Advertisment

ಅಲ್ಲು ಅರ್ಜುನ್ ಹೇಳಿಕೆಗೆ ತೆಲಂಗಾಣ ಸಿಎಂ ಕೌಂಟರ್‌.. ಪುಷ್ಪ 2 ಕಾಲ್ತುಳಿತದ ಇಂಚಿಂಚು ಮಾಹಿತಿ ಬಹಿರಂಗ

author-image
admin
Updated On
ಐಕಾನ್​ ಸ್ಟಾರ್ ಬಂಧನದ ಹಿಂದೆ ರಾಜಕೀಯನಾ.. ಅಲ್ಲು ಅರ್ಜುನ್- CM ರೇವಂತ್ ರೆಡ್ಡಿ ಮಧ್ಯೆ ಆಗಿದ್ದೇನು?
Advertisment
  • ಕಾರಿನ ರೂಫ್ ಟಾಪ್ ಓಪನ್ ಮಾಡಿಕೊಂಡ ಬಂದ ಅಲ್ಲು ಅರ್ಜುನ್
  • ರೇವತಿ ಸಾವಿನ ಬಗ್ಗೆ ಹೇಳಿದ ಮೇಲೂ ಥಿಯೇಟರ್‌ನಿಂದ ಹೋಗಲಿಲ್ಲ
  • ಸಿನಿಮಾ ನೋಡಿದ ಬಳಿಕವೇ ಥಿಯೇಟರ್‌ನಿಂದ ಹೋಗುತ್ತೇನೆ ಎಂದರು

ಪುಷ್ಪ 2 ಹೀರೋ ಅಲ್ಲು ಅರ್ಜುನ್ ಬಂಧನ, ಬಿಡುಗಡೆ ಪ್ರಕರಣದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಸಮರ ಮುಂದುವರಿದಿದೆ. ಡಿಸೆಂಬರ್ 4ರಂದು ಸಂಧ್ಯಾ ಥಿಯೇಟರ್‌ ಬಳಿ ಕಾಲ್ತುಳಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ ರೇವತಿ ಕುಟುಂಬದ ಪರವಾಗಿ ತೆಲಂಗಾಣ ಪೊಲೀಸರು ತಮ್ಮ ಕಾನೂನು ಕ್ರಮ ಮುಂದುವರಿಸಿದ್ದಾರೆ.

Advertisment

ನಟ ಅಲ್ಲು ಅರ್ಜುನ್ ಅವರ ಬಂಧನದ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದೆ. ಸಿಎಂ ರೇವಂತ್ ರೆಡ್ಡಿ ಅವರ ಸ್ಪಷ್ಟನೆ ಬಳಿಕ ಹೈದರಾಬಾದ್ ಪೊಲೀಸರು ಈ ಕೇಸ್‌ಗೆ ಹೊಸದೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಸಂಧ್ಯಾ ಥಿಯೇಟರ್‌ ಬಳಿ ನಡೆದ ಕಾಲ್ತುಳಿತದ ವಿಡಿಯೋ ಬಿಡುಗಡೆ ಮಾಡಿರುವ ಪೊಲೀಸರು ಡಿಸೆಂಬರ್ 4ರಂದು ಅಸಲಿಗೆ ಆಗಿದ್ದೇನು ಅನ್ನೋ ಇಂಚಿಂಚು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

publive-image

ಮಹತ್ವದ ಸುದ್ದಿಗೋಷ್ಠಿ ನಡೆಸಿರುವ ಹೈದರಾಬಾದ್ ಪೊಲೀಸರು, ಮೃತಪಟ್ಟ ರೇವತಿ, ಪುತ್ರ ಶ್ರೀತೇಜಾ ಇರುವ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ಅಂದು ಸಂಧ್ಯಾ ಥಿಯೇಟರ್‌ಗೆ ನಟ ಅಲ್ಲು ಅರ್ಜುನ್‌ ಅವರು ಕಾರಿನ ರೂಫ್ ಟಾಪ್ ಓಪನ್ ಮಾಡಿಕೊಂಡು ಕೈ ಬೀಸುತ್ತಾ ಬಂದಿದ್ದಾರೆ. ಆಗ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.

ಇದನ್ನೂ ಓದಿ: ಅವನಿಗೆ ಮನುಷ್ಯತ್ವ ಇದ್ಯಾ.. ದಯವಿಟ್ಟು ಜಡ್ಜ್ ಮಾಡಬೇಡಿ; ರೇವಂತ್ ​ರೆಡ್ಡಿ ಏಟಿಗೆ ಅಲ್ಲು ಅರ್ಜುನ್ ಎದಿರೇಟು 

Advertisment

ಚಿಕ್ಕಡಪಲ್ಲಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಜು ನಾಯ್ಕ್ ಅವರು ಮಾತನಾಡಿ, ಪುಷ್ಪ 2 ಸಿನಿಮಾ ತಂಡ ಸಂಧ್ಯಾ ಥಿಯೇಟರ್‌ಗೆ ಭೇಟಿ ನೀಡಲು ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ನಾವು ರೇವತಿ ಜೀವ ಉಳಿಸಲು ಬಹಳಷ್ಟು ಪ್ರಯತ್ನಪಟ್ಟೆವು. ಆದರೆ ಸಾಧ್ಯವಾಗಲಿಲ್ಲ. ದೇವರ ದಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀತೇಜಾ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ ಎಂದಿದ್ದಾರೆ.

publive-image

ಎಸಿಪಿ ರಮೇಶ್ ಕುಮಾರ್ ಅವರು ಮಾತನಾಡಿ, ಸಂಧ್ಯಾ ಥಿಯೇಟರ್ ಘಟನೆಯ ಬಗ್ಗೆ ಅಲ್ಲು ಅರ್ಜುನ್ ಮ್ಯಾನೇಜರ್‌ಗೆ ಹೇಳಿದ್ದೇವು. ಆ ಮ್ಯಾನೇಜರ್ ಅಲ್ಲು ಅರ್ಜುನ್ ಬಳಿ ಹೋಗಲು ನಮಗೆ ಅವಕಾಶ ಕೊಡಲಿಲ್ಲ. ಕೊನೆಗೆ ಅಲ್ಲು ಅರ್ಜುನ್ ಬಳಿ ಹೋಗಿ ಕಾಲ್ತುಳಿತ, ಮಹಿಳೆ ಸಾವಿನ ಬಗ್ಗೆ ತಿಳಿಸಿದೆವು. ಆಗಲೂ ಅಲ್ಲು ಅರ್ಜುನ್ ಥಿಯೇಟರ್‌ನಿಂದ ಹೋಗಲಿಲ್ಲ. ಸಂಪೂರ್ಣ ಸಿನಿಮಾ ನೋಡಿದ ಬಳಿಕವೇ ಥಿಯೇಟರ್‌ನಿಂದ ಹೋಗುವುದಾಗಿ ಅಲ್ಲು ಅರ್ಜುನ್ ಹೇಳಿದ್ದರು. 10-15 ನಿಮಿಷದ ಬಳಿಕ ನಾನು ಮತ್ತು ಡಿಸಿಪಿ ನಟ ಅಲ್ಲು ಅರ್ಜುನ್ ಅವರನ್ನ ಥಿಯೇಟರ್‌ನಿಂದ ಹೊರಗೆ ಕರೆ ತಂದೆವು ಎಂದು ಎಸಿಪಿ ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

publive-image

ವಿಧಾನಸಭೆಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಸ್ಪಷ್ಟನೆ ನೀಡಿದ ಬಳಿಕ ಅಲ್ಲು ಅರ್ಜುನ್ ಅವರು ಸುದ್ದಿಗೋಷ್ಠಿ ನಡೆಸಿ ಆರೋಪಗಳನ್ನೆಲ್ಲಾ ತಳ್ಳಿ ಹಾಕಿದ್ದರು. ಅಲ್ಲು ಅರ್ಜುನ್ ಹೇಳಿಕೆಗೆ ಈ ಮೂಲಕ ಪೊಲೀಸ್ ಅಧಿಕಾರಿಗಳು ಕೌಂಟರ್ ಕೊಟ್ಟಿದ್ದಾರೆ. ತೆಲಂಗಾಣ ಸರ್ಕಾರದ ಸೂಚನೆ ಮೇರೆಗೆ ಹೈದರಾಬಾದ್‌ ಪೊಲೀಸರು ವಿಡಿಯೋ ಸಾಕ್ಷಿ ಸಮೇತ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎನ್ನಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment