Advertisment

ಪ್ರೇಯಸಿಗಾಗಿ ತನ್ನ ಇಡೀ ಕುಟುಂಬನ್ನೇ ಕೊಲೆಗೈದ ಪಾಪಿ.. ಹೆಂಡತಿ, 2 ಕಂದಮ್ಮಗಳ ಜೀವ ತೆಗೆದಿದ್ದೇಗೆ?

author-image
Bheemappa
Updated On
ಪ್ರೇಯಸಿಗಾಗಿ ತನ್ನ ಇಡೀ ಕುಟುಂಬನ್ನೇ ಕೊಲೆಗೈದ ಪಾಪಿ.. ಹೆಂಡತಿ, 2 ಕಂದಮ್ಮಗಳ ಜೀವ ತೆಗೆದಿದ್ದೇಗೆ?
Advertisment
  • ಪತ್ನಿ, ಮಕ್ಕಳನ್ನ ಕೊಲೆ ಮಾಡಿ ಕಾರು ಆಕ್ಸಿಡೆಂಟ್ ಅಂತ ಬಿಂಬಿಸಿದ್ದ
  • ಕುಟುಂಬವನ್ನು ಬಲಿ ಕೊಟ್ಟ ಮೇಲೂ ಪ್ರೇಯಸಿಯನ್ನ ಬಿಟ್ಟಿರಲಿಲ್ಲ
  • ಹೆಂಡತಿ, ತನ್ನ 2 ಎಳೆ ಮಕ್ಕಳನ್ನ ಕಿರಾತಕ ತಂದೆ ಕೊಲೆ ಮಾಡಿದ್ದೇಗೆ.?

ಹೈದರಾಬಾದ್‌: ತೆಲಂಗಾಣದ ರಾಜಧಾನಿ ಹೈದರಾಬಾದ್​ ನಗರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರಿಯತಮೆಯ ಒತ್ತಾಯದ ಮೇರೆಗೆ ಓರ್ವ ಫಿಸಿಯೋಥೆರಪಿಸ್ಟ್ ತನ್ನ ಹೆಂಡತಿ ಹಾಗೂ 2 ಎಳೆ ಕಂದಮ್ಮಗಳಿಗೆ ಹೈ ಡೋಸ್​ ಇರೋ ಔಷಧಿಯನ್ನ ಇಂಜೆಕ್ಷನ್ ಮೂಲಕ ನೀಡಿ ​ಕೊಲೆಗೈದಿದ್ದಾನೆ.

Advertisment

ಇದನ್ನೂ ಓದಿ:ತಮ್ಮನ ಹೆಂಡತಿಯನ್ನ ಕೊಚ್ಚಿ ಕೊಲೆ ಮಾಡಿದ ಮಾವ.. ಹತ್ಯೆಗೆ ಅಸಲಿ ಕಾರಣವೇನು?

ಪತ್ನಿ ಕುಮಾರಿ (29) ಮತ್ತು ಪುತ್ರಿಯರಾದ ಕೃಷಿಕಾ (5) ಮತ್ತು ಕೃತಿಕಾ (3) ಮೃತಪಟ್ಟವರು. ಆರೋಪಿ ಫಿಸಿಯೋಥೆರಪಿಸ್ಟ್ ಬೋಡಾ ಪ್ರವೀಣ್ (32) ತನ್ನ ಪ್ರೇಯಸಿ​ ಸೋನಿ ಫ್ರಾನ್ಸಿಸ್ ಒತ್ತಾಯದ ಮೇರೆಗೆ ತನ್ನ ಚಿಕ್ಕ ಕುಟುಂಬವನ್ನೇ ಕೊಂದು ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಹೆಂಡತಿ, ಮಕ್ಕಳನ್ನು ಕೊಲೆ ಮಾಡಿದ ಮೇಲೆ ಕಾರು ಆಕ್ಸಿಡೆಂಟ್ ಎಂದು ಬಿಂಬಿಸಿದ್ದನು. ಆ ಮೇಲೆ ಏನು ಆಗಿಲ್ಲವೆಂಬಂತೆ ಪ್ರೇಯಸಿ ಜೊತೆ ಸುಮಾರು 45 ದಿನಗಳ ಕಾಲ ಹೈದರಾಬಾದ್‌ನ ಅತ್ತಾಪುರ ಪ್ರದೇಶದಲ್ಲಿ ಇದ್ದನು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ‘ಕ್ಯಾಪ್ಟನ್​ ಆಗೋ ಅರ್ಹತೆ ಇಲ್ಲ, ಹೇಗೆ ಮಾಡಬೇಕಂತನೂ ಗೊತ್ತಿಲ್ಲ’.. ಶುಭ್​ಮನ್​ ಗಿಲ್​ ಬಗ್ಗೆ ಸ್ಫೋಟಕ ಹೇಳಿಕೆ

Advertisment

publive-image

ಹೆಂಡತಿಗೆ ಹೈ ಡೋಸ್ ಇರೋ ಚುಚ್ಚು ಮದ್ದನ್ನು ನೀಡಿ ಕೊಲೆ ಮಾಡಿದ ಬಳಿಕ ಕಾರಿನಲ್ಲಿ ತನ್ನೆರಡ ಮಕ್ಕಳ ಬಾಯಿ, ಮೂಗನ್ನು ಮುಚ್ಚಿ ಉಸಿರುಗಟ್ಟಿಸಿ ತಂದೆ ಕೊಲೆಗೈದಿದ್ದಾನೆ. ಈ ಸಂಬಂಧ ತನಿಖೆ ನಡೆಸಲಾಗಿತ್ತು. ಕಾರು ಆಕ್ಸಿಡೆಂಟ್ ಎಂದರೆ ಮಹಿಳೆ, ಮಕ್ಕಳ ದೇಹದ ಮೇಲೆ ಗಂಭೀರ ಗಾಯಗಳ ಗುರುತು ಇರಬೇಕಿತ್ತು. ಆದರೆ ಆಕೆಯ ದೇಹದ ಮೇಲೆ ಇಂಜೆಕ್ಷನ್ ಚುಚ್ಚಿರುವ ಗುರುತು ಪತ್ತೆಯಾಗಿವೆ ಎಂದು ತನಿಖೆಯಿಂದ ಗೊತ್ತಾಗಿದೆ.

ಇದನ್ನೂ ಓದಿ: ಫಾಲ್ಸ್​ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್​ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?

ಆರೋಪಿ ಹೇಳಿದಂತೆ ಕಾರು ಅಪಘಾತವಾಗಿದ್ದರೇ ದೇಹದ ಕೆಲ ಮೂಳೆಗಳು ಮುರಿದು ಹೋಗಬೇಕಿತ್ತು. ರಕ್ತ ಬಂದು ಗಾಯಗಳು ಇರಬೇಕಿತ್ತು. ಆದರೆ ಇದು ಯಾವುದು ಆಗಿಲ್ಲ. ಹೀಗಾಗಿ ಇಡೀ ಕಾರನ್ನು ಪೊಲೀಸರು ಹುಡುಕಿದಾಗ ಅದರಲ್ಲಿ ಖಾಲಿ ಇರುವ ಸಿರಂಜ್ ಸಿಕ್ಕಿದೆ. ಇದರ ಆಧಾರದ ಮೇಲೆ ಆರೋಪಿಯ ಇಡೀ ಕೃತ್ಯ ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment