Advertisment

ಅಲ್ಲು ಅರ್ಜುನ್ ಅರೆಸ್ಟ್​; ಸಂಚಲನ ಮೂಡಿಸಿದ ಪೊಲೀಸ್ ಅಧಿಕಾರಿ ಹೇಳಿಕೆ

author-image
Bheemappa
Updated On
ಅಲ್ಲು ಅರ್ಜುನ್ ಅರೆಸ್ಟ್​; ಸಂಚಲನ ಮೂಡಿಸಿದ ಪೊಲೀಸ್ ಅಧಿಕಾರಿ ಹೇಳಿಕೆ
Advertisment
  • ರಿಮ್ಯಾಂಡ್ ರೂಮ್​ಗೆ ಹಾಕಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆಯಾ?
  • ನಟ ಬಂಧನದ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿ
  • ಡಿಸೆಂಬರ್ 4 ರಂದು ಅನುಮತಿ ಪಡೆಯದೇ ಅಲ್ಲಿಗೆ ಹೋಗಿದ್ರಾ ನಟ?

ಹೈದರಾಬಾದ್: ಪುಷ್ಪ ಮೂವಿಯ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಸಂಬಂಧ ಹೈದರಾಬಾದ್​ನ ಪೊಲೀಸ್ ಅಧಿಕಾರಿ ಸಿಪಿ ಸಿವಿ ಆನಂದ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Advertisment

ಸಂಧ್ಯಾ ಥಿಯೇಟರ್​ ಬಳಿ ಕಾಲು ತುಳಿತಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದೇವೆ. ನಟ ಅಲ್ಲಿಗೆ ಹೋಗಿದ್ದಕ್ಕೆ ಕಾಲ್ತುಳಿತ ಆಗಿದೆ. ಹೀಗಾಗಿ ಅವರನ್ನು ಅರೆಸ್ಟ್ ಮಾಡಿದ್ದು ಉಸ್ಮಾನಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಂದ ಆರೋಗ್ಯ ಪರಿಶೀಲನೆ ಮಾಡಲಾಗುತ್ತದೆ. ಬಳಿಕ ಅವರನ್ನು ನಾಮಪಲ್ಲಿ ಕೋರ್ಟ್​ಗೆ ಹಾಜರು ಪಡಿಸಲಾಗುತ್ತದೆ. ಕೋರ್ಟ್​ ರಿಮ್ಯಾಂಡ್​ಗೆ ಕಳುಹಿಸಬಹುದೆಂದು ಈಗಾಗಲೇ ನಮ್ಮ ಅಧಿಕಾರಿಗಳು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ರಿಮ್ಯಾಂಡ್ ರಿಪೋರ್ಟ್ ಅನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಅಲ್ಲು ಅರ್ಜುನ್ ಅವರ ಸ್ಟೇಟ್​ಮೆಂಟ್ ಅನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಿಪಿ ಸಿವಿ ಆನಂದ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಲ್ತುಳಿತ ಪ್ರಕರಣಕ್ಕೆ ಮರುಗಿರುವ ಅಲ್ಲು ಅರ್ಜುನ್; ಅಂದೇ 25 ಲಕ್ಷ ಘೋಷಿಸಿ ಏನ್ ಹೇಳಿದ್ದರು..?

publive-image

ಅಲ್ಲು ಅರ್ಜುನ್ ಕಾಲುತುಳಿತಕ್ಕೆ ಕಾರಣ ಎಂದು ಸಿ.ಪಿ ಆನಂದ್ ನೇರವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಹೇಳಿಕೆ ಆಂಧ್ರದಲ್ಲಿ ಸಂಚಲನ ಮೂಡಿಸಿದೆ. ಇನ್ನು ಅಲ್ಲು ಅರ್ಜುನ್ ಅವರ ಜೊತೆ ತಂದೆ ಅಲ್ಲು ಅರವಿಂದ್ ಅವರು ಪೊಲೀಸ್ ಕಾರು ಹತ್ತಿದ್ದರು. ಆದರೆ ಒಳ್ಳೆದಾದರೂ, ಕೆಟ್ಟದಾದರೂ ಎಲ್ಲ ನನಗೆ ಇರಲಿ ಎಂದು ತಂದೆಗೆ ಹೇಳಿ ನಗು ನಗುತ್ತ ಅಲ್ಲಿ ಅರ್ಜುನ್ ಕಾರು ಹತ್ತಿದ್ದರು. ಸದ್ಯ ಈ ಸಂಬಂಧದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Advertisment

ಚಿಕ್ಕಡಪಲ್ಲಿ ಪೊಲೀಸ್ ಠಾಣೆ ಬಳಿ ಭಾರೀ ಸಂಖ್ಯೆಯಲ್ಲಿ ಅಲ್ಲು ಅರ್ಜುನ್ ಫ್ಯಾನ್ಸ್​ ಸೇರಿಕೊಂಡಿದ್ದು ತಗ್ಗೇದೇಲೇ ಎಂದು ಕೂಗುತ್ತಿದ್ದಾರೆ ಎನ್ನಲಾಗಿದೆ. ಇದರ ಜೊತೆ ಹೈದರಾಬಾದ್​ನ ಶಾಲೆ ಒಂದರಲ್ಲಿ ಈ ಸಲ ನಮ್ಮವನೇ ಮುಖ್ಯಮಂತ್ರಿ (ಮಾ ವಾಡೇ ಸಿಎಂ) ಎಂದು ಅಭಿಮಾನಿಗಳು ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment