/newsfirstlive-kannada/media/post_attachments/wp-content/uploads/2024/01/death-2024-01-30T185826.622.jpg)
ಅವರಿಬ್ಬರದು ಲವ್ ಮ್ಯಾರೇಜ್. ಹೆಂಡತಿ ಒಳ್ಳೆ ಉದ್ಯೋಗದಲ್ಲಿದ್ರೆ, ಗಂಡ ಅಬ್ಬೆಪಾರಿಯಾಗಿ ಅಲೆದಾಡ್ತಿದ್ದ. ಕೆಲಸ ಮಾಡದೇ ಹೆಂಡತಿ ದುಡ್ಡಲ್ಲಿ ಮಜಾ ಮಾಡುತ್ತಿದ್ದ. ಒಂದ್ವೆಳೆ ಹೆಂಡತಿ ಹೋದ್ರೆ ಅವಳ ಹೆಸರಿನ ಹಣವನ್ನು ನುಂಗೋಕೆ ಪ್ಲಾನ್ ಮಾಡಿದ್ದ. ಆದ್ರೆ ಅದ್ಯಾವಾಗ ಹೆಂಡತಿ ತನನ್ನ ನಾಮಿನಿ ಮಾಡಿಲ್ಲ ಅನ್ನೋದು ಗೊತ್ತಾಯ್ತೋ ಅಷ್ಟೇ ನೋಡಿ ಪಾಪಿ ಪತಿ ಪತ್ನಿ ಉಸಿರಿಗೆ ಕೊಳ್ಳಿ ಇಟ್ಟು ಬಿಟ್ಟಿದ್ದಾನೆ. ಹಣ ಅನ್ನೋದು ಹಾಗೆ ನೋಡಿ. ಮನುಷ್ಯನ ಕೈಲ್ಲಿ ಎಂಥೆಥಾ ಕೆಲಸ ಮಾಡಿಸಿಬಿಡುತ್ತೆ. ಹಣದ ಆಸೆಗೆ ಬಿದ್ದವನು ಯಾವ ಕೆಲಸ ಮಾಡೋದಕ್ಕೂ ಹೇಸೋದಿಲ್ಲ. ಈ ಸ್ಟೋರಿಯಲ್ಲೂ ಕಿರಾತಕನೊಬ್ಬ ಹೆಂಡತಿ ಹೆಸರಿನಲ್ಲಿದ್ದ ಹಣಕ್ಕಾಗಿ ಆಸೆ ಬಿದ್ದು ತಾಳಿ ಕಟ್ಟಿದ್ದ ಮಡದಿಯನ್ನೆ ಕೊಂದು ಬಿಟ್ಟಿದ್ದಾನೆ.
ದಿಂಬಿನಿಂದ ಉಸಿರುಗಟ್ಟಿಸಿ ಪತ್ನಿ ಹತೈಗೈದ ಪಾಪಿ ಪತಿ!
ಮಹಿಳಾ ಸರ್ಕಾರಿ ಅಧಿಕಾರಿಯಾಗಿರೋ ಹೆಸರು ನಿಶಾ. 2020ರಲ್ಲಿ ನಿಶಾ ಮನೀಶ್ ಶರ್ಮಾ ಎಂಬಾತನನ್ನ ಮದುವೆಯಾಗಿದ್ರು. ದುರಂತ ಏನಂದ್ರೆ ಇಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ರು. ವೆಬ್ಸೈಟ್ ಒಂದರಲ್ಲಿ ಪರಿಚಯವಾಗಿ ಆ ಪರಿಚಯ ಪ್ರೀತಿಯಾಗಿ ಆಮೇಲೆ ಇಬ್ಬರೂ ಸಪ್ತ ಪದಿ ಕೂಡ ತುಳಿದಿದ್ರು. ನಿಶಾ ಮಧ್ಯಪ್ರದೇಶಲ್ಲಿ ಶಹಾಪುರದ ಉಪ ವಿಭಾಗೀಯದಲ್ಲಿ ಕೆಲಸ ಮಾಡ್ತಿದ್ರು. ಹುದ್ದೆಗೆ ತಕ್ಕಂತೆ ನಿಶಾಗೆ ಕೈ ತುಂಬ ಸಂಬಳ ಕೂಡ ಇತ್ತು. ಆದ್ರೆ ನಿಶಾ ಪತಿ ಮನೀಶ್ ನಿರುದ್ಯೋಗಿ. ಹೆಂಡತಿ ಹಣದಲ್ಲಿ ಮಜಾ ಮಾಡಿಕೊಂಡು ಅಬ್ಬೆಪಾರಿಯಾಗಿ ಓಡಾಡ್ತಿದ್ದ. ಇದೇ ಕಾರಣಕ್ಕೆ ನಿಶಾ ತನ್ನ ವಿಮೆ, ಬ್ಯಾಂಕ್ ಖಾತೆ ಯಾವುದ್ರಲ್ಲೂ ಮನಿಷ್ ಹೆಸರನ್ನ ನಾಮಿನಿಯಾಗಿ ಉಲ್ಲೇಖ ಮಾಡಿರಲಿಲ್ಲ.
ಇದೇ ವಿಚಾರವಾಗಿ ಇಬ್ಬರ ಮಧ್ಯೆ ಪದೇ ಪದೇ ಜಗಳವಾಗಿದೆ. ಪದೇ ಪದೇ ಆಕೆಗೆ ನಾಮಿನಿ ಮಾಡುವಂತೆ ಪೀಡಿಸಿದ್ದಾನೆ. ಆದ್ರೆ ನಿಶಾ ಮಾತ್ರ ಮನೀಶ್ ಎಷ್ಟೆ ಬಲವಂತ ಮಾಡಿದ್ರೂ ಅವನ ಮಾತಿಗೆ ತಾಳ ಹಾಕಿಲ್ಲ. ಇದು ಮನೀಷ್ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ ಹೆಂಡತಿ ಕಥೆಯನ್ನೆ ಮುಗಿಸೋಕೆ ಸ್ಕೆಚ್ ಹಾಕಿಬಿಟ್ಟಿದ್ದ. ಹೆಂಡತಿ ಹಣದಲ್ಲಿ ಆರಾಮಾಗಿ ಇದ್ದವನಿಗೆ ಅವಳಿಲ್ಲ ಅಂದ್ಮೇಲೆ ಮುಮದೇನು ಅನ್ನೋ ಯೋಚನೆ ಶುರುವಾಗಿದೆ. ಅದಕ್ಕೆ ನಾಮಿನಿಯಾಗಿ ತನ್ನ ಹೆಸರು ಹಾಕಿಲ್ಲ ಅನ್ನೋ ವಿಚಾರ ಗೊತ್ತಾಗ್ತಿದ್ದಂತೆ ಹೆಂಡತಿ ಉಸಿರು ನಿಲ್ಲಿಸೋದಕ್ಕೆ ಪಾಪಿ ಪ್ಲಾನ್ ಮಾಡಿದ್ದಾನೆ. ಅದ್ರಂತೆ ಭಾನುವಾರ ರಾತ್ರಿ ಮನೆಗೆ ಬಂದ ನಿಶಾಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿಯೇ ಬಿಟ್ಟಿದ್ದಾನೆ.
ನಿನ್ನೆ ಪದೇ ಪದೇ ಕಾಲ್ ಬರ್ತಿದ್ವು. ನಾವು ಅನಾಮಿಕ ಕಾಲ್ ಅಂತ ರಿಸೀವ್ ಮಾಡಿರಲಿಲ್ಲ. ಆಮೇಲೆ ಕಾಲ ಎತ್ತಿ ನೋಡಿದಾಗ ಪೋಲೀಸರು ನಮ್ಮ ತಂಗಿ ಕೊಲೆಯಾದ ಬಗ್ಗೆ ಮಾಹಿತಿ ನೀಡಿದ್ರು. ಈ ವಿಚಾರ ಕೇಳ್ತಿದ್ದಂತೆ ದೊಡ್ಡ ಶಾಕ್ ಆಯ್ತು. ಮನೀಷ್ ಶರ್ಮಾ ನಿರೋದ್ಯೋಗಿ. ಅವನು ಗ್ವಾಲಿಯರ್ನಲ್ಲಿ ಇರ್ತಿದ್ದ. ಶಾದಿ. ಕಾಂ ಮುಖಾಂತರ ಇಬ್ಬರೂ ಪರಿಚಯವಾಗಿ ಮದುವೆ ಕೂಡ ಆಗಿತ್ತು. ಆದ್ರೆ ನಿಶಾ ಈ ಮದುವೆಗೆ ನಮ್ಮನ್ನ ಕರೆದಿರಲಿಲ್ಲ. ಮನೀಷ್ ಶರ್ಮಾ ಮೊದಲಿನಿಂದ ಅವನಿಗೆ ಹಣದ ಮೇಲೆ ಆಸೆ ಇತ್ತು. ಮದುವೆಯಾದಗಿನಿಂದಲೂ ಅವನು ನನಗೆ ಕೆಲಸ ಇಲ್ಲ. ಏನಾದ್ರೂ ಬ್ಯುಸಿನೆಸ್ ಮಾಡ್ತೀನಿ ಹಣ ಕೊಡು ಅಂತ ಪೀಡಿಸ್ತಿದ್ದ. ಅದಕ್ಕೆ ನಮ್ಮ ತಂಗಿ ಅವನಿಗೆ 5 ಲಕ್ಷ ರೂಪಾಯಿ ಕೂಡ ಕೊಟ್ಟಿದ್ಳು. ಆ ಮನೀಷ್ ಶರ್ಮಾ ಮನೆಯಲ್ಲಿ ಇರ್ತಿರಲಿಲ್ಲ. 2 -3 ದಿನ ಇರ್ತಿದ್ದ ಆಮೇಲೆ 15 ರಿಂದ 20 ದಿನ ಬರ್ತಾ ಇರಲಿಲ್ಲ. ಯಾವುದೇ ದಾಖಲೆಯಲ್ಲಿ ಇವನ ಹೆಸರು ಹಾಕಿರಲಿಲ್ಲ. ಅವನು ಚೆನ್ನಾಗಿದ್ರೆ ನೋಡೋಣ ಅಂತ ನಮ್ಮ ತಂಗಿ ಬಿಟ್ಟಿದ್ಳು.
- ನಿಶಾ ಸಹೋದರಿ
ವಿಚಾರ ಏನಂದ್ರೆ ನಿಶಾ ಮತ್ತು ಮನೀಷ್ ಶಾದಿ ಡಾಟ್ ಕಾಮ್ನಲ್ಲಿ ಪರಿಚಯವಾಗಿ ಮದುವೆಯಾಗಿದ್ರು. ಈ ಮದುವೆಗೆ ಮನೆಯವರ ಒಪ್ಪಿಗೆ ಕೂಡ ಇರಲಿಲ್ಲ. ಆದ್ರೂ ನಿಶಾ ಮನೀಷ್ ಜೊತೆ ಸಂಸಾರ ಮಾಡ್ತಿದ್ಳು.. ಕೊನೆಗೆ ಇದೇ ಮನೀಷನಿಂದ ನಿಶಾ ಕೊಲೆಯಾಗಿಬಿಟ್ಟಿದ್ದಾಳೆ.
ಹೆಂಡತಿ ಕೊಲೆ ಮಾಡಿ ನಾಟಕವಾಡಿದ್ದ ಕಿರಾತಕ ಪತಿ!
ತಾನು ಮಾಡಿದ ಕೊಲೆಯನ್ನು ಮರೆ ಮಾಚಲು ಮನಿಷ್ ಶರ್ಮಾ ಹೈಡ್ರಾಮಾ ಮಾಡಿದ್ದ. ಉಸಿರಾಟ ತೊಂದರೆ ಇದೆ ಅಂತ ಬಿಂಬಿಸಿ ನಿಶಾ ಮೃತದೇಹವನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದಾನೆ. ವೈದ್ಯರು ಪರೀಕ್ಷಿಸಿದಾಗ ಆಕೆ ಮೃತಪಟ್ಟಿದ್ದು ಗೊತ್ತಾಗಿದೆ. ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಇದು ಅಸಹಜ ಸಾವು ಎಂದು ತಿಳಿದು ಬಂದಿದೆ. ಆಸ್ಪತ್ರೆಗೆ ಬಂದ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದಾನೆ. ಹತ್ಯೆ ಬಯಲಾಗಬಾರದು ಎಂದು ರಕ್ತದ ಕಲೆ ಅಂಟಿದ್ದ ಬಟ್ಟೆ, ದಿಂಬನ್ನು ವಾಷಿಂಗ್ ಮೆಷಿನ್‌ನಲ್ಲಿ ತೊಳೆದಿದ್ದ. ತನಿಖೆ ತಂಡ ಸ್ಥಳ ಪರಿಶೀಲನೆ ನಡೆಸಿ, ಸಿಕ್ಕ ಸುಳಿವುಗಳ ಆಧಾರದ ಮೇಲೆ ಶರ್ಮಾನನ್ನು ಬಂಧಿಸಿದ್ದಾರೆ.
ಇಲ್ಲಿನ ಎಸ್ಡಿಎಮ್ ಶ್ರೀಮತಿ ನಿಶಾ ಶರ್ಮಾ ಹತ್ಯೆಯಾಗಿದೆ. ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡಿ 24 ಗಂಟೆಯಲ್ಲಿ ಆರೋಪಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಿಶಾ ಮದುವೆ 2020 ರಲ್ಲಿ ಆಗಿತ್ತು. ಗ್ವಾಲಿಯರ್ ನಿವಾಸಿ ಮನೀಷ್ ಶರ್ಮಾ ಜೊತೆ ನಿಶಾ ಮದುವೆ ನಡೆದಿತ್ತು. ಮದುವೆಯಾದ್ಮೇಲೆ ಮನೀಷ್ ಶರ್ಮಾ ನಿಶಾಗೆ ಕಿರುಕುಳ ಕೊಡೋದಕ್ಕೆ ಶುರು ಮಾಡಿದ್ದಾನೆ. ನಿಶಾ ಬ್ಯಾಂಕ್ ಅಕೌಂಟ್ ಮತ್ತು ಸರ್ವಿಸ್ ಬುಕ್ನಲ್ಲಿ ಅವನನ್ನ ನಾಮಿನಿ ಮಾಡುವಂತೆ ಬಲವಂತ ಮಾಡ್ತಿದ್ದ. ಆದ್ರೆ ನಿಶಾಗೆ ಅವನ ಮೇಲೆ ನಂಬಿಕೆ ಇರಲಿಲ್ಲ. ಹೀಗಾಗಿ ನಾಮಿನಿ ಮಾಡಿರಲಿಲ್ಲ. ಇದೇ ವಿಚಾರಕ್ಕೆ ಜಗಳ ನಡೆದು ನಿತೀಶ್ ನಿಶಾರನ್ನ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಒಟ್ಟಾರೆ ಹಣದ ಮೋಹಕ್ಕೆ ಬಿದ್ದ ಪತಿರಾಯ ತಾಳಿಕಟ್ಟಿದವಳ ಉಸಿರನ್ನೇ ನಿಲ್ಲಿಸಿದ್ದು ಮಾತ್ರ ನಿಜಕ್ಕೂ ದುರಂತ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ