/newsfirstlive-kannada/media/post_attachments/wp-content/uploads/2025/02/KPL-ANANYA-6.jpg)
ಕೊಪ್ಪಳ: ರೀಲ್ಸ್ ಮಾಡುತ್ತ ನದಿಗೆ ಜಿಗಿದಿರುವ ಹೈದರಾಬಾದ್ ಮೂಲದ ವೈದ್ಯೆ ಅನನ್ಯ ರಾವ್ಗಾಗಿ ತೀವ್ರ ಹುಡುಕಾಟ ಶುರುವಾಗಿದೆ. ಇಂದು ಬೆಳಗ್ಗೆಯಿಂದ ರಕ್ಷಣಾ ಸಿಬ್ಬಂದಿ ತುಂಗಭದ್ರಾ ನದಿಯಲ್ಲಿ ಬೀಡುಬಿಟ್ಟಿದ್ದು, ವೈದ್ಯರ ಸುಳಿವು ಸಿಗಬಹುದೇ ಅಂತಾ ಹುಡುಕಾಟ ನಡೆಸ್ತಿದ್ದಾರೆ.
ಅನನ್ಯ ರಾವ್ ಯಾರು?
ಅನನ್ಯ ರಾವ್, ಮೂಲತಃ ಹೈದರಾಬಾದ್ನ ತಿರುಮಲಗಿರಿಯವರು. ಪೂರ್ಣ ಹೆಸರು ಅನನ್ಯ ಮೋಹನ್ ರಾವ್. ಇವರ ತಂದೆಯ ಹೆಸರು ಮನಮೋಹನ್. ತಾಯಿ ರಜನಿ. ಈ ರಜನಿ ದಂಪತಿಗೆ ಅನನ್ಯ ಮತ್ತು ಅಮಯ ಎಂಬ ಅವಳಿ ಮಕ್ಕಳಿದ್ದರು. ಅಮಯ ವಿದೇಶದಲ್ಲಿದ್ದರೆ, ಅನನ್ಯ ಹೆತ್ತವರ ಜೊತೆಯಿದ್ದರು. ಅನನ್ಯಾ ಅವರು ಹೈದರಾಬಾದ್ನ ವಿಕೆಸಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ರೀಲ್ಸ್ ಮಾಡುತ್ತ ನದಿಗೆ ಹಾರಿದ ವೈದ್ಯೆಯ ಸುಳಿವು ಇನ್ನೂ ಇಲ್ಲ.. ಮಗಳನ್ನ ನೆನೆದು ತಾಯಿ ಕಣ್ಣೀರು
ಅನನ್ಯ ತಂದೆ ಮನಮೋಹನ ಹಾಗೂ ಮೈನಮಪಲ್ಲಿ ಮಾಜಿ ಶಾಸಕ ಹನುಮಂತ ರಾವ್ ಮತ್ತು ಮೇದಕ್ ಶಾಸಕ ರೋಹಿತ್ ಸಂಬಂಧಿಗಳು. ಇದೇ ಕಾರಣಕ್ಕೆ ವಿಷಯ ತಿಳಿಯುತ್ತಿದ್ದಂತೆಯೇ ರೋಹಿತ್ ಹಾಗೂ ಹನುಮಂತರಾವ್ ಕೊಪ್ಪಳಕ್ಕೆ ಆಗಮಿಸಿ, ಶೋಧಕಾರ್ಯಕ್ಕೆ ಸಲಹೆಗಳನ್ನು ನೀಡುತ್ತಿದ್ದಾರೆ.
ಇಂದು ಬೆಳಗ್ಗೆಯಿಂದ ಮತ್ತೆ ಶೋಧಕಾರ್ಯ ಶುರುವಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಅನನ್ಯ ಇನ್ನು ಪತ್ತೆಯಾಗಿಲ್ಲ. ನೀರಿನ ಹರಿವು ಕಡಿಮೆ ಮಾಡುವಂತೆ ಕೊಪ್ಪಳ ಉಸ್ತುವಾರಿ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: 3, 2, 1 ಕೌಂಟ್ ಮಾಡಿ ತುಂಗಭದ್ರಾ ನದಿಗೆ ಜಿಗಿದ ವೈದ್ಯೆ; ಹೈದರಾಬಾದ್ನ ಡಾಕ್ಟರ್ ಕೊಪ್ಪಳದಲ್ಲಿ ಹುಚ್ಚಾಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ