newsfirstkannada.com

ಟಾಲಿವುಡ್​​​ ನಿರ್ದೇಶಕ ಕ್ರಿಶ್​​ ವಿರುದ್ಧ ಡ್ರಗ್ಸ್​​ ಕೇಸ್; ತೆಲುಗು ಖ್ಯಾತ ನಟ-ನಟಿಯರಿಗೆ ಬಂಧನದ ಭೀತಿ!

Share :

Published February 27, 2024 at 3:56pm

Update February 27, 2024 at 3:59pm

    ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತೆ ಡ್ರಗ್ಸ್​ ಕೇಸುಗಳ ಸದ್ದು

    ಟಾಲಿವುಡ್​​ ಡೈರೆಕ್ಟರ್​​​ ಕ್ರಿಶ್​ ವಿರುದ್ಧ ಡ್ರಗ್ಸ್​ ಸೇವನೆ ಆರೋಪ

    ಈ ಬಗ್ಗೆ ಮಾಧಾಪುರ ಡಿಸಿಪಿ ವಿನೀತ್​​ ಹೇಳಿದ್ದೇನು ಗೊತ್ತಾ..?

ಇತ್ತೀಚೆಗೆ ಡ್ರಗ್ಸ್​ ಕೇಸ್​ ವಿಚಾರಕ್ಕೆ ತೆಲುಗು ಸಿನಿಮಾ ಇಂಡಸ್ಟ್ರಿ ಬಹಳ ಸುದ್ದಿಯಾಗುತ್ತಲೇ ಇದೆ. ಈಗ ಟಾಲಿವುಡ್​ ಫೇಮಸ್​ ಡೈರೆಕ್ಟರ್​​ ಕ್ರಿಶ್​ ಜಗರ್ಲಮುಡಿ ಅವರಿಗೂ ಡ್ರಗ್ಸ್ ಕೇಸ್​​ನಿಂದ ಸಂಕಷ್ಟ ಎದುರಾಗಿದೆ. ಱಡಿಸನ್​​ ಬ್ಲೂ ಡ್ರಗ್ಸ್​​ ಕೇಸ್​ ಸಂಬಂಧ ದಾಖಲಾದ ಎಫ್​ಐಆರ್​ನಲ್ಲಿ ಕ್ರಿಶ್​ ಜಗರ್ಲಮುಡಿ ಹೆಸರು ಉಲ್ಲೇಖಿಸಲಾಗಿದೆ ಎಂದು ಗಚ್ಚಿಬೌಲಿ ಪೊಲೀಸರು ತಿಳಿಸಿದ್ದಾರೆ.

ಗಚ್ಚಿಬೌಲಿ ಪೊಲೀಸರು ಇತ್ತೀಚೆಗೆ ಱಡಿಸನ್​​ ಬ್ಲೂ ಡ್ರಗ್ಸ್ ಕೇಸ್​ನಲ್ಲಿ ಬಿಜೆಪಿ ನಾಯಕ ಯೋಗಾನಂದ ಪುತ್ರನನ್ನು ಅರೆಸ್ಟ್​ ಮಾಡಿದ್ದರು. ರೇವ್​ ಪಾರ್ಟಿಯಲ್ಲಿ ಕೊಕೈನ್​ ಮತ್ತಿತರ ಡ್ರಗ್ಸ್ ಸೇವನೆ ಮಾಡಿದ ಆರೋಪದ ಮೇರೆಗೆ ಬಂಧನ ಮಾಡಲಾಗಿತ್ತು.

ಇನ್ನು, ಈ ಸಂಬಂಧ ಮಾತಾಡಿದ ನಿರ್ದೇಶಕ ಕ್ರಿಶ್​​, ತನ್ನ ಸ್ನೇಹಿತರನ್ನು ಭೇಟಿ ಮಾಡಲು ​​ಱಡಿಸನ್​​ ಬ್ಲೂ ಹೋಟೆಲ್​ಗೆ ಹೋಗಿದ್ದಾಗಿ ಮಾಹಿತಿ ನೀಡಿದ್ದಾರೆ. ಕೇವಲ ಅರ್ಧ ಗಂಟೆ ಮಾತ್ರ ಹೋಟೆಲ್​​ನಲ್ಲಿ ಇದ್ದು ಬಳಿಕ ಮರಳಿದ್ದಾಗಿ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾರೆ.

ಡಿಸಿಪಿ ಹೇಳಿದ್ದೇನು..?

ಉದ್ಯಮಿ ಕೇದಾರನಾಥ್​​, ವಿವೇಕಾನಂದ ಸೇರಿ ಮೂವರನ್ನು ಅರೆಸ್ಟ್​ ಮಾಡಲಾಗಿದೆ. ನಟಿ ಲಿಷಿ ಗಣೇಶ್​​ ಮತ್ತು ಶ್ವೇತಾ ಹೆಸರು ಕೂಡ ಎಫ್​ಐಆರ್​​ನಲ್ಲಿ ಇದೆ. ಡ್ರಗ್​ ಪೆಡ್ಲರ್​​ ಅಬ್ಬಾಸ್​​ ಈ ರೇವ್​ ಪಾರ್ಟಿ ಹಿಂದಿನ ಮಾಸ್ಟರ್​​. ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಲಾಗುವುದು. ಆರೋಪಿಗಳು ಎಷ್ಟೇ ದೊಡ್ಡ ಸೆಲೆಬ್ರಿಟಿ ಆಗಿರಲಿ ಬಂಧನ ಮಾಡಲಾಗುವುದು ಎಂದು ಮಾಧಾಪುರ ಡಿಸಿಪಿ ವಿನೀತ್​​ ತಿಳಿಸಿದ್ದಾರೆ. ಹೀಗಾಗಿ ಖ್ಯಾತ ತೆಲುಗು ನಟ ನಟಿಯರಿಗೆ ಬಂಧನದ ಭೀತಿ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಲಿವುಡ್​​​ ನಿರ್ದೇಶಕ ಕ್ರಿಶ್​​ ವಿರುದ್ಧ ಡ್ರಗ್ಸ್​​ ಕೇಸ್; ತೆಲುಗು ಖ್ಯಾತ ನಟ-ನಟಿಯರಿಗೆ ಬಂಧನದ ಭೀತಿ!

https://newsfirstlive.com/wp-content/uploads/2024/02/Krish_Director.jpg

Load More