17000 ಉದ್ಯೋಗಾವಕಾಶ.. ತೆಲಂಗಾಣ ಸರ್ಕಾರದ ಜೊತೆ ಇನ್ಫೋಸಿಸ್ ಮಹತ್ವದ ಒಪ್ಪಂದ

author-image
admin
Updated On
17000 ಉದ್ಯೋಗಾವಕಾಶ.. ತೆಲಂಗಾಣ ಸರ್ಕಾರದ ಜೊತೆ ಇನ್ಫೋಸಿಸ್ ಮಹತ್ವದ ಒಪ್ಪಂದ
Advertisment
  • ಭಾರತದ 2ನೇ ಅತಿ ದೊಡ್ಡ IT ಸಂಸ್ಥೆ ಇನ್ಫೋಸಿಸ್ ಜೊತೆ ಒಪ್ಪಂದ
  • 750 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ಫೋಸಿಸ್ ಹೊಸ ಕ್ಯಾಂಪಸ್
  • 17 ಸಾವಿರ ಉದ್ಯೋಗಾವಕಾಶ ನೀಡುವುದಾಗಿ ಇನ್ಫೋಸಿಸ್ ಭರವಸೆ

ಭಾರತದ 2ನೇ ಅತಿ ದೊಡ್ಡ IT ಸಂಸ್ಥೆ ಇನ್ಫೋಸಿಸ್ ಹೊರ ರಾಜ್ಯಕ್ಕೂ ತನ್ನ ಸೇವೆಯನ್ನ ವಿಸ್ತರಿಸಿದೆ. ಹೈದರಾಬಾದ್‌ನಲ್ಲಿ ಇನ್ಫೋಸಿಸ್ ತನ್ನ ಕ್ಯಾಂಪಸ್ ತೆರೆಯಲು ಮುಂದಾಗಿದ್ದು, ತೆಲಂಗಾಣ ಸರ್ಕಾರದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಹೈದರಾಬಾದ್‌ನ ಪೋಚಾರಂನಲ್ಲಿ ಇನ್ಫೋಸಿಸ್ ತನ್ನ ಹೊಸ IT ಕ್ಯಾಂಪಸ್ ತೆರೆಯಲು ತೆಲಂಗಾಣ ಸರ್ಕಾರ ಅವಕಾಶ ನೀಡಿದ್ದು, 17000 ಹೊಸ ಉದ್ಯೋಗಾವಕಾಶ ನೀಡುವ ಗುರಿ ಹೊಂದಲಾಗಿದೆ.

publive-image

ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಸಮ್ಮೇಳನ ನಡೆಯುತ್ತಿದ್ದು, ಇನ್ಫೋಸಿಸ್ ಜೊತೆ ತೆಲಂಗಾಣ ಸರ್ಕಾರ ಮಹತ್ವದ ಒಪ್ಪಂದ ಮಾಡಿಕೊಂಡಿದೆ. Infosys CFO ಜಯೇಶ್ ಸಂಘರಾಜ್ ಜೊತೆ ತೆಲಂಗಾಣ ಐಟಿ ಸಚಿವ ಡಿ. ಶ್ರೀಧರ್ ಬಾಬು ಅವರು ಒಪ್ಪಂದ ಮಾಡಿಕೊಂಡು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: BELನಲ್ಲಿ 300ಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಖಾಲಿ.. ತಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಬಹುದು 

ಹೈದರಾಬಾದ್‌ನ ಪೋಚಾರಂನಲ್ಲಿ ಈಗಾಗಲೇ ಇನ್ಫೋಸಿಸ್ ಕ್ಯಾಂಪಸ್ ಇದ್ದು 35 ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೋಚಾರಂನಲ್ಲಿ ಹೊಸ ಐಟಿ ಬಿಲ್ಡಿಂಗ್ ಕಟ್ಟುವ ಒಪ್ಪಂದಕ್ಕೆ ತೆಲಂಗಾಣ ಸರ್ಕಾರ ಬೆಂಬಲ ನೀಡಿದೆ. 750 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ 2-3 ವರ್ಷದಲ್ಲಿ ಹೊಸ ಕ್ಯಾಂಪಸ್ ನಿರ್ಮಾಣ ಮಾಡಲಾಗುತ್ತಿದ್ದು, 17 ಸಾವಿರ ಉದ್ಯೋಗಾವಕಾಶ ನೀಡುವುದಾಗಿ ಇನ್ಫೋಸಿಸ್ ಭರವಸೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment