ಟ್ರಾಫಿಕ್​​ನಲ್ಲಿ ಭಿಕ್ಷೆ ಬೇಡುತ್ತಿದ್ದ ತೃತೀಯಲಿಂಗಿಗಳಿಗೆ ಉದ್ಯೋಗ ಕೊಟ್ಟ ಸರ್ಕಾರ.. ಮನೆಯಲ್ಲಿ ಸಂಭ್ರಮ

author-image
Bheemappa
Updated On
ಟ್ರಾಫಿಕ್​​ನಲ್ಲಿ ಭಿಕ್ಷೆ ಬೇಡುತ್ತಿದ್ದ ತೃತೀಯಲಿಂಗಿಗಳಿಗೆ ಉದ್ಯೋಗ ಕೊಟ್ಟ ಸರ್ಕಾರ.. ಮನೆಯಲ್ಲಿ ಸಂಭ್ರಮ
Advertisment
  • ಸರ್ಕಾರದ ವಿನೂತನ ಕೆಲಸಕ್ಕೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ
  • ಸತತ ಒಂದು ತಿಂಗಳು ತರಬೇತಿ ನೀಡಿ ಉದ್ಯೋಗಕ್ಕೆ ನೇಮಕ
  • ಉದ್ಯೋಗ ಪಡೆದವರ ಮನೆಯಲ್ಲಿ ಕೇಕ್ ಕಟ್ ಮಾಡಿ ಸಂತಸ

ಹೈದರಾಬಾದ್: ತೃತೀಯಲಿಂಗಿಗಳಿಗೆ (Transgender) ಸರಿಯಾದ ಮಾರ್ಗ ಕಲ್ಪಿಸಿಕೊಟ್ಟರೇ ಅವರು ನಮ್ಮಂತೆ ಕೆಲಸ ಮಾಡಬಲ್ಲರು ಎಂಬುದು ಎಷ್ಟೋ ಬಾರಿ ಸಾಬೀತು ಆಗಿದೆ. ರೈಲ್ವೆ ನಿಲ್ದಾಣ, ಬಸ್​ ಟಾಪ್, ಟ್ರಾಫಿಕ್ ಹಾಗೂ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ತೃತೀಯಲಿಂಗಿಗಳು ಚಿಲ್ಲರೇ ಹಣಕ್ಕಾಗಿ ಕೈ ಚಾಚುತ್ತಿರುತ್ತಾರೆ. ಆದರೆ ಸರ್ಕಾರದಿಂದ ಇವರಿಗೂ ಸೌಲಭ್ಯಗಳು ಇವೆ ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ.

publive-image

ತೃತೀಯಲಿಂಗಿಗಗಳು ಸಾಮಾನ್ಯರಂತೆ ಎಲ್ಲದರಲ್ಲೂ ಅವಕಾಶ ಇದೆ. ಆದರೆ ಈ ಬಗ್ಗೆ ಕೇಳುವ ಹಕ್ಕು ಅವರಲ್ಲಿ ಇಲ್ಲ. ಇದಕ್ಕೆ ಮುಖ್ಯ ಕಾರಣ ಹಿಂಜರಿಕೆ, ವಿದ್ಯಾಭ್ಯಾಸದ ಕೊರತೆ ಆಗಿದೆ. ತೃತೀಯಲಿಂಗಿಗಳು ಸಮಾಜದಲ್ಲಿ ಎಲ್ಲರಿಗೂ ಮಾದರಿ ಆಗುವಂತೆ ಈಗೀಗ ಬದುಕುತ್ತಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ತೆಲಂಗಾಣ ಸರ್ಕಾರ ತೆಗೆದುಕೊಂಡ ಒಂದು ನಿರ್ಧಾರಕ್ಕೆ ಅವರ ಬದುಕಲ್ಲಿ ಹೊಸ ಬೆಳಕು ಬಂದಂತೆ ಆಗಿದೆ.

ಟ್ರಾಫಿಕ್​​ಗಳಲ್ಲಿ ಭಿಕ್ಷೆ ಬೇಡುತ್ತಿದ್ದ ತೃತೀಯಲಿಂಗಿಗಗಳನ್ನು ಹೈದರಾಬಾದ್ ಪೊಲೀಸರು ಕರೆದುಕೊಂಡು ಹೋಗಿ ಒಂದು ತಿಂಗಳು ಕಾಲ ಟ್ರೈನಿಂಗ್ ಕೊಟ್ಟಿದ್ದಾರೆ. ಟ್ರಾಫಿಕ್​ನಲ್ಲಿ ಹೇಗೆಲ್ಲಾ ಇರಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ನಿಮಗೂ ಉತ್ತಮ ರೀತಿಯಲ್ಲಿ ಬದುಕಲು ಅವಕಾಶ ಇದೆ ಎಂದು ಧೈರ್ಯ ಹೇಳಿದ್ದು ಸರ್ಕಾರ ಟ್ರಾಫಿಕ್ ಇಲಾಖೆಯಲ್ಲಿ ಅವರಿಗೆ ಉದ್ಯೋಗ ನೀಡಿದೆ.

publive-image

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ.. ಹೊಸ ವರ್ಷಕ್ಕೆ ಇನ್ನಷ್ಟು ಹೆಚ್ಚಳವಾಗುತ್ತಾ ಸಿಲ್ವರ್, ಹಳದಿ ಲೋಹ​?

ಹೈದರಾಬಾದ್​ ನಗರದ ಟ್ರಾಫಿಕ್​​ಗಳಲ್ಲಿ ಭಿಕ್ಷೆ ಬೇಡುತ್ತಿದ್ದ ತೃತೀಯಲಿಂಗಿಗಗಳನ್ನು ಸದ್ಯ ತೆಲಂಗಾಣದ ಸರ್ಕಾರ ಟ್ರಾಫಿಕ್​ ಸಂಚಾರ ಸಹಾಯಕರು (Traffic Assistants) ಆಗಿ ನೇಮಕ ಮಾಡಿದೆ. ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 50 ತೃತೀಯಲಿಂಗಿಗಗಳಿಗೆ ಒಂದು ತಿಂಗಳು ನಿರಂತರ ತರಬೇತಿ ನೀಡಿ ಅವರಿಗೆ ಉದ್ಯೋಗವನ್ನು ಕಲ್ಪಿಸಿದೆ. ಇದು ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದ್ದು ಉದ್ಯೋಗ ಪಡೆದಂತ ತೃತೀಯಲಿಂಗಿಗಗಳ ಮನೆಗಳಲ್ಲಿ ಭಾರೀ ಸಂತಸ ವ್ಯಕ್ತವಾಗಿದೆ.

ಕೆಲಸ ಮುಗಿಸಿಕೊಂಡು ಮನೆಗೆ ಬಂದ ತೃತೀಯಲಿಂಗಿಯನ್ನ ಮನೆಯಲ್ಲಿದ್ದವರು ತಬ್ಬಿಕೊಂಡು ಖುಷಿಪಟ್ಟಿದ್ದಾರೆ. ಉದ್ಯೋಗ ಪಡೆದಕ್ಕಾಗಿ ಹೂವಿನ ಹಾರ ಹಾಕಿ ಕೇಕ್ ಅನ್ನು ಕಟ್ ಮಾಡಿ ಸೆಲೆಬ್ರೆಷನ್ ಮಾಡಿದ್ದಾರೆ. ಸಿಹಿ ತಿನಿಸಿ ಆನಂದಪಟ್ಟಿದ್ದಾರೆ. ಉದ್ಯೋಗ ಪಡೆದವರಿಗೆ ಸೆಲ್ಯೂಟ್ ಮಾಡಿ ಹೆಮ್ಮೆ ಪಟ್ಟಿದ್ದಾರೆ.

publive-image

ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ನೇತೃತ್ವದಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ನಡೆದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಇದರದಲ್ಲಿ ನೂತನವಾಗಿ ನೇಮಕಗೊಂಡ ತೃತೀಯಲಿಂಗಿಗಗಳು ಸೇರಿದಂತೆ ಟ್ರಾಫಿಕ್ ಸಹಾಯಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕಮಿಷನರ್ ಸಿ.ವಿ.ಆನಂದ್, ಇದು ವಿನೂತನ ಉಪಕ್ರಮವಾಗಿದೆ. ತೃತೀಯಲಿಂಗಿಗಗಳನ್ನ ಸಮಾಜ ಸಾಮಾನ್ಯವಾಗಿ ಅನುಮಾನಾಸ್ಪದವಾಗಿ ನೋಡುತ್ತೆ. ಆದರೆ ಅವರು ಎಲ್ಲ ಕೆಲಸಗಳಿಗೂ ಅರ್ಹರು. ಅವರಿಗೆ ಅರ್ಥಪೂರ್ಣ ಉದ್ಯೋಗ ಒದಗಿಸುವ ಗುರಿ ಸರ್ಕಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment