newsfirstkannada.com

ನವಜಾತ ಶಿಶುವಿನಿಂದ 1 ವರ್ಷದವರೆಗಿನ ಮಕ್ಕಳ ಅಕ್ರಮ ಮಾರಾಟ.. ಎಷ್ಟು ಹಣಕ್ಕೆ ಮಾರಾಟ ಮಾಡ್ತಿದ್ರು ಗೊತ್ತಾ?

Share :

Published May 29, 2024 at 9:34am

  ಇಡೀ ನಗರವನ್ನೇ ಬೆಚ್ಚಿಬೀಳಿಸಿದ ಮಕ್ಕಳ ಮಾರಾಟದ ಗ್ಯಾಂಗ್​

  ಕಾರ್ಯಾಚರಣೆ ಮಾಡಿ ಮಕ್ಕಳನ್ನು ರಕ್ಷಣೆ ಮಾಡಿದ ಪೊಲೀಸರು

  ಮಕ್ಕಳನ್ನು ಯಾರು, ಯಾರಿಗೆ ಮಾರಾಟ ಮಾಡುತ್ತಿದ್ದರು ಗೊತ್ತಾ?

ಹೈದರಾಬಾದ್: ನವಜಾತ ಶಿಶು ಹಾಗೂ 1 ವರ್ಷದ ಮಕ್ಕಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಅನ್ನು ತೆಲಂಗಾಣದ ರಾಚಕೊಂಡ ವ್ಯಾಪ್ತಿಯ ಮೆಡಿಪಲ್ಲಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಈಗಾಗಲೇ ಗ್ಯಾಂಗ್‌ನಿಂದ ಒಟ್ಟು 16 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ರಾಚಕೊಂಡ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನವಜಾತ ಶಿಶುಗಳನ್ನ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಪ್ರಕರಣ ಬೆಳಕಿಗೆ ಬಂದಿತ್ತು. 4 ದಿನದ ಹಿಂದೆ ಪೀರ್ಜಾಡಿಗುಡ್ಡದಲ್ಲಿ ಡಾ.ಶೋಭಾರಾಣಿ ಎನ್ನುವವರು ಶಿಶುವನ್ನು 4.50 ಲಕ್ಷಕ್ಕೆ ಮಾರಾಟ ಮಾಡಿದ್ದರು. ಪ್ರಕರಣದ ಜಾಲ ಬೆನ್ನತ್ತಿದ ಪೊಲೀಸರು ಆಕೆಯ ಸಹಾಯದಿಂದ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಮಕ್ಕಳನ್ನು 50 ಸಾವಿರದಿಂದ 5.50 ಲಕ್ಷದವರೆಗೆ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ. ಒಟ್ಟು 16 ಹೆಣ್ಣು ಮಕ್ಕಳನ್ನು ಮಾರಾಟ ಮಾಡಿರುವುದು ತನಿಖೆಯಿಂದ ಖಚಿತವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗ್ಯಾಂಗ್​ನಲ್ಲಿ ತೊಡಗಿದ್ದ ಏಜೆಂಟ್‌ಗಳು ಮತ್ತು ಸಬ್ ಏಜೆಂಟ್ಸ್​ ಸೇರಿ ಒಟ್ಟು 8 ಆರೋಪಿಗಳನ್ನು ಬಂಧಿಸಿಲಾಗಿದೆ. ಪ್ರಮುಖ ಆರೋಪಿಗಳಾದ ಶೋಭಾರಾಣಿ, ಸಲೀಂ ಮತ್ತು ಸ್ವಪ್ನಾಳನ್ನ ಬಂಧಿಸಿದ್ದು ಇದೇ ವೇಳೆ 2 ಮಕ್ಕಳನ್ನು ರಕ್ಷಿಸಲಾಗಿದೆ. ಆರೋಪಿಗಳು ಯಾರಿಗೆ ಮಕ್ಕಳಿರಲ್ಲವೋ ಅವರಿಗೆ ದುಬಾರಿ ಹಣ ಪಡೆದುಕೊಂಡು ಮಾರಾಟ ಮಾಡುತ್ತಿದ್ದರು ಎಂಬುವುದು ಪತ್ತೆಯಾಗಿದೆ. ದೆಹಲಿ ಮತ್ತು ಪುಣೆಯಲ್ಲಿನ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನವಜಾತ ಶಿಶುವಿನಿಂದ 1 ವರ್ಷದವರೆಗಿನ ಮಕ್ಕಳ ಅಕ್ರಮ ಮಾರಾಟ.. ಎಷ್ಟು ಹಣಕ್ಕೆ ಮಾರಾಟ ಮಾಡ್ತಿದ್ರು ಗೊತ್ತಾ?

https://newsfirstlive.com/wp-content/uploads/2024/05/TLN_BABYS.jpg

Load More