newsfirstkannada.com

ಮಾಜಿ ಪ್ರೇಯಸಿಗೆ ಚಾಕುವಿನಿಂದ ಇರಿತ, ಪ್ರಿಯಕರನಿಗೆ 16 ವರ್ಷ ಜೈಲು.. ಏನಿದು ಲವ್ ಕಹಾನಿ?

Share :

Published April 28, 2024 at 8:21am

  ಕಾಲೇಜಿನಲ್ಲಿ ಇರುವಾಗ ಇಬ್ಬರು ಮಧ್ಯೆ ಸುಂದರ ಪ್ರೀತಿ ಅರಳಿತ್ತು

  5 ವರ್ಷಗಳವರೆಗೆ ಪ್ರೀತಿ ಮಾಡಿದರೂ ಚಾಕು ಇರಿದಿದ್ದ ಪ್ರಿಯಕರ

  ಯುವತಿಯ ಕುತ್ತಿಗೆ ಭಾಗದಲ್ಲಿ 10 ಇಂಚು ಒಳಗೆ ಹೋಗಿದ್ದ ಚಾಕು

ತನ್ನ ಮಾಜಿ ಪ್ರೇಯಸಿಗೆ ಚಾಕು ಇರಿದ ಪ್ರಕರಣ ಕೋರ್ಟ್​​ನಲ್ಲಿ ಸಾಬೀತು ಆದ ಹಿನ್ನೆಲೆಯಲ್ಲಿ ಹೈದರಾಬಾದ್ ಮೂಲದ ಯುವಕನಿಗೆ ಲಂಡನ್​ ಕೋರ್ಟ್​ 16 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

ಭಾರತದ ಆಂಧ್ರಪ್ರದೇಶದ ಹೈದರಾಬಾದ್ ಮೂಲದ ಶ್ರೀರಾಮ್ ಅಂಬರ್ಲಾ (23) ಜೈಲು ಶಿಕ್ಷೆಗೆ ಒಳಗಾದ ಯುವಕ. 2022ರ ಮಾರ್ಚ್​​ 5 ರಂದು ಲಂಡನ್​ನ ಹೈದರಾಬಾದ್​ವಾಲಾ ರೆಸ್ಟೋರೆಂಟ್​ನಲ್ಲಿ ತನ್ನ ಮಾಜಿ ಪ್ರೇಯಸಿ ಸೋನಾ ಬಿಜುಗೆ (23) ಚಾಕುವಿನಿಂದ 9 ಬಾರಿ ಶ್ರೀರಾಮ್ ಇರಿದಿದ್ದನು. ಈ ವೇಳೆ ಬಿಡಿಸಲು ಬಂದ ಜನರ ಮೇಲೆಯು ದಾಳಿ ಮಾಡಿದ್ದನು. ಇದರಿಂದ ಯುವತಿ ತೀವ್ರವಾಗಿ ಗಾಯಗೊಂಡಿದ್ದಳು. ಕುತ್ತಿಗೆ ಭಾಗದಲ್ಲಿ 10 ಇಂಚು ಒಳಗೆ ಚಾಕು ಹೋಗಿದ್ದರಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡಿ ಬದುಕಿದ್ದಳು. ಈ ಸಂಬಂಧ ಪ್ರಕರಣ ದಾಖಲಾಗಿ ಕೇಸ್​ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿತ್ತು. ಆದರೆ ಆರೋಪಿ ಮಾಡಿದ ಕೃತ್ಯ ಕೋರ್ಟ್​ನಲ್ಲಿ ಸಾಬೀತು ಆದ ಹಿನ್ನೆಲೆಯಲ್ಲಿ ಲಂಡನ್ ಕೋರ್ಟ್​ 16 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.

ಇದನ್ನೂ ಓದಿ: Lok Sabha; ‘ಲೋಕ’ ಅಖಾಡದಲ್ಲಿ PM, CM ಅಬ್ಬರ.. ಮಗಳಿಗಾಗಿ ತಂದೆ, ಮಗನಿಗಾಗಿ ತಾಯಿ ಭರ್ಜರಿ ಕ್ಯಾಂಪೇನ್

ಇದನ್ನೂ ಓದಿ: ಹನಿ ನೀರಿಗೂ ಹಾಹಾಕಾರ.. ರೊಚ್ಚಿಗೆದ್ದ ಮಹಿಳೆಯರಿಂದ ಗ್ರಾಮ ಪಂಚಾಯತಿಗೆ ಬೀಗ ಜಡಿದು ಆಕ್ರೋಶ

ಇನ್ನು ಶ್ರೀರಾಮ್ ಅಂಬರ್ಲಾ ಆಂಧ್ರದ ಯುವಕನಾದರೇ, ಪ್ರೇಯಸಿ ಸೋನಾ ಬಿಜು ಮೂತಹ ಕೇರಳ ಮೂದವರು. 2017ರಲ್ಲಿ ಹೈದರಾಬಾದ್‌ನ ಕಾಲೇಜ್​​ವೊಂದರಲ್ಲಿ ಓದುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಲಂಡನ್​ಗೆ ತೆರಳಿದ್ದರು. ಆದರೆ ಪ್ರಿಯಕರ ಆಗಾಗೆ ಜಗಳ ಆಡುತ್ತಿದ್ದರಿಂದ 2022ರಲ್ಲಿ ಪ್ರೇಯಸಿ ಸಂಬಂಧ ಕಡಿದುಕೊಂಡಿದ್ದಳು ಎನ್ನಲಾಗಿದೆ.

ಇದರಿಂದ ಬೇಸರದಲ್ಲಿದ್ದ ಯುವಕ ಆಕೆ ನನ್ನನ್ನು ತಿರಸ್ಕಾರ ಮಾಡುತ್ತಿದ್ದಾಳೆ. ಅಲ್ಲದೇ ಮದುವೆ ಕೂಡ ಆಗಲ್ಲವೆಂದು ಹೇಳಿದ್ದಾಳೆ. ಹೀಗಾಗಿ ಕೋಪಗೊಂಡು ಪ್ರೇಯಸಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ಆರೋಪಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ. ಹೀಗಾಗಿ ಕೋರ್ಟ್​ ಶಿಕ್ಷೆಯನ್ನು ವಿಧಿಸಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಪ್ರೇಯಸಿಗೆ ಚಾಕುವಿನಿಂದ ಇರಿತ, ಪ್ರಿಯಕರನಿಗೆ 16 ವರ್ಷ ಜೈಲು.. ಏನಿದು ಲವ್ ಕಹಾನಿ?

https://newsfirstlive.com/wp-content/uploads/2024/04/LOVE.jpg

Load More