/newsfirstlive-kannada/media/post_attachments/wp-content/uploads/2025/02/husky.jpg)
ಬೀಜಿಂಗ್: ಪ್ರತಿಯೊಬ್ಬ ವ್ಯಕ್ತಿಯು ತನ್ನ ಕುಟುಂಬಕ್ಕಾಗಿ ಹಗಲು ರಾತ್ರಿ ಎನ್ನದೇ ದುಡಿಯುತ್ತಾ ಇರುತ್ತಾನೆ. ಆದ್ರೆ ಅನೇಕರು ತಮ್ಮ ಕಠಿಣ ಪರಿಶ್ರಮಕ್ಕೆ ಸಂಬಳ ಸಿಗದೆ ಕಷ್ಟಪಡುತ್ತಾರೆ. ಆದರೆ, ಒಂದೇ ಒಂದು ನಾಯಿ ಕೇವಲ ಮೂರು ದಿನಗಳಲ್ಲಿ ಲಕ್ಷ ರೂಪಾಯಿಗಳನ್ನು ಗಳಿಸಿದೆ ಎಂದರೆ ನಂಬಲು ಸಾಧ್ಯವೆ? ಹೌದು, ನಂಬಲು ಅಸಾಧ್ಯವಾದರು ಇದು ನಿಜ. ನಾಯಿಯ ಗಳಿಕೆ ಮತ್ತು ಅದರ ವಿಧಾನದ ಬಗ್ಗೆ ಕೇಳಿ ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ. ಒಂದು ನಾಯಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಹೇಗೆ ಗಳಿಸುತ್ತದೆ? ಇದರ ಹಿಂದಿನ ಯಶಸ್ಸಿನ ಕಥೆ ಏನು ಅಂತ ಜನರು ಹುಡುಕಾಡುತ್ತಿದ್ದಾರೆ.
ಇದನ್ನೂ ಓದಿ:ಕೆಂಪು ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ರಾಮಾಚಾರಿ ಸೀರಿಯಲ್ ನಟಿ; ದೇವಿಕಾ ಭಟ್ ಬ್ಯೂಟಿಗೆ ಫ್ಯಾನ್ಸ್ ಫಿದಾ!
ಹಸ್ಕಿ ತಳಿಯ ಈ ನಾಯಿ ಚೈನೀಸ್ ಹೋಮ್ ಸ್ಟೇಯಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತದೆ. ಇದನ್ನು ಹಕಿಮಿ ಎಂದು ಕರೆಯಲಾಗುತ್ತದೆ. ಈ ನಾಯಿಯನ್ನು ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ಜನಪ್ರಿಯ ಪ್ರವಾಸಿ ನಗರವಾದ ಲಿಜಿಯಾಂಗ್‌ನಲ್ಲಿ ಹೋಂಸ್ಟೇ ಮಾಲೀಕರಾದ ಕ್ಸು ಬೆಳೆಸಿದರು. ಈ ನಾಯಿ ಕೇವಲ ಮೂರು ದಿನಗಳಲ್ಲಿ 200,000 ಯುವಾನ್ (US$27,000) (ರೂ. 27 ಲಕ್ಷ) ಗಳಿಸಿತು. ಹಕಿಮಿಯ ಮಾಲೀಕರು ಕೇವಲ ಮೂರು ದಿನಗಳಲ್ಲಿ ಸುಮಾರು 200 ಮೀಟರ್ ಟ್ರಾಲಿಯನ್ನು ಎಳೆದು 23 ಲಕ್ಷ ರೂ.ಗಳನ್ನು ಹೇಗೆ ಗಳಿಸಿದರು ಎಂಬುದನ್ನು ವಿವರಿಸಿದ್ದಾರೆ.
ಈ ಶ್ವಾನ ಹಕಿಮಿ, ಮೃಗಾಲಯಕ್ಕೆ ಬರುವ ಅತಿಥಿಗಳ ಸಾಮಾನುಗಳನ್ನು ಅವರ ಇಚ್ಛೆಗೆ ಅನುಗುಣವಾಗಿ ಹೊತ್ತೊಯ್ಯುತ್ತದೆ. ಹಕಿಮಿ ಸಾಮಾನ್ಯವಾಗಿ ದಿನಕ್ಕೆ ಮೂರರಿಂದ ಆರು ಬಾರಿ ಟ್ರಾಲಿಯಲ್ಲಿ ಸಾಮಾನುಗಳನ್ನು ಒಯ್ಯುತ್ತದೆಯಂತೆ. ಹಕಿಮಿ ಒದಗಿಸುವ ವಿಶಿಷ್ಟ ಸೇವೆಯಿಂದಾಗಿ ಸುಮಾರು 80 ಪ್ರತಿಶತ ಹೋಂಸ್ಟೇ ಅತಿಥಿಗಳು ಅಲ್ಲಿಯೇ ಉಳಿಯಲು ಬಯಸುತ್ತಾರೆ. ಅಲ್ಲದೇ ಹಕಿಮಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಈ ಸಾಕು ನಾಯಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬಹುತೇಕ ಎಲ್ಲಾ ವೀಡಿಯೊಗಳು 1 ಮಿಲಿಯನ್‌ನಿಂದ 10 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ