newsfirstkannada.com

‘ನಾಲ್ವರು ಪೊಲೀಸರು ಮೃಗೀಯವಾಗಿ ಹೊಡೆದರು.. ಮಹಿಳಾ ಪೊಲೀಸ್ ನೋಡುತ್ತ ಕೂತಿದ್ದಳು..’ ದಲಿತ ಮಹಿಳೆ ಕಣ್ಣೀರು

Share :

Published August 20, 2023 at 1:11pm

Update August 20, 2023 at 1:13pm

    ಕಸ್ಟಡಿಯಲ್ಲಿ ಪೊಲೀಸ್ ಅಧಿಕಾರಿಗಳು ಕೊಟ್ರಂತೆ ಚಿತ್ರಹಿಂಸೆ

    ಮಹಿಳೆಯ ಕತೆ ಕೇಳಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತದೆ

    3 ಲಕ್ಷ ಹಣವೂ ಇಲ್ಲ, ಚಿನ್ನಭಾರಣವೂ ಇಲ್ಲ, ನ್ಯಾಯ ಎಲ್ಲಿದೆ..?

ನಾಲ್ವರು ಪೊಲೀಸರು ಒಂದೇ ಸಮನೆ ಹೊಡೆಯುತ್ತಿದ್ದರು. ಅಲ್ಲಿದ್ದ ಮಹಿಳಾ ಪೊಲೀಸ್ ನನ್ನನ್ನು ನೋಡುತ್ತ ನಿಂತಿದ್ದರು. ರಾತ್ರಿ ಇಡೀ ಚಿತ್ರಹಿಂಸೆ ನೀಡಿದರು. ಕೈಕಾಲುಗಳು ಬಾತು ಹೋಗಿವೆ. ಮೇಲೆ ಏಳಲು ಆಗುತ್ತಿಲ್ಲ. ನಾನು ಮಾಡಿದ ತಪ್ಪಾದರೂ ಏನು ಸ್ವಾಮಿ? ನನಗೆ ನ್ಯಾಯ ಕೊಡಿ.. ಸ್ವಾಮಿ-ಸಂತ್ರಸ್ತ ದಲಿತ ಮಹಿಳೆ

ಹೌದು.. ಹೈದರಾಬಾದ್​ನ ಎಲ್​ಬಿ ನಗರದಲ್ಲಿ ಆಗಸ್ಟ್​ 16 ರಂದು ನಡೆದ ಘಟನೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ದಲಿತ ಮಹಿಳೆ ಲಕ್ಷ್ಮೀ ಎಂಬಾಕೆಯನ್ನು ಠಾಣೆಗೆ ಕರೆದೊಯ್ದ ನಾಲ್ವರು ಪೊಲೀಸ್ ಅಧಿಕಾರಿಗಳು ಮನೆ ಬಂದಂತೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣ ಇಂದು ಭಾರೀ ಚರ್ಚೆಗೆ ಕಾರಣವಾಗಿದೆ.

‘ಇಬ್ಬರು ಅಧಿಕಾರಿಗಳು ಗಸ್ತು ತಿರುಗುತ್ತಿದ್ದರು..’

ಸಂತ್ರಸ್ತ ಲಕ್ಷ್ಮೀ ಮಾಡಿರುವ ಆರೋಪದಂತೆ, ‘ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದರು. ನಾನು ಎಲ್ಲಿಗೆ ಎಂದು ಕೇಳುವಷ್ಟರಲ್ಲಿ ಗಾಡಿ ಮೇಲೆ ನನ್ನನ್ನು ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಮೇಲೆ ಹಲ್ಲೆ ಮಾಡಲು ಮತ್ತಿಬ್ಬರು ಅಧಿಕಾರಿಗಳು ಸೇರಿಕೊಂಡರು. ಮೃಗೀಯವಾಗಿ ನಡೆಸಿಕೊಂಡರು. ತೀವ್ರವಾಗಿ ಹೊಡೆದ ಹಿನ್ನೆಲೆಯಲ್ಲಿ ನಂಗೆ ಗಂಭೀರವಾಗಿ ಗಾಯ ಆಗಿದೆ. ಬೆನ್ನು, ತೊಡೆ, ಕೈಗಳಿಗೆ ಏಟು ಬಿದ್ದಿದೆ. ಕೇವಲ ನನಗೆ ಹಿಂಸೆ ಮಾತ್ರ ನೀಡಲ್ಲ. ಥಳಿಸುವಾಗ ಕೆಟ್ಟ ಪದಗಳನ್ನು ಬಳಸಿದರು. ಅಲ್ಲಿ ಓರ್ವ ಮಹಿಳಾ ಅಧಿಕಾರಿ ಕೂಡ ಇದ್ದರು. ಅವರು ನನ್ನ ಮೇಲೆ ಹಲ್ಲೆ ಮಾಡಲಿಲ್ಲ. ನಾಲ್ವರು ನನಗೆ ಚಿತ್ರಹಿಂಸೆ ನೀಡುತ್ತಿರೋದನ್ನು ನೋಡುತ್ತ ಅವರು ಕೂತಿದ್ದರು ಎಂದು ಸಂತ್ರಸ್ತೆ ಕಣ್ಣೀರಿಟ್ಟಿದ್ದಾಳೆ.

ಪ್ರಕರಣದ ಬಗ್ಗೆ ವಕೀಲೆ ದೀಪ್ತಿ ರಾಥೋಡ್ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿ.. ಪೊಲೀಸರು ಕೊಟ್ಟ ಟಾರ್ಚರ್​​ನಿಂದಾಗಿ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಆಕೆಗೆ ಹಿಂಸೆ ನೀಡಿದ ಪೊಲೀಸ್ ಅಧಿಕಾರಿಗಳು ಯಾರು ಅನ್ನೋದ್ರ ಬಗ್ಗೆ ಅಸ್ಪಷ್ಟವಾಗಿದೆ ಎಂದಿದ್ದಾರೆ. ದೀಪ್ತಿ ಅವರು ‘ಗೊರ್ಸಿ ಬುಡಕಟ್ಟು ಸಮುದಾಯ’ದ ರಾಜ್ಯಾಧ್ಯಕ್ಷರಾಗಿದ್ದಾರೆ.

ಅವತ್ತು ಆಗಿದ್ದು ಏನು..?

ಲಕ್ಷ್ಮೀ, ಕೂಲಿ ಕಾರ್ಮಿಕೆ. ನಂದಿ ಹಿಲ್ಸ್​ನಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮೀ, ಬುಧವಾರ ರಾತ್ರಿ ಎಲ್​.ಬಿ.ನಗರದಲ್ಲಿರುವ ಚಿಕ್ಕಪ್ಪನ ಭೇಟಿ ಮಾಡಲು ಬಂದಿದ್ದಳು. ಭೇಟಿ ಮಾಡಿದ ಬಳಿಕ ವಾಪಸ್ ಹೋಗಲು ಆಟೋಗಾಗಿ ಕಾಯುತ್ತಿದ್ದಳು. ರಾತ್ರಿ 11.30ರ ಸುಮಾರಿಗೆ ಪೊಲೀಸರು ಆಕೆ ನಿಂತಿದ್ದ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ. ನಂತರ ಆಕೆಯನ್ನು ಎಲ್​ಬಿ ನಗರ ಠಾಣೆಗೆ ಕರೆದುಕೊಂಡು, ಬೆಳಗ್ಗೆವರೆಗೂ ಅಮಾನುಷವಾಗಿ ತರಾಟೆ ತೆಗೆದುಕೊಂಡಿದ್ದಾರೆ ಎಂದು ದೂರಲಾಗಿದೆ.

3 ಲಕ್ಷ ಹಣ ದೋಚಿದ್ರಾ ಪೊಲೀಸ್..!?

ಲಕ್ಷ್ಮಿ ಮಗಳು ಪೂಜಾ (19) ನೀಡಿದ ದೂರಿನಲ್ಲಿ, ಅಮ್ಮನ ಬಳಿಯಿದ್ದ 3 ಲಕ್ಷ ರೂಪಾಯಿ ಕಾಣೆಯಾಗಿದೆ. ಮಾತ್ರವಲ್ಲ, ಅವರ ಕಿವಿಯಲ್ಲಿದ್ದ ಇಯರ್​​ ರಿಂಗ್ ಕೂಡ ಮಿಸ್ಸಿಂಗ್ ಆಗಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಲಕ್ಷ್ಮೀ ಬಾಮೈದ ವದ್ಯತಾ ಶ್ರೀನಿವಾಸ್, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಲೈಂಗಿಕ ದೌರ್ಜನ್ಯ ನಡೆದಿಲ್ಲ-ವೈದ್ಯರು ಸ್ಪಷ್ಟನೆ

ಕರ್ಮನ್​ಘಾಟ್​​ನಲ್ಲಿರುವ ಜೀವನ್ ಆಸ್ಪತ್ರೆಯ ವೈದ್ಯರು, ಲೈಂಗಿಕ ದೌರ್ಜನ್ಯದ ಬಗ್ಗೆ ನಿರಾಕರಿಸಿದ್ದಾರೆ. ಆಕೆಯ ಮೇಲೆ ಲೈಂಗಿಕ ಕಿರುಕುಳ ನಡೆದಿರೋದು ತಪಾಸಣೆ ವೇಳೆ ತಿಳಿದುಬಂದಿಲ್ಲ ಎಂದು ಸ್ತ್ರೀರೋಗ ತಜ್ಞ ಡಾ.ದುರ್ಗಾ ರಾಣಿ ತಿಳಿಸಿದ್ದಾರೆ. ಅದೇ ರೀತಿ ಆಕೆಯ ಮೂಳೆಗಳಿಗೆ ಯಾವುದೇ ಹಾನಿಯಾಗಿಲ್ಲ. ಅಲ್ಟ್ರಾಸೌಂಡ್ ಸ್ಕ್ಯಾನ್​ನಲ್ಲಿ ಆಕೆಯ ಕಿಬ್ಬೊಟ್ಟೆ, ಲಿವರ್, ಕಿಡ್ನಿಗಳಿಗೆ ಹಾನಿಯಾಗಿಲ್ಲ ಎಂದು ಡಾ. ಸಿ.ವೆಂಕಟೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರ ಈ ನಡೆ ಬಗ್ಗೆ ಖಂಡನೆ ವ್ಯಕ್ತವಾಗಿದ್ದು, ಕುಟುಂಬದ ಸದಸ್ಯರು, ಬಹುಜನ ಸಮಾಜವಾದಿ ಪಕ್ಷದ ನಾಯಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಆಸ್ಪತ್ರೆಯ ಮುಂಭಾಗದಲ್ಲಿರುವ ರಸ್ತೆಯಲ್ಲಿ ನಿಂತು ವಾಹನಗಳ ಸಂಚಾರವನ್ನು ತಡೆದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ಶಾಸಕ ರಘುನಂದನ್ ರಾವ್ ಭೇಟಿ ನೀಡಿ, ಮಾತುಕತೆ ಕೂಡ ನಡೆಸಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಿದ ಕೇಸ್..!

ಲಕ್ಷ್ಮೀ ಕುಟುಂಬಕ್ಕೆ ಸರ್ಕಾರದಿಂದ ಕೆಲಸ ಕೊಡುವಂತೆ ಎಸ್​​.ಟಿ.ಸಮುದಾಯದ ಸಂಘಟನೆಗಳು ಆಗ್ರಹಿಸಿವೆ. ಪರಿಹಾರವಾಗಿ ಎರಡು ಬೆಡ್​ರೂಮ್ ಇರುವ ಮನೆಯನ್ನೂ ಸರ್ಕಾರ ಆಕೆಗೆ ಒದಗಿಸಿಕೊಡಬೇಕು. ಕೃತ್ಯದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿವೆ. ಮಹಿಳೆಯ ನ್ಯಾಯಕ್ಕಾಗಿ ವಕೀಲ ಶ್ರೀನಾಥ್ ರೆಡ್ಡಿ ಮೂಲಕ ತೆಲಂಗಾಣ ಹೈಕೋರ್ಟ್​ ಮೊರೆ ಹೋಗಲು ನಿರ್ಧರಿಸಲಾಗಿದೆ. ಮುಂದಿನ ವಾರ ಹೈಕೋರ್ಟ್​ನಲ್ಲಿ ಈ ಪ್ರಕರಣ ವಿಚಾರಣೆ ನಡೆಯಲಿದೆ.
ಟಾರ್ಚರ್ ಆರೋಪ ಸಂಬಂಧ ಎಫ್​ಐಆರ್ ಕೂಡ ದಾಖಲಾಗಿದೆ. ಐಪಿಸಿ ಸೆಕ್ಷನ್ 354 (ಮಹಿಳೆಗೆ ಚಿತ್ರಹಿಂಸೆ ಅಥವಾ ಮಹಿಳೆ ಮೇಲೆ ಆಕ್ರಮಣ), 324 (ಉದ್ದೇಶಪೂರ್ವಕವಾಗಿ ನೋವುಂಟು ಮಾಡುವುದು) ಮತ್ತು 379 (ಕಳ್ಳತನ ಶಿಕ್ಷೆ) ಅಡಿಯಲ್ಲಿ ಕೇಸ್ ದಾಖಲಾಗಿದೆ. ಜೊತೆಗೆ ಅಟ್ರಾಸಿಟಿ ಅಡಿಯಲ್ಲೂ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣ ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬರುತ್ತಿದ್ದಂತೆಯೇ ರಚಕೊಂಡ ಪೊಲೀಸ್ ಕಮಿಷನರ್, ಡಿಎಸ್​​ ಚೌಹಾಣ್ ತನಿಖೆಗೆ ಆದೇಶ ನೀಡಿದ್ದಾರೆ. ಸಬ್ ಇನ್​ಸ್ಪೆಕ್ಟರ್ ಶಿವ ಶಂಕರ್, ಸುಮಲತಾ ಎಂಬ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾಲ್ವರು ಪೊಲೀಸರು ಮೃಗೀಯವಾಗಿ ಹೊಡೆದರು.. ಮಹಿಳಾ ಪೊಲೀಸ್ ನೋಡುತ್ತ ಕೂತಿದ್ದಳು..’ ದಲಿತ ಮಹಿಳೆ ಕಣ್ಣೀರು

https://newsfirstlive.com/wp-content/uploads/2023/08/Hyderabad.jpg

Load More