ರೀಲ್ಸ್ ಗೆಳೆಯನಿಗಾಗಿ ರಿಯಲ್‌ ಗಂಡನ ಕತ್ತು ಹಿಸುಕಿ ಸಾಯಿಸಿದ ಮಹಿಳೆ; ಇಂಚಿಂಚೂ ಮಾಹಿತಿ ಬಹಿರಂಗ!

author-image
admin
Updated On
ರೀಲ್ಸ್ ಗೆಳೆಯನಿಗಾಗಿ ರಿಯಲ್‌ ಗಂಡನ ಕತ್ತು ಹಿಸುಕಿ ಸಾಯಿಸಿದ ಮಹಿಳೆ; ಇಂಚಿಂಚೂ ಮಾಹಿತಿ ಬಹಿರಂಗ!
Advertisment
  • ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಲೇಡಿ!
  • ರೀಲ್ಸ್ ಪ್ರೇಮಿಯ ಅಕ್ರಮ ಸಂಬಂಧ ಪತ್ತೆ ಹಚ್ಚಿದ್ದ ಪತಿರಾಯ
  • ರೀಲ್ಸ್‌ ಮಾಡುತ್ತಲೇ ರವೀನಾ ಜೊತೆ ಚಕ್ಕಂದ ಆಡುತ್ತಿದ್ದ ಗೆಳೆಯ

ಕೆಲ ದಿನಗಳ ಹಿಂದೆಯಷ್ಟೇ ಉತ್ತರಪ್ರದೇಶದ ಮೀರತ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಪತಿಯನ್ನ ಕೊಂದು, ತುಂಡು ತುಂಡಾಗಿ ಕತ್ತರಿಸಿ ಸಿಮೆಂಟ್‌ ತುಂಬಿದ ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದ ಘಟನೆ ಬೆಳಕಿಗೆ ಬಂದಿತ್ತು. ಅದೇ ರೀತಿ ಮತ್ತೊಂದು ಪ್ರಕರಣ ಈಗ ಹರಿಯಾಣದ ಹಿಸಾರ್‌ ಜಿಲ್ಲೆಯಲ್ಲಿ ನಡೆದಿದೆ.

ರೀಲ್ಸ್‌ ಪ್ರಿಯನಿಗಾಗಿ ಮಹಿಳೆಯೊಬ್ಬಳು ದುಪ್ಪಟ್ಟಾದಿಂದ ತನ್ನ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಗಂಡ ಸುಂದರ ಮಹಿಳೆ ಆಕೆಯ ರೀಲ್ಸ್ ಪ್ರೇಮಿಯ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಬಳಿಕ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಮುಗಿಸಿದ್ದಾಳೆ ಎನ್ನಲಾಗಿದೆ. ರವೀನಾ (32) ಮತ್ತು ಸುರೇಶ್ ಕೊಲೆ ಆರೋಪಿಗಳಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

publive-image

ಆಂಟಿಗೆ ಲವ್‌ ಹುಟ್ಟಿದ್ದು ಹೇಗೆ?
32 ವರ್ಷದ ಈ ರವೀನಾ ಮತ್ತು ರೀಲ್ಸ್‌ ಸ್ಟಾರ್‌ ಸುರೇಶ್‌ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯವಾಗಿದ್ದರು. ಹರಿಯಾಣದ ಪ್ರೇಮ್‌ನಗರಲ್ಲಿ ಇಬ್ಬರು ಒಟ್ಟಿಗೆ ಶಾರ್ಟ್‌ ವಿಡಿಯೋ ಮಾಡಲು ಪ್ರಾರಂಭಿಸಿದ್ದರು. ಪ್ರವೀಣ್ ಹಾಗೂ ರವೀನಾ ದಂಪತಿಗೆ 6 ವರ್ಷದ ಮಗ ಸಹ ಇದ್ದ.

ಆಂಟಿಯ ಈ ರೀಲ್ಸ್‌ಗೆ ರವೀನಾಳ ಪತಿ ಪ್ರವೀಣ್‌ ಮತ್ತು ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ರು. ಆದಾಗ್ಯೂ ಸುಮಾರು ಒಂದೂವರೆ ವರ್ಷಗಳ ಕಾಲ ರವೀನಾ, ಸುರೇಶ್‌ ಇಬ್ಬರು ಕಂಟೆಂಟ್‌ ಕ್ರಿಯೇಟ್‌ ಮಾಡುತ್ತಿದ್ದರು. ಇದರಿಂದ ಇವರಿಬ್ಬರ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ಗಳ ಸಂಖ್ಯೆ 34,000ಕ್ಕೆ ತಲುಪಿತ್ತು.

publive-image

ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ!
ಜನಪ್ರಿಯರಾಗುತ್ತಿದ್ದಂತೆ ರವೀನಾ ಇತರೆ ಕಲಾವಿದರನ್ನೂ ಸೇರಿಸಿಕೊಂಡು ರೀಲ್ಸ್‌ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ರೀಲ್ಸ್‌ ಮಾಡುತ್ತಲೇ ರವೀನಾ ಮತ್ತು ಸುರೇಶ್‌ ಚಕ್ಕಂದ ಆಡಲು ಶುರು ಮಾಡಿದ್ದರಂತೆ. ಕಳೆದ ಮಾರ್ಚ್‌ 25ರಂದು ರವೀನಾಳ ಪತಿ ಪ್ರವೀಣ್‌ (35), ಇವರಿಬ್ಬರೂ ಅಕ್ರಮ ಸಂಬಂಧ ಇರುವುದನ್ನು ಪತ್ತೆ ಹಚ್ಚಿದ್ದ. ಹೀಗಾಗಿ ರವೀನಾ ತನ್ನ ಪ್ರಿಯಕರ ಸುರೇಶ್‌ ಜೊತೆ ಸೇರಿ ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಡಿಲಕ್ಕಿ ಕೊಟ್ಟು ಕಾನೂನು ಸಂಕಷ್ಟದಿಂದ ಪಾರು ಮಾಡುವಂತೆ ಶಕ್ತಿ ದೇವತೆಗೆ ‘ಪವಿತ್ರ’ ಪ್ರಾರ್ಥನೆ..! 

ಕಳೆದ ಮಾರ್ಚ್ 25ರಂದು ಪ್ರವೀಣ್ ಮನೆಗೆ ಬಂದಾಗ ಪತ್ನಿ ರವೀನಾ ಜೊತೆ ಯೂಟ್ಯೂಬರ್ ಸುರೇಶ್ ಇದ್ದಿದ್ದು ನೋಡಿದ್ದಾನೆ. ಈ ವೇಳೆ ಇಬ್ಬರನ್ನೂ ಲಾಕ್​ ಮಾಡಿ ಜಗಳವಾಡಿದ್ದಾನೆ. ಜಗಳ ನಡೆದು ಪ್ರಿಯಕರ ಸುರೇಶ್ ಹಾಗೂ ಪತ್ನಿ ರವೀನಾ ಒಟ್ಟಾಗಿ ಪತಿ ಪ್ರವೀಣ್​ನನ್ನ ದುಪ್ಪಟ್ಟಾದಿಂದ ಕತ್ತು ಹಿಸುಕಿ ಕೊಂದಿದ್ದಾರೆ. ಬಳಿಕ ರಾತ್ರಿ ವೇಳೆ ಬೈಕ್‌ನಲ್ಲಿ ಶವವನ್ನು ಸಾಗಿಸಿದ್ದಾರೆ.


">April 15, 2025

ಬೆಳಗಿನ ಜಾವ 2.30 ರ ಸುಮಾರಿಗೆ, ಇಬ್ಬರೂ ಪ್ರವೀಣ್ ಮೃತದೇಹವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ರವೀನಾಳ ಮನೆಯಿಂದ 6 ಕಿಲೋ ಮೀಟರ್ ದೂರದಲ್ಲಿರುವ ಚರಂಡಿಯಲ್ಲಿ ಎಸೆದು ಬಂದಿದ್ದರು. ರವೀನಾ ಬೈಕ್‌ನಲ್ಲಿ ಗಂಡನ ಮೃತದೇಹ ಸಾಗಿಸುತ್ತಿರುವ ಸಿಸಿಟಿವಿ ವಿಡಿಯೋ ಪೊಲೀಸರ ತನಿಖೆ ವೇಳೆ ಹೊರಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment