/newsfirstlive-kannada/media/post_attachments/wp-content/uploads/2025/05/klb3.jpg)
ಕಲಬುರಗಿ: ಗಂಡನೊಬ್ಬ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಒಟ್ಟಿಗೆ ಕೊಂದು ಹಾಕಿದ ಘಟನೆ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ. ಸೃಷ್ಟಿ (22), ಖಾಜಪ್ಪ (23) ಕೊಲೆಯಾದವರು.
ಇದನ್ನೂ ಓದಿ:ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣ.. ಇಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್
[caption id="attachment_122263" align="alignnone" width="800"] ಕೊಲೆ ಮಾಡಿದ ಆರೋಪಿ ಗಂಡ[/caption]
ಈ ಇಬ್ಬರ ಸಾವಿಗೆ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನುವ ಶಂಕಿಸಲಾಗಿದೆ. ಕಳೆದ ರಾತ್ರಿ ಪತ್ನಿ ಜೊತೆ ಅದೇ ಗ್ರಾಮದ ಖಾಜಪ್ಪ ಇದುದ್ದನ್ನ ಕಂಡು ಪತಿ ಶ್ರೀಮಂತ ಇಬ್ಬರನ್ನೂ ಸ್ಥಳದಲ್ಲೇ ಕೊಂದು ಹಾಕಿದ್ದಾನೆ. ಇಬ್ಬರನ್ನೂ ಕೊಂದು ಖುದ್ದು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಎರಡು ವರ್ಷಗಳ ಹಿಂದಷ್ಟೇ ಶ್ರೀಮಂತ ಸೃಷ್ಟಿ ಜೊತೆಗೆ ಮದುವೆಯಾಗಿದ್ದ.
ಆದರೂ ಪತ್ನಿ ಅವಿವಾಹಿತ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳಂತೆ. ಊರಿಗೆ ಹೋಗಿದ್ದ ಪತಿ ಕಳೆದ ರಾತ್ರಿ ಮನೆಗೆ ವಾಪಸ್ ಬಂದಾಗ ಹೆಂಡತಿಯ ಜೊತೆ ಪರ ಪುರುಷನ ನೋಡಿ ಪತಿ ಆಕ್ರೋಶಗೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಮಾದನ ಹಿಪ್ಪರಗಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ