ಅಲ್ಲು ಅರ್ಜುನ್‌ಗೆ ಬಿಗ್ ಶಾಕ್ ಕೊಟ್ಟ ಪೊಲೀಸರು; ಪುಷ್ಪ 2 ಕಾಲ್ತುಳಿತದ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌!

author-image
admin
Updated On
ಅಲ್ಲು ಅರ್ಜುನ್‌ಗೆ ಬಿಗ್ ಶಾಕ್ ಕೊಟ್ಟ ಪೊಲೀಸರು; ಪುಷ್ಪ 2 ಕಾಲ್ತುಳಿತದ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌!
Advertisment
  • ಅಲ್ಲು ಅರ್ಜುನ್ ವಿಚಾರಣೆಗೂ ಮುನ್ನವೇ ಬೌನ್ಸರ್ ಅರೆಸ್ಟ್!
  • ಬೌನ್ಸರ್ ತಳ್ಳಾಟಕ್ಕೆ ರೇವತಿ ಕೆಳಗೆ ಬಿದ್ದಿದ್ದಳು ಎಂಬ ಆರೋಪ
  • ಸತತ 4 ಗಂಟೆಗಳ ಪೊಲೀಸರು ಕೇಳಿದ ಪ್ರಶ್ನೆಗೆ ಅಲ್ಲು ಉತ್ತರ ಏನು?

ಹೈದರಾಬಾದ್: ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಪೊಲೀಸರು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ನಟ ಅಲ್ಲು ಅರ್ಜುನ್ ಅವರು ಇಂದು ಚಿಕ್ಕಡಪಲ್ಲಿ ಪೊಲೀಸ್ ಸ್ಟೇಷನ್‌ನಲ್ಲಿ ನಡೆದ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸುಮಾರು 4 ಗಂಟೆಗಳ ಕಾಲ ಅಲ್ಲು ಅರ್ಜುನ್ ಅವರು ಪೊಲೀಸರ ಪ್ರಶ್ನೆಗೆ ಉತ್ತರಿಸಿದ್ದಾರೆ.

publive-image

ಪೊಲೀಸರು ಕೇಳಿದ 10 ಪ್ರಶ್ನೆಗಳು
1. ಸಂಧ್ಯಾ ಥಿಯೇಟರ್‌ಗೆ ಭೇಟಿ ನೀಡಿದಾಗ ನಿಮ್ಮ ಜೊತೆಗೆ ಎಷ್ಟು ಮಂದಿ ಬೌನ್ಸರ್‌ಗಳು ಇದ್ದರು
2. ಥಿಯೇಟರ್‌ಗೆ ಭೇಟಿ ನೀಡಲು ಪೊಲೀಸ್ ಇಲಾಖೆಯ ಬಂದೋಬಸ್ತ್ ಅನುಮತಿ ಪಡೆಯಲಾಗಿತ್ತೇ?
3. ಥಿಯೇಟರ್ ಹೊರಗೆ ಎಷ್ಟು ಮಂದಿ ಸೇರಿದ್ದಾರೆ ಎಂಬುದು ನಿಮಗೆ ಗೊತ್ತಿತ್ತಾ?
4. ಕಾಲ್ತುಳಿತ ಸಂಭವಿಸಿದ್ದು ಯಾವಾಗ, ಯಾರಿಂದ ನಿಮಗೆ ಗೊತ್ತಾಯಿತು?
5. ಕಾಲ್ತುಳಿತ ಸಂಭವಿಸಿದ್ದು ಗೊತ್ತಾದರೂ, ಥಿಯೇಟರ್‌ನಿಂದ ಯಾಕೆ ನೀವು ಹೊರಗೆ ಹೋಗಲಿಲ್ಲ?
6. ಪೊಲೀಸರು ರಕ್ಷಣೆ ನೀಡುವ ಅನುಮತಿಯನ್ನೇ ನೀಡದೇ ಇದ್ದರೂ ಥಿಯೇಟರ್‌ಗೆ ಭೇಟಿ ಕೊಟ್ಟಿದ್ದು ತಪ್ಪಾಲ್ಲವೇ?
7. ಪೊಲೀಸರು ನೀವು ಥಿಯೇಟರ್‌ಗೆ ಭೇಟಿ ನೀಡಲು ಅನುಮತಿ ನೀಡಿದ್ದಾರೆ ಎಂಬುದನ್ನು ಸಮರ್ಥಿಸಲು ಸಾಕ್ಷ್ಯ, ಆಧಾರ ಇದೆಯೇ?
8. ಥಿಯೇಟರ್‌ಗೆ ಭೇಟಿ ನೀಡಲು ಪೊಲೀಸರ ಅನುಮತಿ ಪಡೆದಿದ್ದಿರಾ?
9. ನಿಮ್ಮ ಟೀಮ್ ಥಿಯೇಟರ್ ಬಳಿ ಇದ್ದ ಪರಿಸ್ಥಿತಿಯನ್ನು ನಿಮಗೆ ಮುಂಚೆಯೇ ತಿಳಿಸಿದ್ರಾ?
10. ಪೊಲೀಸರು ನಿಮ್ಮ ಭೇಟಿಗೆ ಅನುಮತಿ ನೀಡಿಲ್ಲ ಎಂಬುದು ನಿಮಗೆ ಗೊತ್ತಿತ್ತಾ?

ಅಲ್ಲು ಅರ್ಜುನ್ ಕೊಟ್ಟ ಉತ್ತರವೇನು?
ಸತತ 4 ಗಂಟೆಗಳ ಕಾಲ ಪೊಲೀಸರ ಅಷ್ಟು ಪ್ರಶ್ನೆಗೆ ಅಲ್ಲು ಅರ್ಜುನ್ ಅವರು ಯಾವುದೇ ಹಿಂಜರಿಕೆ ಇಲ್ಲದೇ ಉತ್ತರಿಸಿದ್ದಾರೆ. ನನಗೆ ಕಾಲ್ತುಳಿತದ ಬಗ್ಗೆ ಅಂದು ಗೊತ್ತೇ ಆಗಲಿಲ್ಲ. ಮಾರನೇ ದಿನ ಗೊತ್ತಾಯಿತು. ಡಿಸೆಂಬರ್ 4 ರಂದು ಎಸಿಪಿ, ಡಿಸಿಪಿಯನ್ನು ನಾನು ಭೇಟಿಯಾಗಿರಲಿಲ್ಲ ಎಂದಿದ್ದಾರೆ.

ವಿಚಾರಣೆ ವೇಳೆ ಅಲ್ಲು ಅರ್ಜುನ್ ಅವರು ಪೊಲೀಸ್ ವಾದಕ್ಕೆ ವಿರುದ್ಧವಾಗಿ ಸ್ಪಷ್ಟನೆ ನೀಡಿದ್ದಾರೆ. ಕಾಲ್ತುಳಿತ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸ್ ವರ್ಸಸ್ ಅಲ್ಲು ಅರ್ಜುನ್ ಹೋರಾಟ ತಾರಕಕ್ಕೇರಿದೆ.

publive-image

ಅಲ್ಲು ಅರ್ಜುನ್ ಬೌನ್ಸರ್ ಅರೆಸ್ಟ್‌!
ತೀವ್ರ ವಿಚಾರಣೆ ಮಧ್ಯೆಯೇ ನಟ ಅಲ್ಲು ಅರ್ಜುನ್ ಅವರಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಚಿಕ್ಕಡಪಲ್ಲಿ ಪೊಲೀಸರು ಇಂದು ಬೆಳಗ್ಗೆ ಅಲ್ಲು ಅರ್ಜುನ್ ವಿಚಾರಣೆ ಮುನ್ನವೇ ಬೌನ್ಸರ್ ಆ್ಯಂಟೋನಿಯನ್ ಅವರನ್ನ ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ನಟ ಅಲ್ಲು ಅರ್ಜುನ್‌ಗೆ ಮತ್ತೊಂದು ಸಂಕಷ್ಟ; ಪೊಲೀಸರಿಂದ 10 ಖಡಕ್ ಪ್ರಶ್ನೆಗಳು; ಏನವು? 

ಡಿಸೆಂಬರ್ 4ರಂದು ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಬೌನ್ಸರ್ ಪಾತ್ರ ಬಹುಮುಖ್ಯವಾಗಿತ್ತು. ಅಂದು ಬೌನ್ಸರ್ ತಳ್ಳಾಟಕ್ಕೆ ಮಹಿಳೆ ರೇವತಿ ಕೆಳಗೆ ಬಿದ್ದಿದ್ದಳು ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಬೌನ್ಸರ್‌ ಆ್ಯಂಟನಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಈ ಪ್ರಕರಣದಲ್ಲಿ ಬೌನ್ಸರ್‌ ಆ್ಯಂಟನಿ ಅವರು ಪ್ರಮುಖ ಆರೋಪಿಯಾಗಿದ್ದು, ಪೋಲಿಸರು ಘಟನೆಯ ವಿವರವನ್ನು ಕಲೆ ಹಾಕುತ್ತಿದ್ದಾರೆ. ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಬೌನ್ಸರ್ ಆ್ಯಂಟೋನಿ ಪ್ರಮುಖ ಆರೋಪಿಯಾಗಿದ್ದಾರೆ. ನಟ ಅಲ್ಲು ಅರ್ಜುನ್ ಅವರು A11 ಆರೋಪಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment