Advertisment

ಭಾರತ್​ ಮಹಾ ಆರತಿ ಕಾರ್ಯಕ್ರಮದಲ್ಲಿ ಬೆಂಕಿ ಅವಘಡ.. ಕೆರೆ ಮಧ್ಯದಲ್ಲಿ ಹೊತ್ತಿ ಉರಿದ 2 ಬೋಟ್​​ಗಳು..!

author-image
Ganesh
Updated On
ಭಾರತ್​ ಮಹಾ ಆರತಿ ಕಾರ್ಯಕ್ರಮದಲ್ಲಿ ಬೆಂಕಿ ಅವಘಡ.. ಕೆರೆ ಮಧ್ಯದಲ್ಲಿ ಹೊತ್ತಿ ಉರಿದ 2 ಬೋಟ್​​ಗಳು..!
Advertisment
  • ಹೈದ್ರಾಬಾದ್​​ನ ಹುಸೇನ್ ಸಾಗರದಲ್ಲಿ ಅಗ್ನಿ ಅವಘಡ
  • ಪಟಾಕಿ ಸಿಡಿಸುವ ವೇಳೆ 2 ಬೋಟ್​ಗಳು ಸುಟ್ಟು ಭಸ್ಮ
  • ಬೋಟ್​ನಲ್ಲಿದ್ದ 15 ಮಂದಿಗೆ ಸೇಫ್​.. ಓರ್ವನಿಗೆ ಗಂಭೀರ ಗಾಯ

ನೆರೆಯ ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನಗರದ ಹೃದಯ ಭಾಗದಲ್ಲಿರುವ ಹುಸೈನ್​​ ಸಾಗರ್​ ಕೆರೆಯಲ್ಲಿದ್ದ ಎರಡು ಬೋಟ್​​ಗಳು ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಬೋಟ್​​ನಲ್ಲಿದ್ದ 15 ಮಂದಿ ಅದೃಷ್ಟವಶಾತ್ ಪ್ರಾಣಪಾಯದಿಂದ ಬಚಾವ್​ ಆಗಿದ್ದಾರೆ.

Advertisment

ಕೆರೆ ಮಧ್ಯದಲ್ಲಿ ಹೊತ್ತಿ ಉರಿಯುತ್ತಿರುವ ಬೋಟ್​​ಗಳು

ಭಾರತ ಸಂವಿಧಾನದನ 75ನೇ ವರ್ಷದ ಪ್ರಯುಕ್ತ ಹೈದ್ರಾಬಾದ್​​ನ ಹುಸೇನ್ ಸಾಗರ್​ ಕೆರೆ ಬಳಿಯನೆಕ್ಲೇಸ್ ರಸ್ತೆಯ ಪೀಪಲ್ಸ್ ಪ್ಲಾಜಾದಲ್ಲಿ 8ನೇ ವರ್ಷದ ಭಾರತ್​ ಮಹಾ ಆರತಿ ಕಾರ್ಯಕ್ರಮವನ್ನು ಕೇಂದ್ರ ಸಚಿವ ಕಿಶನ್​ ರೆಡ್ಡಿ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯಪಾಲರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.. ಭಾರತ್ ಮಾತಾ ಮಹಾ ಆರತಿ ಕಾರ್ಯಕ್ರಮದ ಅಂಗವಾಗಿ ಕೆರೆ ಮಧ್ಯೆ ಬೋಟ್​ಗಳಲ್ಲಿ ಪಟಾಕಿ ಸಿಡಿಸಲಾಗಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಬರೋಬ್ಬರಿ 65,000 ಸಂಬಳ; ಕೂಡಲೇ ಅಪ್ಲೈ ಮಾಡಿ

publive-image

ಈ ವೇಳೆ ಪಟಾಕಿಯ ಕಿಡಿ ಬಿದ್ದು, ಬೋಟ್​ನಲ್ಲಿ ಸಂಗ್ರಹಿಸಿದ್ದ ಇತರೆ ಪಟಾಕಿಗಳಿಗೂ ಬೆಂಕಿ ತಗುಲಿ ಸ್ಫೋಟಗೊಂಡಿದೆ. ಇದರಿಂದ ನೋಡ ನೋಡ್ತಿದ್ದಂತೆ ಇಡೀ ಬೋಡ್​ ನೀರಿನಲ್ಲೇ ಧಗಧಗನೆ ಹೊತ್ತಿ ಉರಿದಿದೆ. ಇದರ ಪಕ್ಕದಲ್ಲಿದ್ದ ಮತ್ತೊಂದು ಬೋಟ್​ಗೂ ಬೆಂಕಿ ಅವರಿಸಿದ್ದು, ಎರಡೂ ಬೋಟ್​ಗಳು ಸುಟ್ಟು ಹೋಗಿವೆ.

Advertisment

ಬೋಟ್​ನಲ್ಲಿದ್ದ 15 ಮಂದಿಗೆ ಸೇಫ್​.. ಓರ್ವನಿಗೆ ಗಂಭೀರ ಗಾಯ

ಪಟಾಕಿ ಸಿಡಿತದಿಂದ ಬೋಟ್​ಗೆ ಬೆಂಕಿ ತಗಲುತ್ತಿದ್ದಂತೆ, ಅದರಲ್ಲಿದ್ದ 15 ಮಂದಿ ನೀರಿಗೆ ಜಿಗಿಯುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ. ಆದ್ರೆ ದುರಾದೃಷ್ಟವಶಾತ್​, ಓರ್ವನಿಗೆ ಮಾತ್ರ ಗಂಭೀರ ಪರಿಣಾಮ ಸುಟ್ಟಗಾಯಗಳಾಗಿವೆ. ನೀರಿಗೆ ಜಿಗಿದವರನ್ನು ಕೂಡಲೇ ಇತರೆ ಬೋಟ್​ಗಳ ಮೂಲಕ ತೆರಳಿ ರಕ್ಷಣೆ ಮಾಡಲಾಯ್ತು.. ​ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಒಟ್ಟಿನಲ್ಲಿ ಬೆಂಕಿ ಅವಘಡದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.. ಈ ಅವಘಡಕ್ಕೆ ಕಾರಣ ಕಾರ್ಯಕ್ರಮದ ಆಯೋಜಕ ಬೇಜವಾಬ್ದಾರಿಯೋ ಇಲ್ಲಾ ಆಕಸ್ಮಿಕವೋ ಅನ್ನೋದು ತನಿಖೆಯಲ್ಲಿ ತಿಳಿಯಬೇಕಿದೆ.

ಇದನ್ನೂ ಓದಿ: ಪ್ರಸಿದ್ಧ ಗಾಯಕಿಯ ಮೊಮ್ಮಗಳ ಜೊತೆ ಟೀಮ್ ಇಂಡಿಯಾದ ಸ್ಟಾರ್ ಪೇಸರ್​.. ಲವ್​ನಲ್ಲಿ ಬಿದ್ರಾ ಸಿರಾಜ್?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment