VIDEO: ಹೆಂಡ್ತಿ ಜೀವ ಉಳಿಸಲು VRS ತೆಗೆದುಕೊಂಡ ಗಂಡ; ರಿಟೈರ್ಮೆಂಟ್ ಪಾರ್ಟಿಯಲ್ಲೇ ಘೋರ ದುರಂತ

author-image
admin
Updated On
VIDEO: ಹೆಂಡ್ತಿ ಜೀವ ಉಳಿಸಲು VRS ತೆಗೆದುಕೊಂಡ ಗಂಡ; ರಿಟೈರ್ಮೆಂಟ್ ಪಾರ್ಟಿಯಲ್ಲೇ ಘೋರ ದುರಂತ
Advertisment
  • ಪತ್ನಿಯ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಗಂಡನಿಗೆ ಆಘಾತ
  • ಗಂಡನ ಪಕ್ಕದಲ್ಲಿ ನಿಂತಿದ್ದ ಹೆಂಡತಿ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ..
  • ಅನ್ಯೋನ್ಯ ದಂಪತಿ ನೋಡಿದ್ರೆ ನಿಜಕ್ಕೂ ಕರುಳು ಚುರ್ ಅನ್ನುತ್ತೆ

ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಈ ಹೆಣ್ಣಿಗೆ ಈ ಗಂಡು ಅನ್ನೋದು ಹಣೆಯಲ್ಲಿ ಬರೆದಿರುತ್ತಂತೆ. ಅನ್ಯೋನ್ಯ ದಂಪತಿಗಳನ್ನ ನೋಡಿದ್ರೆ ಈ ಮಾತು ನಿಜವೂ ಅನ್ನಿಸುತ್ತೆ. ರಾಜಸ್ಥಾನದಲ್ಲಿ ಇಂತಹ ಸತಿ-ಪತಿ ಮಧ್ಯೆ ಘನ ಘೋರ ದುರಂತವೊಂದು ನಡೆದಿದೆ. ಈ ಕರುಣಾಜನಕ ವಿಡಿಯೋ ನೋಡಿದ್ರೆ ಕಲ್ಲು ಮನಸ್ಸಿನವರು ಒಂದು ಕ್ಷಣ ಮರುಗಿ ಹೋಗ್ತಾರೆ.

ರಾಜಸ್ಥಾನದಲ್ಲಿ ನಡೆದಿರುವ ರಿಟೈರ್ಮೆಂಟ್ ಪಾರ್ಟಿಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕರುಣಾಜನಕ ದೃಶ್ಯ ನೋಡಿದ ನೆಟ್ಟಿಗರು ತೀವ್ರ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ತ್ರಿಶಾ ಮಗ ಇನ್ನಿಲ್ಲ.. ಇನ್​​ಸ್ಟಾದಲ್ಲಿ ಭಾವುಕ ಪೋಸ್ಟ್ ಶೇರ್ ಮಾಡಿದ ಸ್ಟಾರ್ ನಟಿ 

ಗಂಡನ ಪಕ್ಕದಲ್ಲಿ ನಿಂತಿರೋ ಹೆಂಡತಿ ಖುಷಿ, ಖುಷಿಯಾಗಿ ಆತ್ಮೀಯರು, ಸ್ನೇಹಿತರ ಶುಭಾಶಯ ಸ್ವೀಕರಿಸುತ್ತಾರೆ. ಆದರೆ ಅದೇನ್ ಆಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಕೂತಲ್ಲೇ ಕುಸಿದು ಹೋಗಿದ್ದಾರೆ. ಕೊನೆಗೆ ಗಂಡನ ಕೈಯಲ್ಲೇ ಪ್ರಾಣ ಬಿಟ್ಟಿದ್ದಾರೆ.

publive-image

ರಾಜಸ್ಥಾನದ ಕೋಟಾದಲ್ಲಿ ಇಂತಹದೊಂದು ದಾರುಣ ಘಟನೆ ನಡೆದಿದೆ. ದೇವೇಂದ್ರ ಸ್ಯಾಂಡಲ್ ಎಂಬ ವ್ಯಕ್ತಿ ತನ್ನ ಅನಾರೋಗ್ಯ ಪತ್ನಿಯ ಜೀವ ಉಳಿಸಿಕೊಳ್ಳಲು ತನ್ನ ಕೆಲಸದಿಂದ VRS ತೆಗೆದುಕೊಂಡಿದ್ದಾರೆ. ನಿವೃತ್ತಿಗೆ 3 ವರ್ಷ ಬಾಕಿ ಇರುವಂತೆ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದಾರೆ.


">December 25, 2024

ದೇವೇಂದ್ರ ಸ್ಯಾಂಡಲ್ ಪತ್ನಿ ಟೀನಾ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುತ್ತೆ. ಹೆಂಡತಿಯ ಆಸ್ಪತ್ರೆ ಖರ್ಚಿಗಾಗಿ VRS ತೆಗೆದುಕೊಂಡ ದೇವೇಂದ್ರ ಅವರ ನಿರ್ಧಾರ ಸಹೋದ್ಯೋಗಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ದೇವೇಂದ್ರ ಅವರ VRS ಹಿನ್ನೆಲೆಯಲ್ಲಿ ನಿವೃತ್ತಿ ಪಾರ್ಟಿ ಆಯೋಜಿಸಿ ಬೀಳ್ಗೊಡಲು ನಿರ್ಧಾರ ಮಾಡಿದ್ದಾರೆ. ಹೀಗೆ ಗಂಡನ ರಿಟೈರ್ಮೆಂಟ್ ಪಾರ್ಟಿ ನಡೆಯುತ್ತಿರುವಾಗಲೇ ಪತ್ನಿ ಪ್ರಾಣ ಬಿಟ್ಟಿದ್ದಾರೆ. ದೇವೇಂದ್ರ ಪತ್ನಿ ಟೀನಾ ಅವರ ಕೊನೇ ಕ್ಷಣದ ದೃಶ್ಯ ಮನಮಿಡಿಯುವಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment