/newsfirstlive-kannada/media/post_attachments/wp-content/uploads/2025/02/KPL-ANANYA-5.jpg)
ಕೊಪ್ಪಳ: ಹೈದರಾಬಾದ್ ಮೂಲದ ವೈದ್ಯೆ ತುಂಗಭದ್ರಾ ನದಿಯಲ್ಲಿ ಮುಳುಗಿ ನಾಪತ್ತೆಯಾಗಿರೋ ಘಟನೆ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದ ಬಳಿ ನಿನ್ನೆ ನಡೆದಿತ್ತು. ಅನನ್ಯ ರಾವ್ ನಾಪತ್ತೆಯಾಗಿರೋ ವೈದ್ಯೆ. ಘಟನೆಗೆ ಸಂಬಂಧಿಸಿದಂತೆ ಹಾಗೂ ವೈದ್ಯೆ ಅನನ್ಯ ರಾವ್ ಕುರಿತ ಮತ್ತಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ.
ಇದನ್ನೂ ಓದಿ: ಬಿಜೆಪಿ ಮತ್ತೆ ಅಚ್ಚರಿ! ದೆಹಲಿ ನೂತನ ಸಿಎಂ ರೇಖಾ ಗುಪ್ತಾ ಯಾರು?
ಆಗಿದ್ದೇನು..?
ದೂರದ ಹೈದ್ರಾಬಾದ್ನಿಂದ ಫೆಬ್ರವರಿ 17ರಂದು ಕೊಪ್ಪಳದ ಆನೆಗೊಂದಿ ಭಾಗದ ಅಂಜನಾದ್ರಿ ದರ್ಶನ ಹಾಗೂ ಪ್ರವಾಸಿ ತಾಣ ವೀಕ್ಷಣೆಗೆ ಆಗಮಿಸಿದ್ದ ಡಾ.ಅನನ್ಯ ಮೈನಪಲ್ಲಿ ಹಾಗೂ ಆಕೆಯ ಇಬ್ಬರು ಸ್ನೇಹಿತರಾದ ಸಾತ್ವಿಕ್ ಆಶಿತಾ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿರುವ ವೈಟ್ ಸ್ಯಾಂಡ್ ರೆಸಾರ್ಟ್ನಲ್ಲಿ ತಂಗಿದ್ದರು. ಅಂಜನಾದ್ರಿ ಬೆಟ್ಟ ರಾಮಾಯಣ ಜಪ ಮಾಡಿ ತಾಯಿಗೆ ವಿಡಿಯೋ ಕಾಲ್ ಮುಖಾಂತರ ಥ್ಯಾಂಕ್ಸ್ ಹೇಳಿದ್ದ ಡಾ.ಅನನ್ಯ ನಿನ್ನೆ ಬೆಳಗ್ಗೆ ರೆಸಾರ್ಟ್ ಚೆಕ್ಔಟ್ ಮಾಡಿ ಇನ್ನೇನು ಹೈದ್ರಾಬಾದ್ಗೆ ಹೋಗಬೇಕಿತ್ತು. ನಡೆಯಬಾರದ ಅನಾಹುತ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಇತಿಹಾಸ ಹೇಳ್ತಿದೆ.. ಟೀಂ ಇಂಡಿಯಾದಲ್ಲಿ ಇವರಿಬ್ಬರದ್ದೇ ಕಾರುಬಾರು..!
ರೆಸಾರ್ಟ್ ಹಿಂಭಾಗ ಕಲ್ಲುಬಂಡೆ ಮಧ್ಯೆ ಹರಿಯುವ ನಿಷೇಧಿತ ತುಂಗಾಭದ್ರ ನದಿಯಯಲ್ಲಿ ಈಜಾಡಲು ತೆರಳಿದ್ದಾರೆ. ರೀಲ್ಸ್ ಮಾಡಲು ಹೋಗಿ 20 ಅಡಿ ಎತ್ತರದಿಂದ ನದಿಗೆ ಜಿಗಿದಿದ್ದಾರೆ. ನಂತರ ಈಜು ಬಾರದೆ ಕೊಚ್ಚಿ ಹೋಗಿದ್ದಾಳೆ. ವೈದ್ಯೆ ಅನನ್ಯ ನದಿಗೆ ಹಾರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ 3, 2, 1 ಅಂತಾ ಕೌಂಟ್ ಮಾಡಿ ಜಂಪ್ ಮಾಡಿರುವ ದೃಶ್ಯ ಇದೆ.
ಹಿಮ್ಮುಖವಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಮಾಹಿತಿ ತಿಳಿಯುತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ತಕ್ಷಣ ಸಾಣಾಪುರ ಭಾಗದ ತೆಪ್ಪ ಹಾಕುವ ಯುವಕರನ್ನು ಹಾಗೂ ಈಜುತಜ್ಞರನ್ನು ಕರೆಸಿ, ಶೋಧ ಕಾರ್ಯಾಚರಣೆ ಮಾಡಲಾಗಿದೆ. ಸಂಜೆ 7 ಗಂಟೆವರೆಗೆ ಶೋಧಾ ಕಾರ್ಯನಡೆಸಿದ್ದು ಡಾ.ಅನನ್ಯ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆಯಿಂದ ಮತ್ತೆ ಶೋಧಕಾರ್ಯ ಆರಂಭವಾಗಿದೆ.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಮತ್ತೊಂದು ಎಕ್ಸೈಟಿಂಗ್ ನ್ಯೂಸ್.. ಕಳೆದ ಬಾರಿಯಂತೆ ಈ ಸಲವೂ..
ಡಾ.ಅನನ್ಯ ತಾಯಿ ರಜನಿ ಹಾಗೂ ತಂದೆ ಮನಮೋಹನ್ ಹೈದ್ರಾಬಾದ್ನಿಂದ ಕೊಪ್ಪಳಕ್ಕೆ ಆಗಮಿಸಿದ್ದಾರೆ. ದಂಪತಿಗೆ ಡಾ.ಅನನ್ಯ ಹಾಗೂ ಅಮಯ ಎನ್ನುವ ಇಬ್ಬರು ಅವಳಿ ಹೆಣ್ಮಕ್ಕಳು. ಅನನ್ಯ ಸಹೋದರಿ ಅಮಯ ಮದುವೆಯಾಗಿ ವಿದೇಶದಲ್ಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅನನ್ಯ ತಾಯಿ ರಜನಿ, ನನ್ನ ಮಗಳು ಅಂಜನಾದ್ರಿ ಬೆಟ್ಟದಲ್ಲಿ ರಾಮನ ಜಪ ಮಾಡಿ ನನಗೆ ತೋರಿಸಿದಳು. ಖುಷಿಯಾಗಿತ್ತು, ನೀನು ಬರಬೇಕಿತ್ತು ಅಮ್ಮ ಎಂದಿದ್ದಳು. ಮಧ್ಯಾಹ್ನದ ವೇಳೆಗೆ ಕೆಟ್ಟ ಸುದ್ದಿ ಕೇಳಿದ್ವಿ ಅಂತಾ ಕಣ್ಣೀರು ಇಟ್ಟಿದ್ದಾರೆ.
ಮುಂದುವರಿದ ರಕ್ಷಣಾ ಕಾರ್ಯ..!
ಇಂದು ಬೆಳಗ್ಗೆಯಿಂದ ರಕ್ಷಣಾಕಾರ್ಯ ಶುರುವಾಗಿದೆ. ಅನನ್ಯ ರಾವ್ ಅವರ ಸುಳಿವು ನದಿಯಲ್ಲಿ ಎಲ್ಲೂ ಸಿಕ್ಕಿಲ್ಲ. ಡಿವೈಎಸ್ಪಿ, ಸಿಪಿಐ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಅನನ್ಯ ತಂದೆ ಹಾಗೂ ತಾಯಿ ರಾತ್ರಿಯಿಡಿ ತನ್ನ ಮಗಳು ಧೈರ್ಯವಂತೆ, ಮಗಳನ್ನು ಕಳೆದುಕೊಂಡು ನಾನು ಹೇಗಿರಲಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: 3, 2, 1 ಕೌಂಟ್ ಮಾಡಿ ತುಂಗಭದ್ರಾ ನದಿಗೆ ಜಿಗಿದ ವೈದ್ಯೆ; ಹೈದರಾಬಾದ್ನ ಡಾಕ್ಟರ್ ಕೊಪ್ಪಳದಲ್ಲಿ ಹುಚ್ಚಾಟ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್