/newsfirstlive-kannada/media/post_attachments/wp-content/uploads/2025/04/wife-death.jpg)
ಬೆಂಗಳೂರು: ಪತಿ ಬೇರೆ ಯುವತಿ ಜೊತೆ ಅನೈತಿಕ ಇಟ್ಟುಕೊಂಡಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರೋ ಆರೋಪ ಹೆಬ್ಬಾಳದ ಕನಕನಗರದಲ್ಲಿ ಕೇಳಿಬಂದಿದೆ. ಬಾಹರ್ ಅಸ್ಮಾ (29 ) ನೇಣಿಗೆ ಶರಣಾದ ಪತ್ನಿ.
ಇದನ್ನೂ ಓದಿ: ಸೀರಿಯಲ್ ಮುಗಿಯುತ್ತಿದ್ದಂತೆ ಸಖತ್ ಬ್ಯುಸಿಯಾದ ಲಕ್ಷ್ಮೀ; ನಟಿ ಭೂಮಿಕಾ ರಮೇಶ್ ನೆಕ್ಸ್ಟ್ ಪ್ಲಾನ್ ಏನು?
ಕಳೆದ ಎರಡು ವರ್ಷಗಳ ಹಿಂದೆ ಬಾಹರ್ ಅಸ್ಮಾ, ಬಶೀರ್ ವುಲ್ಲಾ ಎಂಬಾತನನ್ನು ಮದುವೆ ಆಗಿದ್ದರು. ಆದರೆ ಪತಿ ಬಶೀರ್ ವುಲ್ಲಾ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದಕ್ಕೆ ಬೇಸರಗೊಂಡ ಪತ್ನಿ ಬಾಹರ್ ಅಸ್ಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಮೃತ ಬಾಹರ್ ಅಸ್ಮಾ ಅವರ ಕುಟುಂಬಸ್ಥರಿಂದ ನನ್ನ ಮಗಳ ಕೊಲೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಮಗಳನ್ನು ಕೊಲೆ ಮಾಡಿ ನೇಣಿಗೆ ಹಾಕಲಾಗಿದೆ ಅಂತಾ ಪತಿ ಬಶೀರ್ ವುಲ್ಲಾ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಘಟನೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ