/newsfirstlive-kannada/media/post_attachments/wp-content/uploads/2025/03/Bangalore-husband-wife-case.jpg)
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ಬೆಳಕಿಗೆ ಬಂದಿದೆ. ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯಲ್ಲಿ ಪಾಪಿ ಪತಿರಾಯ ಪತ್ನಿಯ ತುಂಡರಿಸಿ ಸೂಟ್ ಕೇಸ್‌ಗೆ ತುಂಬಿದ್ದಾನೆ. ಬಳಿಕ ಮಹಾರಾಷ್ಟ್ರದಲ್ಲಿರುವ ಪತ್ನಿಯ ಪೋಷಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.
/newsfirstlive-kannada/media/post_attachments/wp-content/uploads/2025/03/bangalore-wife-husband-case.jpg)
ದೊಡ್ಡ ಕಮ್ಮನಹಳ್ಳಿಯ ಮನೆಯಲ್ಲಿ ಮಹಾರಾಷ್ಟ್ರ ಮೂಲದ ರಾಕೇಶ್, ಗೌರಿ ಅನಿಲ್ ಸಾಂಬೆಕರ್ ವಾಸಿಸುತ್ತಿದ್ದರು. ಗಂಡ, ಹೆಂಡತಿ ಮಧ್ಯೆ ಜಗಳವಾಗಿ ಪತ್ನಿಯನ್ನು ರಾಕೇಶ್ ತುಂಡು, ತುಂಡಾಗಿ ಕತ್ತರಿಸಿದ್ದಾನೆ ಎನ್ನಲಾಗಿದೆ.
ಭಯಾನಕ ಕೃತ್ಯ ಎಸಗಿರುವ ಪತಿ, ಮಹಾರಾಷ್ಟ್ರದಲ್ಲಿರುವ ಪತ್ನಿ ಪೋಷಕರಿಗೆ ಫೋನ್ ಮಾಡಿ ನಡೆದಿರೋ ಘಟನೆಯನ್ನು ವಿವರಿಸಿದ್ದಾನೆ. ಗೌರಿ ಮನೆಯವರು ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ ಪೊಲೀಸರು ಕೂಡಲೇ ಬೆಂಗಳೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/03/bangalore-wife-husband-case-1.jpg)
ಮಹಾರಾಷ್ಟ್ರ ಪೊಲೀಸರ ಮಾಹಿತಿ ಆಧರಿಸಿ ಹುಳಿಮಾವು ಪೊಲೀಸರು ದೊಡ್ಡ ಕಮ್ಮನಹಳ್ಳಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಸಿಪಿ ಸಾರಾ ಫಾತಿಮಾ ಅವರ ತಂಡ ಘಟನೆಯ ತನಿಖೆ ಕೈಗೊಂಡಿದ್ದಾರೆ.
ವರ್ಕ್ ಫ್ರಂ ಹೋಮ್‌ನಲ್ಲಿದ್ದ ದಂಪತಿ!
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಈ ದಂಪತಿ ಕಳೆದ ಒಂದು ವರ್ಷದ ಹಿಂದೆ ದೊಡ್ಡಕಮ್ಮನಹಳ್ಳಿ ಮನೆಗೆ ಬಂದು ನೆಲೆಸಿದ್ದರು. ವರ್ಕ್ ಫ್ರಂ ಹೋಂ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡ್ತಿದ್ದ ಗಂಡ, ಹೆಂಡತಿ ಮಧ್ಯೆ ಈ ದುರಂತ ನಡೆದಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us