ನಿನ್ನೆ ಬೆಳಗ್ಗೆ ಆಗಿದ್ದೇನು..? ಶೋಭಿತಾ ಶಿವಣ್ಣ ಪ್ರಕರಣದ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ಸಂಬಂಧಿ

author-image
Bheemappa
Updated On
ನಿನ್ನೆ ಬೆಳಗ್ಗೆ ಆಗಿದ್ದೇನು..? ಶೋಭಿತಾ ಶಿವಣ್ಣ ಪ್ರಕರಣದ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ಸಂಬಂಧಿ
Advertisment
  • ಬೆಳಗ್ಗೆ ಕೆಲಸದಾಕೆ ಬಂದು ಹೇಳಿದಾಗ ಬಾಗಿಲು ಮುರಿದ ಸುಧೀರ್​
  • ರಾತ್ರಿ ಮಲಗುವುದಕ್ಕೂ ಮೊದಲೇ ಯಾರ ಜೊತೆ ಮಾತನಾಡಿದ್ದರು?
  • ಹೆಂಡತಿ ಮಾತನಾಡುವುದನ್ನು ಕೇಳಿಸಿಕೊಂಡಿದ್ದಂತೆ ಗಂಡ ಸುಧೀರ್

ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಶಿವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಂಬಂಧಿ ವಿಜಯ್ ಎನ್ನುವರು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ವಿಜಯ್ ಅವರು, ಶೋಭಿತಾ ಶಿವಣ್ಣ ಹೇಗೆ ಕೊನೆಯುಸಿರೆಳೆದರು ಎನ್ನುವ ಕಾರಣ ಅವರ ಗಂಡ ಸುಧೀರ್​ಗೂ ಗೊತ್ತಿಲ್ಲ. ಅವರೇ ಹೋಗಿ ಬಾಗಿಲು ಮುರಿದು ನೋಡಿ ಫುಲ್ ಶಾಕ್ ಆಗಿದ್ದರು ಎಂದು ಹೇಳಿದ್ದಾರೆ.

ನಟಿ ಶೋಭಿತಾ ಶಿವಣ್ಣ ಅವರು ರಾತ್ರಿ ತಮ್ಮ ಕುಟುಂಬದ ಜೊತೆ ಮಾತಾಡಿದ್ದರು. ರಾತ್ರಿ ಗಂಡ-ಹೆಂಡತಿ ಇಬ್ಬರು ಊಟ ಮಾಡಿದ್ದರು. ಸುಧೀರ್ ಹಾಗೂ ಶೋಭಿತಾ ಬೇರೆ ಬೇರೆ ರೂಮ್​ನಲ್ಲಿದ್ದರು. ಆಫೀಸ್ ಕೆಲಸ ಮಾಡುತ್ತಲೇ ಸುಧೀರ್ ಹಾಗೆ ನಿದ್ದೆಗೆ ಜಾರಿದ್ದರು. ರಾತ್ರಿ ಶೋಭಿತಾ ತಮ್ಮ ಸಹೋದರಿ ಬಳಿ ಫೋನ್​ನಲ್ಲಿ ಮಾತಾಡುತ್ತಿರುವುದನ್ನ ಸಧೀರ್ ಕೇಳಿಸಿಕೊಂಡಿದ್ದನು ಎಂದು ಹೇಳಿದ್ದಾರೆ.

ಇದನ್ನೂ ಓದಿ:ತುಮಕೂರಲ್ಲಿ ಭೀಕರ ಬಸ್ ಅಪಘಾತ.. ಉಸಿರು ಚೆಲ್ಲಿದ ಮೂವರು, 20ಕ್ಕೂ ಹೆಚ್ಚು ಮಂದಿ ಗಂಭೀರ

publive-image

ಮುಂಜಾನೆ 8 ಗಂಟೆಗೆ ಮನೆ ಕೆಲಸದಾಕೆ ಬಂದು ಶೋಭಿತಾ ಬಾಗಿಲು ತೆಗೆಯುತ್ತಿಲ್ಲ ಎಂದು ಸುಧೀರ್​ ಬಳಿ ಹೇಳಿದ್ದಾಳೆ. ಸುಮಾರು ಅರ್ಧ ಗಂಟೆ ಶೋಭಿತಾ ರೂಮ್ ಬಾಗಿಲು ತೆಗೆಯಲು ಗಂಡ ಸುಧೀರ್ ಪ್ರಯತ್ನಿಸಿದ್ದಾರೆ. ಆದರೆ ಆಗಿಲ್ಲ. ಹೀಗಾಗಿಯೇ ಗಾಬರಿಗೊಂಡು ಅದೇ ಅಪಾರ್ಟ್ಮೆಂಟ್​ನಲ್ಲಿದ್ದ ಸ್ನೇಹಿತರು ಹಾಗೂ ಸಂಬಂಧಿಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆ ನಂತರ ರೂಮ್ ಬಾಗಿಲನ್ನು ಗಂಡ ಮುರಿದು ಹಾಕಿ ಒಳಗೆ ನೋಡಿ ಶಾಕ್ ಆಗಿದ್ದಾನೆ.

[caption id="attachment_99307" align="alignnone" width="800"]publive-image ಸುಧೀರ್ ಸ್ನೇಹಿತ ಹಾಗೂ ಸಂಬಂಧಿ ವಿಜಯ್[/caption]

ರೂಮ್ ಒಳಗೆ ಶೋಭಿತಾ ಅವರು ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರು ಪೊಲೀಸರಿಗೆ ಖುದ್ದು ಪತಿ ಸುಧೀರ್ ಅವರೇ ಮಾಹಿತಿ ನೀಡಿದ್ದಾರೆ. ಶೋಭಿತಾ ಸಾವಿನ ಬಗ್ಗೆ ಸುಧೀರ್​​ಗೂ ಕಾರಣವೇನು ಎಂಬುದು ಗೊತ್ತಿಲ್ಲ ಎಂದು ಅವರ ಸ್ನೇಹಿತ ಹಾಗೂ ಸಂಬಂಧಿ ವಿಜಯ್ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment