newsfirstkannada.com

ಕಾಂಗ್ರೆಸ್​ ಲೀಡರ್​​ ಪುತ್ರನಿಂದ ಲವ್​​ ಟಾರ್ಚರ್; ಮನನೊಂದು ಯುವತಿ ಸಾವು.. ಆಮೇಲೇನಾಯ್ತು?

Share :

Published March 16, 2024 at 9:05pm

Update March 16, 2024 at 8:57pm

    ಕೇವಲ 26 ವರ್ಷಕ್ಕೆ ತನ್ನ ಜೀವನವನ್ನೇ ಅಂತ್ಯ ಮಾಡಿಕೊಂಡ ಯುವತಿ

    ಖಾಸಗಿ ಹಾಸ್ಟೆಲ್​ನಲ್ಲಿದ್ದ ಯುವತಿ ಸಾಹಿತಿ ಪೋಷಕರ ಆರೋಪ ಏನು?

    ಬರೋಬ್ಬರಿ 2 ಸಾವಿರ ಫೋನ್ ಕಾಲ್ ಹಾಗೂ ಮೆಸೇಜ್ ಮಾಡ್ತಿದ್ದನಂತೆ

ತೆಲಂಗಾಣ: ಬೆಳಗ್ಗೆ ಅಮ್ಮನಿಗೆ ಫೋನ್ ಮಾಡಿ, ”ಅಮ್ಮ ನನಗೆ ತುಂಬಾ ಟಾರ್ಚರ್ ಆಗ್ತಿದೆ, ತುಂಬಾ ಹಿಂಸೆ ಆಗ್ತಿದೆ, ನೀನು ಅಂಕಲ್​ಗೆ ಹೇಳು” ಮಾಡಿ ಕಣ್ಣೀರು ಹಾಕಿದ್ದಳು. ಕಣ್ಣೀರು ಹಾಕಿದ್ದ ಮಗಳು ಮರುದಿನ ಬೆಳಗ್ಗೆ ಹೆಣವಾಗಿದ್ದಳು ಅನ್ನೋ ಸುದ್ದಿ ಆ ತಾಯಿಗೆ ಬರಸಿಡಿಲು ಬಂದರೆಗಿದ್ದಾಂತಾಗಿದೆ. ಬೆಳಗ್ಗೆ ಮಾತಾಡಿದ ಮಗಳು ಈಗ ಬದುಕಿಲ್ಲ ಅನ್ನೋ ವಿಷಯ ಕೇಳಿ ಹೃದಯ ಛಿದ್ರವಾಗಿದೆ. ಆಕೆ 26 ವರ್ಷದ ಸಾಹಿತಿ. ಬಡ ಕುಟುಂಬದ ಹೆಣ್ಣು ಮಗಳು. ತಂದೆ-ತಾಯಿ ತುಂಬಾ ಕಷ್ಟಪಟ್ಟು ಮಗಳನ್ನ ಓದಿಸಿದ್ದರು. ಮಗಳಿಗೂ ಓದಿನ ಮೇಲೆ ತುಂಬಾ ಆಸಕ್ತಿ ಇದ್ದಿದ್ದರಿಂದ ಹೈಯರ್​ ಎಜುಕೇಶನ್​ ಮುಂದುವರಿಸಿದ್ದಳು. ಹೈದರಾಬಾದ್​ನ ದಿಲ್​ಸುಖ್​ ನಗರದಲ್ಲಿದ್ದುಕೊಂಡು ಎಂಬಿಎ ಓದುತ್ತಿದ್ದಳು. ಇನ್ನೊಂದಷ್ಟು ದಿನ ಮುಗಿದಿದ್ದರೆ ಎಂಬಿಎ ಮುಗಿದು ಯಾವುದಾದರೂ ಒಳ್ಳೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ಕನಸು ಕಂಡಿದ್ದಳಂತೆ. ಒಳ್ಳೆ ಕೆಲಸ, ಒಳ್ಳೆ ಸಂಬಳ ತಗೊಂಡು ತನ್ನ ಫ್ಯಾಮಿಲಿನ ಚೆನ್ನಾಗಿ ನೋಡ್ಕೋಬೇಕು ಅಂತ ಅಂದ್ಕೊಂಡಿದ್ದಳು. ಆದ್ರೆ ಈ ಯುವತಿಯ ಆಸೆ ಮತ್ತು ಕನಸು ಈಡೇರಿಲಿಲ್ಲ. ಕೇವಲ 26 ವರ್ಷಕ್ಕೆ ತನ್ನ ಜೀವನವನ್ನ ಅಂತ್ಯ ಮಾಡಿಕೊಂಡಿದ್ದಾಳೆ.

ಸಾಹಿತಿ, ತೆಲಂಗಾಣದ ಮುಲುಗು ಜಿಲ್ಲೆಯ ವೆಂಕಟಪುರಂ ಮಂಡಲದ ಆಲುಬಾಕು ಗ್ರಾಮದ ನಿವಾಸಿ. ಹುಟ್ಟಿ ಬೆಳೆದಿದ್ದಲ್ಲವೂ ಇದೇ ಗ್ರಾಮದಲ್ಲಿ. ತುಂಬಾ ಆ್ಯಕ್ಟಿವ್​ ಆಗಿದ್ದ ಸಾಹಿತಿ ಬಗ್ಗೆ ಗ್ರಾಮಸ್ಥರೆಲ್ಲಾ ಒಳ್ಳೆ ಅಭಿಪ್ರಾಯವೇ ಇಟ್ಕೊಂಡಿದ್ದಾರೆ. ಚೆನ್ನಾಗಿ ಓದುತ್ತಿದ್ದಳು. ಚೆನ್ನಾಗಿ ಮಾತಾಡ್ತಿದ್ದಳಂತೆ. ತುಂಬಾ ಸ್ಟ್ರಾಂಗ್​ ಆಗಿಯೂ ಇದ್ದಳಂತೆ. ಆದ್ರೀಗ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಗ್ರಾಮಸ್ಥರು ಸಹ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ಇಷ್ಟು ಆಕ್ಟೀವ್​ ಆಗಿ ಇದ್ದಿದ್ದ ಹುಡುಗಿ, ಇಷ್ಟು ಗಟ್ಟಿಯಾಗಿ ಇದ್ದಿದ್ದ ಹುಡುಗಿ ಸೂಸೈಡ್ ಮಾಡಿಕೊಳ್ತಾಳೆ ಅಂದ್ರೆ ಅವಳು ಎಷ್ಟು ನೊಂದಿರಬೇಡ ಅಥವಾ ಎಷ್ಟು ನೋವು ಪಟ್ಟಿರಬೇಡ ಅಂತ ಅನುಮಾನವೂ ವ್ಯಕ್ತಪಡಿಸ್ತಿದ್ದಾರೆ. ಹಾಗಾದ್ರೆ, ಸಾಹಿತಿಗೆ ಏನಾಗಿತ್ತು? ಸಾಹಿತಿ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಳಾ ಅಂದ್ರೆ ಸಾಕಷ್ಟು ಅನುಮಾನ ವ್ಯಕ್ತವಾಗ್ತಿದೆ.

ಹೈದರಾಬಾದ್​ನ ದಿಲ್​ಸುಖ್ ನಗರದ ಖಾಸಗಿ ಹಾಸ್ಟೆಲ್​ವೊಂದರಲ್ಲಿ ಇದ್ದುಕೊಂಡು ಎಂಬಿಎ ಓದುತ್ತಿದ್ದ ಸಾಹಿತಿ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು. ಈ ಸಂಬಂಧ ಚೈತನ್ಯಪುರಿ ಪೊಲೀಸರಿಗೆ ಹಾಸ್ಟಲ್​ ಸಿಬ್ಬಂದಿ ಮಾಹಿತಿ ಕೊಟ್ಟಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಸಾಹಿತಿ ಅವರ ದೇಹವನ್ನ ಕೆಳಗಿಳಿಸಿ ಹಾಸ್ಟೆಲ್​ ರೂಂನ ಪರಿಶೀಲನೆ ಮಾಡಿದ್ದರು. ಸಾಹಿತಿಗೆ ಸಂಬಂಧಪಟ್ಟ ವಸ್ತುಗಳನ್ನ ವಶಕ್ಕೆ ಪಡೆದುಕೊಂಡು ತನಿಖೆ ಮಾಡಿದ್ದರು. ಮೇಲ್ನೋಟಕ್ಕೆ ಇದು ಸೂಸೈಡ್​ ಅಂತ ಸಾಹಿತಿ ದೇಹವನ್ನ ಪೋಸ್ಟ್​ ಮಾರ್ಟಮ್​ಗಾಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಸಾಹಿತಿ ಯಾಕೆ ಸೂಸೈಡ್​ ಮಾಡಿಕೊಂಡಳು? ಯಾವ ಕಾರಣಕ್ಕೆ ನೇಣು ಹಾಕಿಕೊಂಡಳು ಅನ್ನೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಆದ್ರೀಗ ಸಾಹಿತಿ ಸಾವಿಗೆ ಪ್ರೇಮಕಾಟವೇ ಕಾರಣ ಎಂಬ ವಿಷಯ ಚರ್ಚೆಗೆ ಬಂದಿದ್ದು, ನ್ಯಾಯಕ್ಕಾಗಿ ಸಾಹಿತಿ ಕುಟುಂಬಸ್ಥರು ಹೋರಾಟ ಮಾಡ್ತಿದ್ದಾರೆ.

ಯುವಕನ ಪ್ರೀತಿ ಕಾಟಕ್ಕೆ ಎಂಬಿಎ ಸ್ಟೂಡೆಂಟ್​ ಸಾಹಿತಿ ಬಲಿ?

ಹೌದು, ಸಾಹಿತಿ ಸಾವಿಗೆ ಕಾಂಗ್ರೆಸ್​ ನಾಯಕ ಮೋಹನ್ ರಾವ್ ಅವರ ಮಗ ಹರೀಶ್​ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸಾಹಿತಿ ಅವರ ತಂದೆ ಚೈತನ್ಯಪುರಿ ಪೊಲೀಸ್ ಸ್ಟೇಷನ್​ನಲ್ಲಿ ದೂರು ಸಹ ದಾಖಲಿಸಿದ್ದು, ಹರೀಶ್​ ಹಾಗೂ ಅವರಪ್ಪನ ವಿರುದ್ಧ ಕ್ರಮಕ್ಕೆ ಆಗ್ರಹಿಸ್ತಿದ್ದಾರೆ. ಕಾಂಗ್ರೆಸ್​ ಮುಖಂಡ ಮೋಹನ್ ರಾವ್ ಕುಟುಂಬ ಮತ್ತು ಮೃತ ಸಾಹಿತಿ ಕುಟುಂಬ ದೂರದ ಸಂಬಂಧಿಕರಂತೆ. ಇದೇ ಸಲುಗೆ ಬಳಸಿಕೊಂಡ ಮೋಹನ್ ರಾವ್ ಮಗ ಹರೀಶ್​, ಲವ್ ಮಾಡು ಅಂತ ಸಾಹಿತಿ ಹಿಂದೆ ಬಿದ್ದಿದ್ದನಂತೆ. ಈ ವಿಚಾರವನ್ನ ಸಾಹಿತಿ ತಮ್ಮ ತಾಯಿ ಬಳಿಯೂ ಹೇಳಿಕೊಂಡಿದ್ದರಂತೆ. ಆಗ ಮಗಳಿಗೆ ಬುದ್ದಿ ಹೇಳಿದ್ದ ತಾಯಿ, ‘ಈ ಪ್ರೀತಿ, ಪ್ರೇಮ ಎಲ್ಲ ಬೇಡ, ನೀನು ಅವನ ಸಹವಾಸ ಮಾಡಬೇಡ, ನಮಗೂ ಅವರಿಗೂ ಸಂಬಂಧ ಸಾಧ್ಯವಿಲ್ಲ’ ಅಂತ ಮಗಳಿಗೆ ಎಚ್ಚರಿಸಿದ್ದರಂತೆ. ಅಮ್ಮ ಹೇಳಿದ್ಮೇಲೆ ಮಗಳು ಕೂಡ ಹರೀಶ್​ನಿಂದ ಅಂತರ ಕಾಯ್ದುಕೊಂಡಿದ್ದಳಂತೆ. ಆದ್ರೆ, ಆ ಹರೀಶ್​ ಮಾತ್ರ ಸಾಹಿತಿಯನ್ನ ಪದೇ ಪದೇ ಕೇಳ್ತಾನೆ ಇದ್ದನಂತೆ. ಮದುವೆ ಆಗೋಣ, ನಾನು ನಿನ್ನ ಪ್ರೀತಿಸ್ತೀನಿ ಅಂತ ಹೇಳ್ತಾನೆ ಇದ್ದನಂತೆ.

ಹರೀಶ್​ ಅನ್ನೋ ಹುಡುಗ ಮದುವೆ ಆಗ್ತೀನಿ ಅಂತ ಹೇಳ್ತಿದ್ದಾನೆ. ಅದಕ್ಕೆ ನಾನು ನಮ್ಮ ಅಮ್ಮ-ಅಪ್ಪನ ಕೇಳಿ ಹೇಳ್ತೀನಿ ಅಂತೇಳಿ, ಈ ವಿಚಾರವನ್ನ ನನ್ನ ಬಳಿ ಹೇಳಿದ್ದಳು. ಈ ಥರಾ ಆಲೋಚನೆ ಮಾಡ್ಬೇಡ, ನಮಗೂ ಅವರಿಗೂ ಆಗಲ್ಲ. ಡ್ಯಾಡಿನೂ ಒಪ್ಪಿಕೊಳ್ಳಲ್ಲ ಅಂತ ಹೇಳಿದೆ. ಆ ವಿಷಯ ಆ ಹುಡುಗನಿಗೂ ಹೇಳಿದ್ದಾಳೆ. ಅದಕ್ಕೆ ಅವನು ಈ ಲವ್, ಮದುವೆ ಎಲ್ಲಾ ಈಗ ಬೇಡ. ಸರಿ ಫ್ರೆಂಡ್ಸ್​ ಆಗಿರೋಣ ಅಂತ ಹೇಳಿದ್ದನಂತೆ. ಆಗ ಫ್ರೆಂಡ್ಲಿ ಆಗಿ ಮಾತಾಡಿದ್ದಾಳೆ ಅಷ್ಟೇ. ಇದಾದ ಮೇಲೆ ನನ್ನ ಹತ್ರಾ ಮತ್ತೆ ಈ ವಿಷಯವನ್ನ ಪ್ರಸ್ತಾಪ ಮಾಡಲೇ ಇಲ್ಲ.

ಕುಮಾರಿ, ಮೃತ ಸಾಹಿತಿ ತಾಯಿ
ಹತ್ತು ತಿಂಗಳ ಹಿಂದೆಯಷ್ಟೇ ಸಾಹಿತಿ ಎಂಬಿಎ ಮಾಡೋಕೆ ಹೈದರಾಬಾದ್​ಗೆ ಹೋಗಿದ್ದಳಂತೆ. ಫೋನ್ ನಂಬರ್​ ಕೂಡ ಚೇಂಜ್ ಮಾಡಿದ್ದಳಂತೆ. ಮನೆಯವರಿಗೆ ಹಾಗೂ ಕೆಲವೇ ಕೆಲವು ಆಪ್ತ ಸ್ನೇಹಿತರಿಗಷ್ಟೇ ನಂಬರ್​ ಗೊತ್ತಿತ್ತಂತೆ. ಆದ್ರೆ ಸಾಹಿತಿ ನಂಬರ್​ ಕಲೆಕ್ಟ್​ ಮಾಡ್ಕೊಂಡ ಹರೀಶ್​, ಸಾಹಿತಿಗೆ ಫೋನ್ ಮಾಡಿ, ಹೈದರಾಬಾದ್​ಗೆ ಯಾಕೆ ಹೋಗಿದ್ದೀಯಾ, ವಾಪಸ್ ಬಾ ಅಂತ ಹೇಳಿದ್ನಂತೆ. ಅಲ್ಲಿರಬೇಡ ಅಂತ ಪೀಡಿಸಿದ್ದನಂತೆ.

ನಿಮ್ಮನ್ನ, ಡ್ಯಾಡಿನ ಎಲ್ಲರನ್ನೂ ಬೈಯ್ತಾ ಇದ್ದಾನೆ. ಫೋನ್ ಮಾಡಿ ಟಾರ್ಚರ್ ಕೊಡ್ತಿದ್ದಾನೆ. 2 ಸಾವಿರಕ್ಕೂ ಹೆಚ್ಚು ಮೆಸೇಜ್ ಮಾಡಿದ್ದಾನೆ. ನಾನು ಸತ್ತೋಗ್ತೀನಿ ಅಂತ ಭಯ ಪಡಿಸ್ತಾನೆ. ಕಳೆದ ನಾಲ್ಕೈದು ದಿನಗಳಿಂದಲೂ 2 ಸಾವಿರ ಮೆಸೇಜ್. 2 ಸಾವಿರ ಫೋನ್ ಕಾಲ್ ಮಾಡಿದ್ದಾನೆ. ಅಂಕಲ್​ಗೆ ಪೋನ್ ಮಾಡಿ ಹೇಳು. ನನಗೆ ಹೇಳಬೇಕು ಅನಿಸಿದರೂ ಹೇಳೋಕೆ ಆಗ್ತಿಲ್ಲ ಅಂದ್ಲು. ನಾನು ಫೋನ್ ಮಾಡಿ ಹೇಳಿದ್ದಕ್ಕೆ ನನಗೆ ಫೋನ್ ಮಾಡಿ ಬೆದರಿಸ್ತಾನೆ. ನೀವು ಹಾಗೆ, ನಿಮ್ಮ ಮಗಳು ಹಾಗೆ, ನಿಮ್ಮ ಮಗಳು ಹಾಳಾಗಿ ಹೋಗಿದ್ದಾಳೆ ಅಂತ ಬಾಯಿಗೆ ಬಂದಂತೆ ಮಾತಾಡಿದ್ದ.

– ಕುಮಾರಿ, ಮೃತ ಸಾಹಿತಿ ತಾಯಿ

ಫೋನ್ ಮೇಲೆ ಫೋನ್ ಮಾಡಿದ್ದನಂತೆ. ಫೋನ್ ಸ್ವಿಚ್ ಆಫ್ ಮಾಡಿದ್ರೆ ಮೆಸೇಜ್ ಮಾಡ್ತಿದ್ದಾನಂತೆ. 2 ಸಾವಿರಕ್ಕೂ ಹೆಚ್ಚು ಮೆಸೇಜ್​ ಅಂತೆ. ಇದೇ ವಿಷಯವನ್ನ ಅಮ್ಮನಿಗೆ ಫೋನ್ ಮಾಡಿ ಹೇಳಿಕೊಂಡಿದ್ದಾರೆ. ಅವರ ತಾಯಿನೂ ಸಮಾಧಾನ ಪಡಿಸಿ ಫೋನ್ ಇಟ್ಟಿದ್ದಾರೆ. ಆದ್ರೆ ಮರುದಿನ ಸಾಹಿತಿ ಸಾವನ್ನಪ್ಪಿರುವ ಸುದ್ದಿ ಹೊರಬಿದ್ದಿದೆ. ದುರಂತ ಏನಪ್ಪಾ ಅಂದ್ರೆ ಸಾಹಿತಿ ನೇಣು ಹಾಕಿಕೊಳ್ಳುವಾಗಲೂ ಹರೀಶ್​ ವಿಡಿಯೋ ಕಾಲ್​ ಮಾಡಿದ್ದ, ಸಾಹಿತಿ ನೇಣು ಹಾಕಿಕೊಳ್ಳುತ್ತಿದ್ದರೂ ನಿಲ್ಲಿಸೋಕೆ ಪ್ರಯತ್ನ ಪಟ್ಟಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ಸಾಹಿತಿ ಸಾವಿಗೆ ಹರೀಶ್​ ಕಾರಣ ಎಂದು ಕುಟುಂಬಸ್ಥರು ಆರೋಪಿಸ್ತಿದ್ದಾರೆ. ಹರೀಶ್​ ಬಂಧನ ಆಗ್ಬೇಕು, ಸಾಹಿತಿ ಸಾವಿಗೆ ನ್ಯಾಯ ಸಿಗಬೇಕು ಅಂತ ಆಗ್ರಹಿಸ್ತಿದ್ದಾರೆ. ಆದರೆ ದೂರು ದಾಖಲಿಸಿಕೊಂಡಿರುವ ಹರೀಶ್​ ಪ್ರಭಾವಿ ವ್ಯಕ್ತಿಯ ಮಗ ಅನ್ನೋ ಕಾರಣಕ್ಕೆ ಕ್ರಮ ತೆಗೆದುಕೊಳ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಸಚಿವೆ ಸೀತಕ್ಕೆ ಈ ಬಗ್ಗೆ ಗಮನ ಕೊಡಬೇಕು, ಇಲ್ಲವಾದಲ್ಲಿ ನಾವು ಕೂಡ ಆತ್ಮಹತ್ಯೆ ಮಾಡಿಕೊಳ್ತೇವೆ ಎಂದು ಎಚ್ಚರಿಸ್ತಿದ್ದಾರೆ.

ನನಗೆ ಸೀತಕ್ಕ ಬಂದು ನ್ಯಾಯ ಮಾಡಬೇಕು. ಅವರಿಗೆ ಸಹಾಯ ಮಾಡಿ ನನಗೆ ನ್ಯಾಯ ಕೊಡಿಸಲ್ಲ ಅಂದ್ರೆ ಅವರ ಮನೆ ಮುಂದೆ ಹೋಗಿ ನಮ್ಮ ಕುಟುಂಬವೂ ಆತ್ಮಹತ್ಯೆ ಮಾಡಿಕೊಳ್ಳದಕ್ಕೂ ಯೋಚಿಸಲ್ಲ. ನಾನು ಇಷ್ಟು ಕೇಳುತ್ತಿದ್ದರೂ ಬರಲಿಲ್ಲ ಅಂದ್ರೆ ಇದಕ್ಕೆ ಸೀತಕ್ಕನೇ ಜವಾಬ್ದಾರಿ.

– ಕುಮಾರಿ, ಮೃತ ಸಾಹಿತಿ ತಾಯಿ

ಕಾನೂನು ಎಲ್ಲರಿಗೂ ಸಮ ಅನ್ನೋದು ಕೇವಲ ಅಕ್ಷರಗಳಲ್ಲಿ ಇದೆ. ಆದ್ರೆ, ಅದು ಹಲವು ಬಾರಿ ಜಾರಿಯಾಗದಿರೋರು ಉದಾಹರಣೆಯೂ ಇದೆ. ಈ ಕೇಸ್‌ನಲ್ಲಿ ಮತ್ತೆ ಇದು ಪ್ರೂವ್ ಆಗಿದೆ. ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳದ್ದಿದ್ರೆ ಕೇಸ್‌ ಮುಚ್ಚಿ ಹೋಗೋದಿಲ್ಲ. ಜನರು ಬೀದಿಗೆ ಬರ್ತಾರೆ. ನ್ಯಾಯಕ್ಕಾಗಿ ಹೋರಾಡುತ್ತಾರೆ. ಇಷ್ಟೆಲ್ಲಾ ಆಗೋಕು ಮುನ್ನ ಪೊಲೀಸರು ಕ್ರಮಕೈಗೊಂಡರೇ ಉತ್ತಮ ಅಲ್ಲವೇ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಲೀಡರ್​​ ಪುತ್ರನಿಂದ ಲವ್​​ ಟಾರ್ಚರ್; ಮನನೊಂದು ಯುವತಿ ಸಾವು.. ಆಮೇಲೇನಾಯ್ತು?

https://newsfirstlive.com/wp-content/uploads/2024/03/death-2024-03-16T203307.290.jpg

Load More