲು ಹೋಗಿ ನರಳಿ ನರಳಿ ಪ್ರಾಣ ಬಿಟ್ಟ ಬಾಲಕ.. ಅಲ್ಲಿ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment