newsfirstkannada.com

VIDEO: ಜನರು ಹೀಗೂ ಇರ್ತಾರಾ.. Rapido ಬೈಕ್​ ಸವಾರನ ವಿಡಿಯೋ ನೋಡಿ ಮರುಗಿದ ನೆಟ್ಟಿಗರು!

Share :

Published February 13, 2024 at 12:21pm

Update February 13, 2024 at 4:40pm

  ​ಬೈಕ್​ನಲ್ಲಿ ಪೆಟ್ರೋಲ್ ಖಾಲಿ ಆಗಿದ್ದು ಅರ್ಧ ದಾರಿಯಲ್ಲೇ ಕೈಕೊಟ್ಟಿದೆ

  ಆಫೀಸ್​ಗೆ ಹೋಗಲು Rapido ಬೈಕ್​ ಬುಕ್ ಮಾಡಿದ್ದ ವ್ಯಕ್ತಿ

  ಬೈಕ್‌ನಿಂದ ಕೆಳಗೆ ಇಳಿಯದ ಗ್ರಾಹಕನ ವಿರುದ್ಧ ನೆಟ್ಟಿಗರ ಆಕ್ರೋಶ

ಈಗೇನು ಕುಳಿತಲ್ಲಿಂದಲೇ ಆನ್​ಲೈನ್​ ಮೂಲಕ ವಾಹನಗಳನ್ನ ಬುಕ್ ಮಾಡಿಕೊಂಡು ಅಂದುಕೊಂಡಲ್ಲಿಗೆ ಹೋಗಬಹುದು. ಆಟೋ, ಕಾರು, ಬೈಕ್​ ಅನ್ನ ಬುಕ್ ಮಾಡಿಕೊಂಡು ಜನರು ಆಫೀಸ್​, ಮನೆ, ಪಾರ್ಕ್ ಹೀಗೆ ತಾವಂದುಕೊಂಡಲ್ಲಿಗೆ ಹೋಗ್ತಿರುತ್ತಾರೆ. ಬೆರಳ ತುದಿಯಿಂದ ಬೇಕಾದಷ್ಟು ವ್ಯಾಪಾರ-ವ್ಯವಹಾರ ಮಾಡುವ ಈಗಿನ ಜನರಿಗೆ ರೂಢಿಯಾಗಿದೆ. ಆದ್ರೆ ಹೀಗೆ ಮಾಡುವಾಗ ಕೊಂಚ ಎಚ್ಚರದಿಂದಿರಬೇಕು. ಱಪಿಡ್ ಬೈಕ್​ನಲ್ಲಿ ಪೆಟ್ರೋಲ್ ಖಾಲಿಯಾಗಿ ತಳ್ಳಿಕೊಂಡು ಹೋಗ್ತಿದ್ದರು ಗ್ರಾಹಕನೊಬ್ಬ ಹಾಗೇ ಕುಳಿತುಕೊಂಡಿದ್ದಾನೆ.

ಈ ಘಟನೆ ನಡೆದಿರೋದು ತೆಲಂಗಾಣದ ಹೈದರಾಬಾದ್ ನಗರದನಲ್ಲಿ. ಗ್ರಾಹಕನೊಬ್ಬ ಱಪಿಡ್​ ಬೈಕ್​ ಅನ್ನು ಬುಕ್ ಮಾಡಿದ್ದಾನೆ. ಅದರಂತೆ ಆ ಬೈಕ್​ನಲ್ಲಿ ಗ್ರಾಹಕನನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಬೈಕ್​ನಲ್ಲಿ ಪೆಟ್ರೋಲ್ ಆಗಿದ್ದು ಅರ್ಧ ದಾರಿಯಲ್ಲೇ ಕೈಕೊಟ್ಟಿದೆ. ಹೀಗಾಗಿ ಸವಾರ ಪೆಟ್ರೋಲ್ ಸಿಗಬಹುದೆಂದು ಬೈಕ್​ ತಳ್ಳಿಕೊಂಡು ಹೋಗುತ್ತಿದ್ದಾನೆ. ಆದರೆ ಇದು ಯಾವುದನ್ನು ಲೆಕ್ಕಿಸದ ಗ್ರಾಹಕ ಮಾತ್ರ ಆ ಬೈಕ್​ನಲ್ಲಿ ಹಾಗೇ ಕುಳಿತುಕೊಂಡಿದ್ದು ಸವಾರ ತಳ್ಳಿಕೊಂಡೇ ಹೋಗಿದ್ದಾನೆ.

ಱಪಿಡೋ ಬೈಕ್​ನ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರು ಗ್ರಾಹಕನ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿ ಱಪಿಡೋ ಅಲ್ಲ, ಎಲ್ಲರಿಗೂ ಆಗುತ್ತದೆ. ಮಾನವೀಯತೆ ದೃಷ್ಟಿಯಿಂದ ಕೆಳಗಿಳಿದು ನಡೆದುಕೊಂಡು ಹೋಗಿದ್ದರೇ ಗ್ರಾಹಕ ಮನುಷ್ಯ ಆಗುತ್ತಿದ್ದ ಎಂದು ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಡಿಯೋವನ್ನು ಱಪಿಡೋ ಬೈಕ್​ ಹಿಂದೆ ಹೋಗುತ್ತಿದ್ದ ಕಾರಿನಲ್ಲಿದ್ದವರು ಸೆರೆ ಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಜನರು ಹೀಗೂ ಇರ್ತಾರಾ.. Rapido ಬೈಕ್​ ಸವಾರನ ವಿಡಿಯೋ ನೋಡಿ ಮರುಗಿದ ನೆಟ್ಟಿಗರು!

https://newsfirstlive.com/wp-content/uploads/2024/02/RAPIDO_BIKE.jpg

Load More