‘ಪತ್ನಿಗೆ ನಾಲ್ವರು ಪ್ರೇಯಸಿಯರು, ಆಕೆಯಿಂದ ನನ್ನ ಜೀವ ಉಳಿಸಿ’ ಎಂದು CMಗೆ ಪತ್ರ..!

author-image
Ganesh
Updated On
‘ಪತ್ನಿಗೆ ನಾಲ್ವರು ಪ್ರೇಯಸಿಯರು, ಆಕೆಯಿಂದ ನನ್ನ ಜೀವ ಉಳಿಸಿ’ ಎಂದು CMಗೆ ಪತ್ರ..!
Advertisment
  • ಹೆಂಡತಿ ಮತ್ತು ಆಕೆಯ ಬಾಯ್​ಫ್ರೆಂಡ್​ಗಳಿಂದ ಕಾಪಾಡಿ
  • ಪ್ರಿಯಕರರೊಂದಿಗೆ ಸೇರಿ ನನ್ನ ಮಗನನ್ನು ಕೊಲ್ಲಲು ಷಡ್ಯಂತ್ರ
  • ಮೀರತ್​ನಲ್ಲಿ ನಡೆದ ಮಾದರಿಯಲ್ಲಿಯೇ ಹತ್ಯೆ ಪ್ಲ್ಯಾನ್

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ 38 ವರ್ಷದ ವ್ಯಕ್ತಿಯೊಬ್ಬ, ತನ್ನ ಪತ್ನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ನನ್ನ ಹೆಂಡತಿಗೆ ಒಬ್ಬನಲ್ಲ ನಾಲ್ವರ ಪ್ರಿಯಕರರಿದ್ದಾರೆ. ಅವಳು ಪ್ರಿಯಕರರೊಂದಿಗೆ ಸೇರಿ ನನ್ನ ಮಗನ ಕೊಲ್ಲಲು ಷಡ್ಯಂತ್ರ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ.

ಇದನ್ನೂ ಓದಿ: ಕೃಷ್ಣಾ ನದಿಗೆ ಸ್ನಾನ ಮಾಡಲು ಹೋಗಿದ್ದ ಮೂವರು ಬಾಲಕರು ನಾಪತ್ತೆ.. ಓರ್ವನ ದೇಹ ಪತ್ತೆ

publive-image

ಈಗಾಗಲೇ ಚಿಕ್ಕ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಳೆ. ಈಗ ನನ್ನ ಕೊಲ್ಲಲು ಕೂಡ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ನಾಲ್ವರು ಪ್ರೇಮಿಗಳಲ್ಲಿ ಒಬ್ಬನೊಂದಿಗೆ ಲೀವ್ ಇನ್ ರಿಲೇಷನ್​​ಶೀಪ್​ನಲ್ಲಿ ಇದ್ದಾಳೆ. ನನ್ನ ಪತ್ನಿ, ಆಕೆಯ ಬಾಯ್​ಫ್ರೆಂಡ್​ಗಳು ನನ್ನನ್ನನು ಸಾಯಿಸುತ್ತಾರೆ. ಇತ್ತೀಚೆಗೆ ಈ ಹಿಂದೆ ಗಂಡನನ್ನು ಹತ್ಯೆ ಮಾಡಿ ಡ್ರಮ್​​​ನಲ್ಲಿ ತುಂಬಿಸಿದ ಮೀರತ್​ನಲ್ಲಿ ನಡೆದ ಮಾದರಿಯಲ್ಲಿಯೇ ಹತ್ಯೆ ಪ್ಲ್ಯಾನ್ ಮಾಡಿದ್ದಾರೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರಿಗೆ ಪತ್ರ ಬರೆದಿದ್ದಾನೆ.

publive-image

ಸಂತ್ರಸ್ತ ಹೇಳುವ ಪ್ರಕಾರ ಈಗಾಗಲೇ ಆತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನಂತೆ. ಆದರೆ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನಾನೀಗ ನಿಸ್ಸಾಹಯಕನಾಗಿದ್ದೇನೆ ಎಂದು ಗ್ವಾಲಿಯರ್​​ನ ಪುಲ್​ಭಾಗ್​ ರಸ್ತೆಯ ನಡುವೆ ಕುಳಿತು ಪ್ರತಿಭಟನೆ ಮಾಡಿದ್ದಾನೆ. ಸಿಎಂಗೆ ಪತ್ರ ಬರೆದು ನನ್ನ ನೋವನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ನನಗೆ ನ್ಯಾಯ ಒದಗಿಸುತ್ತಾರೆ ಎಂದು ಭರವಸೆಯಿಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ, ಡಿಕೆಶಿ ದಿಢೀರ್ ಮೀಟಿಂಗ್; ಏನಾಯ್ತು..? ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment