/newsfirstlive-kannada/media/post_attachments/wp-content/uploads/2025/07/RAICHURU-REVATI-1.jpg)
ರಾಯಚೂರು: ನನ್ನ ಅಮ್ಮನಿಗೆ ವಿಷ ನೀಡಿ ಆಕೆಯ ಜೀವ ತೆಗೆದಿದ್ದಾಳೆ ಎಂದು ಆರೋಪಿಸಿ ಪತಿಯೊಬ್ಬ ರಾಯಚೂರಿನ ಸದರ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸದ್ಯ ಈ ಪ್ರಕರಣ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ನಗರದ ಬ್ರೇಸ್ತವಾರ ಪೇಟೆ ನಿವಾಸಿ ಬಲಬೀರ್ ಎಂಬಾತ ವಿಚ್ಛೇದಿತ ಪತ್ನಿ ರೇವತಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ತಾಯಿ ಸುಶೀಲಾಬಾಯಿ (70) ಸಾ*ವಿಗೆ ಪತ್ನಿಯೇ ಕಾರಣ. ಏಪ್ರಿಲ್ 23 ರಂದು ತಾಯಿಯ ಬಾಯಲ್ಲಿ ವಿಷದ ಲಿಕ್ವಿಡ್ ಹಾಕಿದ್ದಾಳೆ. ಇದರಿಂದ ಅಮ್ಮನಿಗೆ ಲೋಸ್ ಮೊಷನ್ ಶುರುವಾಗಿತ್ತು. ಬೆನ್ನಲ್ಲೇ ನಾವು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಪ್ರಿಲ್ 30 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು, ಅವರ ನರಗಳಲ್ಲಿ ವಿಕ್ನೇಸ್ ಶುರುವಾಗಿತ್ತು.
ಇದನ್ನೂ ಓದಿ: ಥಾಯ್ಲೆಂಡ್-ಕಾಂಬೋಡಿಯಾ ಮಧ್ಯೆ ಯುದ್ಧ.. ಇಲ್ಲಿಯೂ ನಂದೆಲ್ಲಿ ಇಡಲಿ ಅಂದ್ರು ಟ್ರಂಪ್..!
ಹೀಗಾಗಿ ವೈದ್ಯರು ಮನೆಯಲ್ಲಿ ತುಂಬಾ ಜೋಪಾನವಾಗಿ ನೋಡಿಕೊಳ್ಳಬೇಕು ಎಂದಿದ್ದರು. ಆದರೆ ತಾಯಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತ ಬಂದಿತ್ತು. ಇದೀಗ ಜೀವ ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ನನ್ನ ಪತ್ನಿ ಎಂದು ಆರೋಪಿಸಿದ್ದಾನೆ.
ಅನೈತಿಕ ಸಂಬಂಧ
ನನ್ನ ಪತ್ನಿ ಬ್ಯೂಟಿಷಿಯನ್. ಆಕೆ ನಮ್ಮ ಮನೆಯಲ್ಲೇ ಇರೋದು. ಇನ್ನು ನನ್ನ ಪತ್ನಿಗೆ ಅನೈತಿಕ ಸಂಬಂಧ ಇದೆ. ಆತನ ಹೆಸರು ರಂಗ ಅಂತಾ. ಮನೆಯಲ್ಲಿ ಆಗಾಗ ಇರುತ್ತಿರಲಿಲ್ಲ. ಹೇಳದೇ, ಕೇಳದೆ ಎಲ್ಲಿಗೋ ಹೋಗಿ ಬಿಡ್ತಿದ್ದಳು. ಮೂರು, ನಾಲ್ಕು ದಿನವಾದರೂ ಮನೆಗೆ ಬರುತ್ತಿರಲಿಲ್ಲ. ಇದನ್ನು ಕೇಳಿದ್ರೆ ನನಗೆ, ನನ್ನ ತಮ್ಮನಿಗೆ ಹಲ್ಲೆ ಮಾಡುತ್ತಾಳೆ. ಪೊಲೀಸರಿಗೆ ಹೇಳಿದ್ರೆ, ನಿಮ್ಮದು ಯಾವಾಗಲೂ ಇದ್ದದ್ದೇ ಹೋಗಿ ಅಂತಾ ಕಳುಹಿಸಿಬಿಡ್ತಾರೆ. ಇದನ್ನೆಲ್ಲ ಸಹಿಸಲು ಆಗದೇ, ಡಿವೋರ್ಸ್ಗೆ ಅರ್ಜಿ ಹಾಕಿದ್ದೇವು. ಡಿವೋರ್ಸ್ ಸಮಯದಲ್ಲಿ ಆಕೆ ಕೋರ್ಟ್ಗೆ ಬಂದಿರಲಿಲ್ಲ. ಆದರೂ ನಮಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ.
ಇದನ್ನೂ ಓದಿ: MG MOTORS ಇಂದ ಮೊದಲ EV ರೋಡ್ಸ್ಟರ್ ಕಾರು.. ಎಲ್ಲರೂ ಕೊಂಡುಕೊಳ್ಳಬಹುದಾ?
ನಾನು ಅಂಥವಳಲ್ಲ ಎಂದ ಪತ್ನಿ..
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಪಿ ರೇವತಿ.. ಅವರು ಹೇಳ್ತಿರೋದೆಲ್ಲ ಸುಳ್ಳು. ನಾನು ನನ್ನ ಅತ್ತೆಯ ಜೊತೆಗೆ ಇರಲಿಲ್ಲ. ಹಾಗಿದ್ದಾಗ ನಾನು ಹೇಗೆ ವಿಷ ನೀಡಲಿ. ಅವರಿಗೆ ವಯಸ್ಸಾಗಿತ್ತು, ಪ್ರಾಣ ಬಿಟ್ಟಿದ್ದಾರೆ. ನನ್ನ ಪತಿಯಿಂದಲೇ ನನಗೆ ಕಿರುಕುಳ ಇದೆ. ಒಂದೇ ಮನೆಯಲ್ಲಿ ನಾವಿದ್ದೇವೆ. ನಮಗೆ ಇಬ್ಬರು ಮಕ್ಕಳು. ನಾನು ಮಕ್ಕಳ ಜೊತೆ ಮೊದಲನೇ ಮಹಡಿಯಲ್ಲಿ ಇದ್ದೇವೆ. ಅವರು ಕೆಳಗಡೆ ಇದ್ದಾರೆ.
ಗಂಡನ ಕಿರುಕುಳ ತಾಳಲಾರದೇ ನಾನು ಡಿವೋರ್ಸ್ ಕೇಸ್ಗೆ ಅರ್ಜಿ ಹಾಕಿದ್ದೆ. ಬೆನ್ನಲ್ಲೇ ನನ್ನ ಮೆಲೆ ಸುಮಾರು 8 ಕೇಸ್ಗಳು ದಾಖಲಿಸಿದ್ದಾರೆ. ಏನೇನೋ ಸುಳ್ಳು ಹೇಳಿ ನನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ನನಗಿಂತ 30 ವರ್ಷ ದೊಡ್ಡವರ ಜೊತೆ ಮದುವೆ ಮಾಡಿದ್ದಾರೆ. ನಮಗೆ ಡಿವೋರ್ಸ್ ಸಿಕ್ಕಿ ನಾಲ್ಕು ವರ್ಷ ಆಗಿದೆ. ನನಗೆ ಅವರ ಜೊತೆ ಇರಲು ಇಷ್ಟವಿಲ್ಲ. ನನ್ನ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. ನನಗೆ ಜೀವನಾಂಶ ಬೇಕು. ಅವರ ಆಸ್ತಿಯಲ್ಲಿ ನನ್ನ ಮಕ್ಕಳಿಗೆ ಪಾಲು ಬೇಕು. ಮಕ್ಕಳಿಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಇಟ್ಟಿದ್ದಾಳೆ.
ಇದನ್ನೂ ಓದಿ: ಕೋಟಿ ಕೋಟಿ ಮೌಲ್ಯದ ಆಸ್ತಿ, 15 ಕಂಪನಿ, ಐಷಾರಾಮಿ ಜೀವನ ಎಲ್ಲ ಬಿಟ್ಟ.. ಶಿವಭಕ್ತನಾದ ಉದ್ಯಮಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ