ಕತ್ತು, ಅಂಗಾಗಗಳನ್ನು ಕತ್ತರಿಸಿ ಭೀಕರ ಕೊಲೆ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಗಂಡ

author-image
AS Harshith
Updated On
ಹೆಂಡತಿ ತಲೆ ಕತ್ತರಿಸಿ ಪರಾರಿಯಾಗಿದ್ದ ಕಿರಾತಕ.. ತುಮಕೂರಿನ ಬರ್ಬರ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್‌; ಆಗಿದ್ದೇನು?
Advertisment
  • ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ ಪತಿ
  • ಪತ್ನಿ, 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿದ್ದ ಗಂಡ
  • ಅಡುಗೆ ಮನೆಯಲ್ಲಿದ್ದ ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ

ತುಮಕೂರು: ತಾಳಿ ಕಟ್ಟಿದ ಪತಿಯೇ ತನ್ನ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಕುಣಿಗಲ್ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿ ಘಟನೆ ನಡೆದಿದೆ.

ಅಂಗಾಂಗಗಳನ್ನ ಕತ್ತರಿಸಿ ಭೀಕರ ಕೊಲೆ

ಗಂಡ ಶಿವರಾಮ್​ನಿಂದ ಪುಪ್ಪ (32) ಕೊಲೆಯಾಗಿದ್ದಾಳೆ. ಆಕೆಯ ಕತ್ತು ಹಾಗೂ ದೇಹದ ಅಂಗಾಂಗಗಳನ್ನ ಕತ್ತರಿಸಿ ಭೀಕರ ಕೊಲೆ ಮಾಡಲಾಗಿದೆ.

ಬಾಡಿಗೆ ಮನೆಯಲ್ಲಿ ವಾಸ

ಶಿವರಾಮ್ ಹುಲಿಯೂರುದುರ್ಗ ಬಳಿಯ ಸುಗ್ಗನಹಳ್ಳಿ ನಿವಾಸಿಯಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಪ್ಪಳನ್ನ ಮದುವೆಯಾಗಿದ್ದನು. ಹುಲಿಯೂರುದುರ್ಗ ಪಟ್ಟಣದಲ್ಲಿ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದನು.

ಇದನ್ನೂ ಓದಿ: ತಲೆ ಒಂದ್ಕಡೆ.. ದೇಹ ಒಂದ್ಕಡೆ.. ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ಯುವತಿಯ ಮೃತದೇಹ ಪತ್ತೆ

ಕ್ಷುಲ್ಲಕ ಕಾರಣಕ್ಕೆ ಗಲಾಟೆ

ಶಿವರಾಮ್ ಮರದ ಸಾಮಿಲ್​ವೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡ್ತಿದ್ದನು. ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಪತ್ನಿ ನಡುವೆ ಹಾಗಾಗ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗ್ತಿದೆ. ಗಲಾಟೆ ವಿಚಾರಕ್ಕೆ ನಿನ್ನೆ ರಾತ್ರಿ ಪತ್ನಿಯನ್ನ ಭೀಕರವಾಗಿ ಪತಿ ಶಿವರಾಮ್ ಕೊಲೆ ಮಾಡಿದ್ದಾನೆ. ತಾವು ವಾಸವಿದ್ದ ಮನೆಯ ಅಡುಗೆ ಮನೆಯಲ್ಲೇ ಪತ್ನಿಯ ಕತ್ತು ಹಾಗೂ ದೇಹದ ಅಂಗಾಂಗ ಕತ್ತರಿಸಿ ಕೊಲೆ ಮಾಡಿದ್ದಾನೆ.

publive-image

ಇದನ್ನೂ ಓದಿ: ದನ ಮೇಯಿಸಲು ಹೋದ 14 ವರ್ಷದ ಬಾಲಕ ಸಾವು; ಕೃಷಿಹೊಂಡದಲ್ಲಿ ಸಿಕ್ತು ಮೃತದೇಹ

ಪತಿ ಅರೆಸ್ಟ್​

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೈದ ಪತಿ ಶಿವರಾಮ್​ನನ್ನ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment