/newsfirstlive-kannada/media/post_attachments/wp-content/uploads/2025/04/Bangalore-Instagram-Love-Story-1.jpg)
ಬೆಂಗಳೂರು: ಇನ್ಸ್ಟಾಗ್ರಾಂನಲ್ಲಿ ರೀಲ್ಸ್, ವಿಡಿಯೋ ನೋಡೋರು ಆರಾಮಾಗಿ ಟೈಮ್ ಪಾಸ್ ಮಾಡ್ತಾರೆ. ಆದರೆ ಅದೇ ರೀಲ್ಸ್‌ನಲ್ಲಿ ಬೇರೆಯೊಬ್ಬನ ಜೊತೆ ತನ್ನ ಹೆಂಡತಿ ಮದುವೆ ವಿಡಿಯೋ ನೋಡಿದ್ರೆ ಹೇಗಾಗ ಬೇಡ. ನೆಲಮಂಗಲದ ಈ ಡ್ರೈವರ್ ರಮೇಶ್‌ನ ಈ ಕಥೆ ಕೇಳಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.
ನೆಲಮಂಗಲದ ಈ ರಮೇಶ್ ಹಾಗೂ ನೇತ್ರಾವತಿಗೆ 13 ವರ್ಷದ ಹಿಂದೆಯೇ ಮದುವೆಯಾಗಿತ್ತು. ಇವರಿಬ್ಬರ ದಾಂಪತ್ಯಕ್ಕೆ ಒಂದು ಗಂಡು ಮಗುವೂ ಇದೆ. ಕಳೆದ 3 ವರ್ಷದಿಂದ ಡ್ರೈವರ್ ಕೆಲಸ ಮಾಡುತ್ತಿದ್ದ ರಮೇಶ್, ನೆಲಮಂಗಲದ ರಾಘವೇಂದ್ರನಗರದಲ್ಲಿ ವಾಸಿಸುತ್ತಿದ್ದ.
ಕಳೆದ ಒಂದು ವಾರದ ಹಿಂದೆ ರಮೇಶ್‌ನಿಗೆ ಕೈ ಕೊಟ್ಟ ನೇತ್ರಾವತಿ ಮಗನ ಸಮೇತ ಮನೆ ಬಿಟ್ಟು ಹೋಗಿದ್ದಾರಂತೆ. ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಪ್ರಿಯಕರನ ಜೊತೆ ಸಂತೋಷವಾಗಿ ಮದುವೆ ಆಗಿದ್ದಾರೆ. ಜಸ್ಟ್ ಒಂದೇ ವಾರದಲ್ಲಿ ನೇತ್ರಾವತಿ ಮನಸು ಗೆದ್ದ ಯುವಕನ ಹೆಸರು ಕೂಡ ಸಂತೋಷ.
ಒಂದೇ ವಾರದಲ್ಲಿ ಚಿಗುರಿದ ಪ್ರೀತಿ!
ರಮೇಶ್‌ನ ಪತ್ನಿ ನೇತ್ರಾವತಿಗೆ ಇನ್ಸ್ಟಾಗ್ರಾಂ ಮೂಲಕ ಸಂತೋಷ್ ಪರಿಚಯ ಆಗಿತ್ತು. ಕಳೆದ ಎರಡು ವಾರದಿಂದ ಸಂತೋಷ್ ಜೊತೆ ನೇತ್ರಾವತಿ ಚಾಟಿಂಗ್ ಮಾಡುತ್ತಿದ್ದರು. ದೇವಸ್ಥಾನದಲ್ಲಿ ಒಂದು ವಾರದ ಹಿಂದೆ ಸಂತೋಷ್ ಜೊತೆ ನೇತ್ರಾವತಿ ಮದುವೆ ಆಗಿದೆ.
ಸಂತೋಷ್ ಜೊತೆ ಒಂದಾದ ನೇತ್ರಾವತಿ ಮದುವೆ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಶಾಕ್ ಆಗಿರುವ ಮೊದಲ ಪತಿ ರಮೇಶ್ ನೆಲಮಂಗಲ ಟೌನ್ ಠಾಣೆಯಲ್ಲಿ ಎನ್ಸಿಆರ್ ದಾಖಲು ಮಾಡಿದ್ದಾನೆ.
ಈ ಬಗ್ಗೆ ವಿಚಾರಣೆ ನಡೆಸಿದ ನೆಲಮಂಗಲ ಪೊಲೀಸರು ಠಾಣೆಗೆ ನೇತ್ರಾವತಿಯನ್ನು ಕರೆಸಿದ್ದಾರೆ. ನೇತ್ರಾವತಿಯನ್ನು ಮೊದಲ ಪತಿಗೆ ವಿಚ್ಛೇದನ ಕೊಡದೇ ನೀವು 2ನೇ ಮದುವೆ ಹೇಗಾದ್ರಿ ಎಂದು ಪ್ರಶ್ನೆ ಮಾಡಿದ್ದಾನೆ. ಆಗ ನೇತ್ರಾವತಿ ರಮೇಶ್ನಿಂದ ನಾನು ವಿಚ್ಛೇದನ ಪಡೆಯುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಯುವತಿ ಖಾಸಗಿ ಅಂಗ ಮುಟ್ಟಿ ಹೋದ ಕಾಮುಕನ ಸುಳಿವು.. ಬಿಟಿಎಂ ಲೇಔಟ್ ಕೇಸ್‌ಗೆ ರೋಚಕ ಟ್ವಿಸ್ಟ್!
ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಸಂತೋಷ್ ಹಾಗೂ ನೇತ್ರಾವತಿ ಒಂದೇ ವಾರಕ್ಕೆ ಮದುವೆ ಆಗಿದ್ದಾರೆ. ಪ್ರಿಯಕರನಿಗಾಗಿ ಕೈ ಕೊಟ್ಟ ಮಹಿಳೆಯಿಂದ ಪತಿ ಕಂಗಾಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ