/newsfirstlive-kannada/media/post_attachments/wp-content/uploads/2024/04/Murder.jpg)
ಪತಿಯೋರ್ವ ಎರಡನೇ ಪತ್ನಿಯನ್ನ ಕೊಲೆ ಮಾಡಿ ನಂತರ ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಫುರ ಜಿಲ್ಲೆ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿ ಎರಡು ದಿನಗಳ ನಂತರ ಆರೋಪಿ ಹೊಸಕೋಟೆ ಪೊಲೀಸರಿಗೆ ಶರಣಾದ ನಂತರ ಕೊಲೆ ಪ್ರಕರಣ ಬಯಲಾಗಿದೆ.
ಮೂವತ್ತು ವರ್ಷದ ರೆಡ್ಡಿಲಕ್ಷ್ಮಿ ಕೊಲೆಯಾದ ಮಹಿಳೆಯಾಗಿದ್ದು, ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಬಾಡಿಗೆ ಮನೆಯಲ್ಲಿ ಆಂಧ್ರ ಮೂಲದ ಹರೀಶ ಹಾಗೂ ರೆಡ್ಡಿಲಕ್ಷ್ಮಿ ದಂಪತಿ ವಾಸವಿದ್ದರು. ಈಗಾಗಲೇ ಹರೀಶ್ ಗೆ ಮೊದಲನೇ ಹೆಂಡತಿ ಹಾಗೂ ಮಕ್ಕಳಿದ್ದಾರೆ.
ಹರೀಶ ಎರಡನೇ ಪತ್ನಿಗೆ ಹಲವು ಬಾರಿ ಮಕ್ಕಳಾಗದಂತೆ ಅಬಾರ್ಷನ್ ಮಾಡಿಸಿದ್ದನಂತೆ. ಎರಡನೇ ಹೆಂಡತಿಗೆ ಮಕ್ಕಳಾಗೋ ವಿಚಾರ ಮೊದಲನೇ ಪತ್ನಿ ಗೊತ್ತಾದ್ರೆ ಸಮಸ್ಯೆ ದೊಡ್ಡದಾಗುತ್ತೋ ಅನ್ನೋ ಕಾರಣಕ್ಕೆ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಆರೋಪಿ ಹರೀಶನನ್ನ ಹೊಸಕೋಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಂತಾಮಣಿ ನಗರ ಠಾಣೆಗೆ ಮಾಹಿತಿ ನೀಡಿದ ನಂತರ ಕೊಳೆತ ಸ್ಥಿತಿಯಲ್ಲಿದ್ದ ರೆಡ್ಡಿಲಕ್ಷ್ಮಿ ಶವವನ್ನ ಹೊರತೆಗೆದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೊಸಕೋಟೆ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ