ಮದುವೆಗೂ ಮುನ್ನ ಕ್ಯೂಟಿ, ಆದ್ಮೇಲೆ ಇಲ್ವಂತೆ ಬ್ಯೂಟಿ; ‘ದಪ್ಪ’ ಇದ್ಯಾ ಅಂತ ಹೆಂಡತಿ ಮೇಲೆ ಗಂಡನ ಕಿತಾಪತಿ!

author-image
Veena Gangani
Updated On
ಮದುವೆಗೂ ಮುನ್ನ ಕ್ಯೂಟಿ, ಆದ್ಮೇಲೆ ಇಲ್ವಂತೆ ಬ್ಯೂಟಿ; ‘ದಪ್ಪ’ ಇದ್ಯಾ ಅಂತ ಹೆಂಡತಿ ಮೇಲೆ ಗಂಡನ ಕಿತಾಪತಿ!
Advertisment
  • ಮದುವೆಗೂ ಮುನ್ನ ಚೆನ್ನಾಗಿದ್ದ ಈ ಜೋಡಿ ಮಧ್ಯೆ ಏನಾಯ್ತು?
  • ಹೆಣ್ಣು ಕೊಟ್ಟ ಮಾವನ ಮೇಲೆ ಖಾರದ ಪುಡಿ ಎರಚಿದ ಅಳಿಯ
  • ಸಿನಿಮಾ ಸ್ಟೈಲ್​ನಲ್ಲಿ ಅಟ್ಯಾಕ್ ಮಾಡಿದ ಪುಲಿ ಸಾಯಿಕುಮಾರ್

ಈ 21ನೇ ಶತಮಾನದಲ್ಲೂ ತಾಳಿ ಕಟ್ಟಿದ ಗಂಡ ಕಟ್ಕೊಂಡವಳ ಮೇಲೆ ಕೈ ಮಾಡೋದು ನಿಂತಿಲ್ಲ. ಹೆಂಡತಿ ಸುಂದರವಾಗಿಲ್ಲ ಅಂತ ಡೌರಿಗೆ ಡಿಮ್ಯಾಂಡ್ ಮಾಡೋದನ್ನು ಬಿಟ್ಟಿಲ್ಲ. ಆದ್ರೆ ತಾಳಿ ಕಟ್ಟಿದ ಹೆಂಡತಿ ಅಂತಾನೂ ನೋಡದೇ ಖಾರದ ಪುಡಿ ಎರಚಿ ಹಲ್ಲೆ ಮಾಡ್ಬಿಟ್ಟಿದ್ದಾನೆ. ಅದು ಸಾಲದು ಅಂತ ಹೆಣ್ಣುಕೊಟ್ಟ ಮಾವನನ್ನೂ ಬಿಟ್ಟಿಲ್ಲ. ತಾನೇ ಹೆತ್ತ ಕಂದನೂ ಮೇಲೂ ಹಲ್ಲೆ ಮಾಡಿದ್ದಾನೆ ಗಂಡ.

ಇದನ್ನೂ ಓದಿ: ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?

publive-image

ಅಷ್ಟಕ್ಕೂ ಆಗಿದ್ದೇನು?

2021ರಲ್ಲಿ ಮ್ಯಾಟ್ರಿಮೋನಿ ಮೂಲಕ ಸಾಯಿಕುಮಾರ್ ಹಾಗೂ ರಮ್ಯಾ ಪರಿಚಯವಾಗಿ ಮದುವೆಯಾದ್ರು. ಖಾಸಗಿ ಕಾಲೇಜಿನಲ್ಲಿ ಅಸಿಸ್ಟಂಟ್ ಫ್ರೋಫೆಸರ್ ಆಗಿ ರಮ್ಯಾ ಕೆಲಸ ಮಾಡ್ತಿದ್ರೆ, ಅತ್ತ, ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಪುಲಿ ಸಾಯಿಕುಮಾರ್. ಮದುವೆಗೂ ಮುನ್ನ ಚೆನ್ನಾಗಿದ್ದ ಈ ಜೋಡಿ ಮಧ್ಯೆ ಮದುವೆ ಬಳಿಕ ವಿರಸ ಉಂಟಾಗಿದೆ. ನಿತ್ಯ ಈ ಪುಲಿ ವರದಕ್ಷಿಣೆಗೆ ಪೀಡಿಸ್ತಿದ್ದನಂತೆ. ಈ ಹಿಂದೆಯೂ ಕೂಡ ಇವ್ನ ಮೇಲೆ FIR ದಾಖಲಾಗಿತ್ತು. ಬಳಿಕ ದೊಡ್ಡವರು ರಾಜಿ ಮಾಡಿ ಒಂದು ಮಾಡಿದ್ದರು.

publive-image

ಇದೇ ರೀತಿ ಮಾರ್ಚ್​ 6ರ ಬೆಳಗ್ಗೆ ಕಿರಿಕ್ ತೆಗೆದಿದ್ದ ಈ ಪುಲಿ ಸಿನಿಮಾ ಸ್ಟೈಲ್​ನಲ್ಲಿ ಅಟ್ಯಾಕ್ ಮಾಡಿದ್ದಾನೆ. ಮದುವೆಗೂ ಮುನ್ನ ಚೆನ್ನಾಗಿದ್ದೇ. ಈಗ ದಪ್ಪ ಆಗಿದ್ಯಾ ನಿನ್ನ ಜೊತೆ ನಾನ್​ ಇರೋದಿಲ್ಲ ಅಂತ ಟಾರ್ಚರ್ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಮಾವನಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿ ಮಗುವಿನ ಮೇಲೆ ವಿಕೃತ ಮೆರೆದಿದ್ದಾನೆ. ಮತ್ತೊಂದ್ಕಡೆ, ರಮ್ಯಾ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪುಲಿ ವಿರುದ್ಧ ದೂರು ಕೊಟ್ಟಿದ್ದಾಳೆ. ಹೆಂಡತಿ ಮುಂದೆ ಬಾಲ ಬಿಚ್ಚಿ, ಬಿಲ ಸೇರಿದ್ದ ಪತಿರಾಯನನ್ನ ಸದ್ಯ ಪೊಲೀಸರು ಕರೆದು ವಿಚಾರಣೆ ಮಾಡಿದ್ದಾರೆ. ಸಂಸಾರ ಮಾಡೋಕೆ ಒಂದಾಣಿಕೆ ಮುಖ್ಯಾನೇ ಹೊರತು ಸೌಂದರ್ಯ ಅಲ್ಲ ಅಲ್ವಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment