/newsfirstlive-kannada/media/post_attachments/wp-content/uploads/2025/07/Russian-woman-4.jpg)
ಕರ್ನಾಟಕದ ಉತ್ತರ ಕನ್ನಡ (Uttara Kannada) ಜಿಲ್ಲೆಯ ಗೋಕರ್ಣ ಗುಹೆಯೊಳಗೆ (Gokarna Cave) ರಷ್ಯಾದ ಮಹಿಳೆ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ರಷ್ಯಾದ ಮಹಿಳೆಗೆ ಇಸ್ರೇಲ್ ವ್ಯಕ್ತಿಯ ಜೊತೆ ಲವ್ ಅಫೇರ್ (Love affair) ಇತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಗೋವಾದಲ್ಲಿ ರಷ್ಯಾ ಮಹಿಳೆ ನೀನಾ ಹಾಗೂ ಇಸ್ರೇಲ್‌ನ ಡ್ರೋರ್ ಗೋಲ್ಡ್ಸ್ಟೀನ್ ( Dror Goldstein) ನಡುವೆ ಪರಿಚಯ, ಪ್ರೇಮ ಶುರುವಾಗಿದೆ. 2017ರಲ್ಲಿ ಪ್ರೀತಿಯ ಬಲೆಗೆ ಬಿದ್ದ ರಷ್ಯಾ- ಇಸ್ರೇಲ್ ಪ್ರೇಮ ಪಕ್ಷಿಗಳು ಗೋವಾದಲ್ಲಿ ಲಿವಿಂಗ್ ಟುಗೇದರ್ನಲ್ಲಿದ್ದರು
ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಗೆ ಕಾರಣ ರಿವೀಲ್; ಸಚಿನ್ ನಿವೃತ್ತಿ ಬಳಿಕ ಇದೊಂದೇ ದೊಡ್ಡ ಪ್ರಾಬ್ಲಂ..!
ಗೋವಾದಲ್ಲಿ ಪರಿಚಯ, ಪ್ರೇಮ, ಪ್ರಣಯ ಸಂಬಂಧ ಅರಳಿದೆ. ಇಬ್ಬರ ನಡುವೆ ಮಾತುಕತೆಯ ನಂತರ ಲಿವಿಂಗ್ ಟುಗೇದರ್ ಸಂಬಂಧವೂ ಶುರುವಾಗಿದೆ. ಇಬ್ಬರು ಎರಡು ಮೂರು ವರ್ಷ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಪರಿಣಾಮ ಇಬ್ಬರು ಮಕ್ಕಳು ಜನಿಸಿವೆ. ಕೊರೊನಾ ಲಾಕ್ಡೌನ್ ವೇಳೆ ಗೋಲ್ಡ್ಸ್ಟೀನ್ ಇಸ್ರೇಲ್‌ಗೆ ಹೋಗಿದ್ದ. ಇಸ್ರೇಲ್ನಿಂದಲೇ ಗೋವಾದಲ್ಲಿದ್ದ ಪ್ರಿಯತಮೆಯಿದ್ದ ಮನೆಯ ಬಾಡಿಗೆ, ಖರ್ಚು ವೆಚ್ಚಕ್ಕೆ ಹಣ ಕಳುಹಿಸುತ್ತಿದ್ದ. ಆದರೆ ಇತ್ತೀಚೆಗೆ ರಷ್ಯಾದ ನೀನಾ ಮಕ್ಕಳೊಂದಿಗೆ ಗೋವಾದಿಂದ ನಿಗೂಢವಾಗಿ ಕಣ್ಮರೆಯಾಗಿದ್ದಳು. ಈ ಬಗ್ಗೆ ಡ್ರೋರ್ ಗೋಲ್ಡ್ಸ್ಟೀನ್ ಗೋವಾದಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಇದೀಗ ನೀನಾ, ಮಕ್ಕಳ ಜೊತೆ ಗೋಕರ್ಣದಲ್ಲಿ ಪತ್ತೆಯಾಗಿದ್ದಾರೆ. ಈ ವಿಷಯ ಮಾಧ್ಯಮಗಳ ಮೂಲಕ ಇಸ್ರೇಲ್ನಲ್ಲಿದ್ದ ಡ್ರೋರ್ ಗೋಲ್ಡ್ಸ್ಟೀನ್ಗೆ ಗೊತ್ತಾಗಿದೆ. ತಕ್ಷಣವೇ ಬೆಂಗಳೂರಿಗೆ ಡ್ರೋಗೋಲ್ಡ್ ಸ್ಟೀನ್ ಬಂದಿದ್ದಾರೆ. ಇಬ್ಬರು ಮಕ್ಕಳನ್ನ ತಮ್ಮ ಜೊತೆ ಕಳಿಸಬೇಕು ಅನ್ನೋದು ಡ್ರೋರ್ ಗೋಲ್ಡ್ಸ್ಟೀನ್ ಒತ್ತಾಯ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ಮಕ್ಕಳಿಗೆ ಒಳ್ಳೆಯ ಜೀವನ ನೀಡಬೇಕು. ಹೀಗಾಗಿ ಮಕ್ಕಳನ್ನು ತನ್ನ ಜೊತೆ ಕಳಿಸುವಂತೆ ಡ್ರೋರ್ ಗೋಲ್ಡ್ಸ್ಟೀನ್ ಭಾರತದ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಅಮೆರಿಕಾದಲ್ಲಿ ಮಾಂಸ ತಿನ್ನುವ ಹಸುಗಳು.. ನಾನ್ವೆಜ್ ಹಾಲು ಭಾರತಕ್ಕೆ ಬೇಡ ಎಂದ ಮೋದಿ ಸರ್ಕಾರ..!
ರಷ್ಯಾ ಮಹಿಳೆ ನೀನಾ, ಮಕ್ಕಳನ್ನು ಡ್ರೋರ್ ಗೋಲ್ಡ್ಸ್ಟೀನ್ ಜೊತೆ ಕಳಿಸಲು ಒಪ್ಪುತ್ತಿಲ್ಲ. ಬಹುಶಃ ಈ ವಿಷಯಕ್ಕೆ ಏನಾದರೂ ನೀನಾ ಹಾಗೂ ಡ್ರೋರ್ ಗೋಲ್ಡ್ಸ್ಟೀನ್ ನಡುವೆ ಭಿನ್ನಾಭಿಪ್ರಾಯ ಬಂದು ನೀನಾ, ಗೋವಾದಿಂದ ಗೋಕರ್ಣಕ್ಕೆ ಸದ್ದಿಲ್ಲದೇ ಬಂದು ಗುಹೆ ಸೇರಿರಬಹುದು. ರಷ್ಯಾದ ಮಹಿಳೆ ನೀನಾ ಹಾಗೂ ಇಬ್ಬರು ಮಕ್ಕಳನ್ನು ಸದ್ಯ ತುಮಕೂರು ನಗರದ ದಿಬ್ಬೂರಿನಲ್ಲಿರುವ ವಿದೇಶಿ ಪ್ರಜೆಗಳ ಡೀಟೆನ್ಸೆನ್ ಸೆಂಟರ್ನಲ್ಲಿ ಇರಿಸಲಾಗಿದೆ.
ರಷ್ಯಾದ ಮಹಿಳೆ ನೀನಾ ಹಾಗೂ ಇಸ್ರೇಲ್ ಪ್ರಜೆ ಡ್ರೋರ್ ಗೋಲ್ಡ್ಸ್ಟೀನ್ ನಡುವೆ ಪರಿಚಯ ಹೇಗಾಯ್ತು? ಲಿವಿಂಗ್ ಟುಗೇದರ್ಗೆ ನಿರ್ಧರಿಸಿದ್ದು ಹೇಗೆ? ಯಾವಾಗ? ಗೋಕರ್ಣದ ಗುಹೆಯಲ್ಲಿದ್ದುಕೊಂಡೇ ನೀನಾ, ಇಸ್ರೇಲ್ನಿಂದ ಕಳಿಸುತ್ತಿದ್ದ ಹಣವನ್ನು ಹೇಗೆ ಪಡೆಯುತ್ತಿದ್ದರು ಎಂಬ ಬಗ್ಗೆ ಇಸ್ರೇಲ್ನಿಂದ ಪ್ರಿಯಕರ ವಿವರ ನೀಡಿದ್ದಾರೆ.
ಇದನ್ನೂ ಓದಿ: 114 ವರ್ಷದ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್; ಆರೋಪಿ ಬಂಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ