newsfirstkannada.com

ಈ ಹುಡುಗಿಯ ಟ್ರೆಂಡ್​​ಗೆ ಬದಲಾಗ್ತಿದ್ದಾರೆ ಹುಡುಗರು; ಡಾ. ಬ್ರೋನಂತೆ ಫೇಮಸ್ ಆಗ್ತಿರೋ ಚೆಲುವೆ ಯಾರು..?

Share :

Published July 23, 2024 at 5:58am

Update July 23, 2024 at 10:19pm

    ಡಾ.ಬ್ರೋ ರೀತಿ ಫೇಮಸ್ ಆಗೋಕೆ ಹುಡುಗಿಯ ಪ್ರತಿಭೆ ಏನು?

    ಟ್ರೆಂಡಿಂಗ್ ಸೆಟ್ ಮಾಡಿದ ಚೆಲುವೆ.. ಹುಡುಗರು ಫುಲ್ ಫಿದಾ

    ಈಕೆಗಾಗಿ ಪಂಚೆ ಉಟ್ಟು, ಹಣೆಗೆ ಬೊಟ್ಟಿಟ್ಟು, ದೇವಸ್ಥಾನಕ್ಕೆ ಪ್ರದಕ್ಷಿಣೆ

ಸೋಶಿಯಲ್ ಮೀಡಿಯಾ.. ಝೀರೋ ಇರೋ ವ್ಯಕ್ತಿಯನ್ನ ಹೀರೋ ಮಾಡುತ್ತೆ. ಹೀರೋ ಆದ ವ್ಯಕ್ತಿಯನ್ನ ಝೀರೋ ಮಾಡೋ ಬಿಗ್ ಫ್ಲಾಟ್​​ಫಾಮ್.. ಸೋಶಿಯಲ್ ಮೀಡಿಯಾದಿಂದ ಯೂಸ್ ಇದೆ.. ಅಷ್ಟೇ ಅನ್​ ಯೂಸ್ ಕೂಡ ಇದೆ. ನಾವು ಬಳಸೋದರ ಮೇಲೆ ಸೋಶಿಯಲ್ ಮೀಡಿಯಾ ಡಿಪೆಂಡ್ ಆಗಿರುತ್ತೆ..

ನಿಮಗೆಲ್ಲಾ ‘ನಮಸ್ಕಾರ ದೇವ್ರು’ ಅಂತ ವಿಡಿಯೊ ಶುರು ಮಾಡೋ ಗಗನ್ ಶ್ರೀನಿವಾಸ್ ಎನ್ನುವ ಹುಡುಗ, ಡಾ.ಬ್ರೋ ಅಂತಾನೇ ಫೇಮಸ್ ಆಗಿದ್ದಾರೆ. ಜಗತ್ತಿನ ಅದೆಷ್ಟೋ ದೇಶ, ವಿದೇಶಗಳನ್ನ ಸುತ್ತಿ, ಅಲ್ಲಿನ ಪರಿಸರ, ಜನರ ಬದುಕು, ರೀತಿ ನೀತಿಗಳ ಜೊತೆಗೆ ಅದ್ಭುತ ಸಾಹಸಗಳಿಗೆ ಕೈ ಹಾಕ್ತಾರೆ. ಜನರಿಗೆ ಅರ್ಥವಾಗೋ ರೀತಿಯಲ್ಲೇ, ಕನ್ನಡದಲ್ಲೇ ಎಕ್ಸ್​​ಪ್ಲೇನ್ ಮಾಡ್ತಾ ಮಾಡ್ತಾನೇ ಕ್ಲಿಕ್ ಆದವರು ಡಾ.ಬ್ರೋ. ಡಾ.ಬ್ರೋ ಅಂತೆ ನಾವು ಮಾಡೋಣ ಅಂತ ಟ್ರೈ ಮಾಡಿ ಸಕ್ಸಸ್​ ಆದೋರು ಇದಾರೆ.. ಫೇಲ್ ಆದೋರು ಇದಾರೆ. ಒಂದು ಅರ್ಚಕರ ಕುಟುಂಬದಲ್ಲಿ ಮಗನಾಗಿ ಹುಟ್ಟಿ, ಪೌರೋಹಿತ್ಯ ಕಲಿತು, ಪೂಜೆ ಪುನಸ್ಕಾರಗಳನ್ನ ಮಾಡ್ತಾ ಜೀವನ ಮಾಡ್ತಾ ಇದ್ದೋರು ಗಗನ್ ಅಲಿಯಾಸ್ ಡಾ.ಬ್ರೋ. ಚಿಕ್ಕವಯಸ್ಸಿನಲ್ಲೇ ಪುಟ್ಟ ಪುಟ್ಟ ವಿಡಿಯೋಗಳನ್ನ ಮಾಡ್ತಾ ಮಾಡ್ತಾನೇ ಗಗನ್, ಡಾ.ಬ್ರೋ ಆಗಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.. ಗೆಲ್ತಾನೂ ಇದ್ದಾರೆ..

ಅಷ್ಟಕ್ಕೂ ಡಾ.ಬ್ರೋ ಬಗ್ಗೆ ಹೇಳೋದಕ್ಕೂ, ನಾವೀಗ ಹೇಳೋಕೆ ಹೋಗ್ತಿರೋ ಸ್ಟೋರಿಗೂ ಲಿಂಕ್ ಇದೆ. ಈ ಹುಡುಗಿಯ ಹೆಸರು ಶ್ರೀನವಲ್ ಕಿಶೋರಿ ಅಂತ.. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಶುರು ಮಾಡಿರೋ ಹುಡುಗಿ. ಈಕೆಯ ಒಂದು ಪ್ರತಿಭೆಯಿಂದ ಕ್ಲಿಕ್ ಆಗ್ತಿರೋ ಪ್ರತಿಭಾನ್ವಿತ ಹುಡುಗಿ. ಶ್ರೀ ನವಲ್ ಕಿಶೋರಿ, ತೆಲಂಗಾಣ ರಾಜ್ಯದ ಹೈದ್ರಾಬಾದ್​​​ನ ಹುಡುಗಿ. ಇನ್ನೂ 20 ವರ್ಷನೂ ದಾಟಿಲ್ಲ. ಈ ಹುಡುಗಿಯ ವೈಶಿಷ್ಠ್ಯತೆಗೆ ಕೆಲ ಹುಡುಗರು ಫಾಲೋ ಮಾಡ್ತಿದ್ದಾರೆ. ಇನ್ನೂ ಯುವಕರು ಈಕೆಯ ಅಧ್ಭುತ ಕಲೆಗೆ ಫುಲ್ ಫಿದಾ ಆಗೋಗಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿರೋ ಕಿಶೋರಿ, ತನ್ನ ಅಕೌಂಟ್​​ನಲ್ಲಿ ಒಂದು ವಿಡಿಯೋ ಅಪ್​ಲೋಡ್​​ ಮಾಡಿದ್ರೇ, ಲಕ್ಷ ಲಕ್ಷ ಜನರೂ ವೀಕ್ಷಣೆ ಮಾಡ್ತಿದ್ದಾರೆ. ದಿನಾ ಹಾಕ್ತಿರೋ ವಿಡಿಯೋ ನೋಡಿ ಆಕೆಗಾಗಿ ಏನ್ ಬೇಕಾದ್ರೂ ಮಾಡ್ತೀವಿ ಅಂತ ಹುಡುಗರು ಟ್ರೆಂಡಿಂಗ್ ಶುರು ಮಾಡ್ತಿದ್ದಾರೆ. ಈಕೆಯ ಮುಗ್ಧತೆ, ನಗು, ಹೇರ್​ ಸ್ಟೈಲ್, ಆಕೆ ಹಾಕುವ ಸಂಪ್ರದಾಯ ಬದ್ಧ ಬಟ್ಟೆ.. ಹಣೆ ಪೂರ್ತಿ ಲಕ್ಷಣವಾಗಿ ಹಚ್ಚೋ ಶ್ರೀಗಂಧದ ನಾಮ ಸೇರಿದಂತೆ ಹಲವೂ ಗುಣಗಳು ಯುವಕರ ಮನಸ್ಸಿಗೆ ಖುಷಿ ಕೊಡ್ತಿದೆ ಅಂತೆ. ಇಷ್ಟೆಲ್ಲಾ ಲಕ್ಷಣವಿರೋ ಹುಡುಗಿ ಇದ್ರೇ ಸಾಕಪ್ಪ.. ಲವ್ ಮಾಡೋಕೆ, ಮದುವೆ ಆಗೋಕೆ ಅಂತ ಹುಡುಗರು ತಮ್ಮ ಅಮ್ಮಂದಿರಿಗೆ ವಿಡಿಯೋ ತೋರಿಸ್ತಾ ಹೇಳ್ತಾ ಇದಾರಂತೆ.. ಜೊತೆಗೆ ಅದನ್ನೂ ರೀಲ್ಸ್ ಮಾಡಿ ಹುಡುಗರು, ಅಪ್​ಲೋಡ್ ಮಾಡ್ತಿದ್ದಾರೆ.

ಇದನ್ನೂ ಓದಿ: ನಟನೆಗೆ ಗುಡ್ ಬೈ, ಬ್ಯುಸಿನೆಸ್​ಗೆ ಹಾಯ್​ ಎಂದ ನಟಿ! ಈಗ 830 ಕೋಟಿ ಮೌಲ್ಯದ ಕಂಪನಿ ಒಡತಿ

ಕಿಶೋರಿ ಸಾಂಸ್ಕೃತಿಕ ಉಡುಗೆ ತೊಡುಗೆ ನಡುಗೆಗೆ ಹುಡುಗರು ಫಿದಾ

ಈಕೆಯ ಲಕ್ಷಣ ಒಂದು ಕಡೆ ಅಂತ ಅಂದ್ರೇ, ಇನ್ನೊಂದು ಕಡೆ ಆಕೆಯ ವಿಶೇಷ ಪ್ರತಿಭೆ. ಆ ವಿಶೇಷ ಪ್ರತಿಭೆಯೇ ಆಕೆಯ ಭಕ್ತಿ. ಹೌದು.. ಇದೇ ಭಕ್ತಿಯನ್ನ ನೋಡಿ ಹುಡುಗರು ಈಕೆಯನ್ನ ಇಷ್ಟ ಪಡ್ತಿರೋದು. ಜೊತೆಗೆ ಹುಡುಗೀರು ಕೂಡ ಈಕೆಯನ್ನ ನೋಡಿ, ಯಥಾವತ್ತಾಗಿ ರೀಲ್ಸ್ ಮಾಡ್ತಿರೋದು.ದೇವರ ಸಂಕೀರ್ತನೆಗಳು, ಶ್ಲೋಕಗಳು, ಕೆಲ ಸಿನಿಮಾದಲ್ಲಿನ ಬಿಜಿಎಂ ಹಾಡುಗಳನ್ನ ಱಪ್ ಮಾಡಿ ಹಾಡ್ತಾಳೆ. ಕೆಲ ವಿಡಿಯೋಗಳನ್ನ ಇಂಟ್ರೆಸ್ಟಿಂಗ್​​ ಆಗಿ ಕಾಣಿಸೋಕೆ ಈ ಹುಡುಗಿಯೇ ಹಾಡನ್ನ ಮತ್ತಷ್ಟೂ ರಿರೈಟ್ ಮಾಡಿ ಹಾಡ್ತಾಳೆ. ಕಿಶೋರಿ, ಹೈದ್ರಾಬಾದ್​​ನಲ್ಲಿ ಹುಟ್ಟಿದ್ದರೂ, ಸಂಸ್ಕೃತ, ತೆಲುಗು, ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರರ್ಗಳವಾಗಿ ಸ್ತೋತ್ರಗಳನ್ನ ಹೇಳ್ತಾಳೆ. ಕೆಲವೊಮ್ಮೆ ನಿಜಕ್ಕೂ ಈ ಹುಡುಗಿಯೇ ಹಾಡು ಹಾಡಿದ್ದ ಅಂತ ಅನ್ಸಿಬಿಡುತ್ತೆ. ವಿಭಿನ್ನ ರೀತಿಯ ಮೇಕಪ್​ ಹಾಗೂ ಮುಗುಳುನಗೆಯಲ್ಲಿ ಹಾಡಿಗೆ ತಕ್ಕಂತೆ ತಲೆ ಆಡಿಸುತ್ತಾ ಹಾಡುವ ಶೈಲಿಗೆ ಹುಡುಗರು ಫಿದಾ ಆಗ್ತಿದ್ದಾರೆ. ದೇವರ ಹಾಡುಗಳನ್ನ ಹಾಡ್ತಾ ಹಾಡ್ತಾ, ಫೇಮಸ್ ಸಿಂಗರ್​​​ಗಳ ಧ್ವನಿಯನ್ನೇ ಹೋಲುವ ರೀತಿ ಅದ್ಭುತವಾಗಿ ಹಾಡ್ತಿದ್ದಾಳೆ. ಈ ವಿಡಿಯೋ ನೋಡಿದ್ರೇ ಸಾಕು, ಏನೋ ಒಂದು ಖುಷಿ, ಏನೋ ಒಂದು ಸಂತೋಷ ಅಂತ ಕಾಮೆಂಟ್ ಮಾಡ್ತಿದ್ದಾರೆ.

ಇದನ್ನೂ ಓದಿ: ಮೇಕಪ್​​ ಮಾಡೋ ಹೆಣ್ಣುಮಕ್ಕಳೇ ಹುಷಾರ್​​.. ಸಿಕ್ಕಸಿಕ್ಕಲ್ಲಿ ಬ್ಯೂಟಿ ಪ್ರಾಡಕ್ಟ್​​ ಖರೀದಿಸೋ ಮುನ್ನ ಎಚ್ಚರ!

ಬೇಡದೇ ಇರೋ ವಿಡಿಯೋಗಳನ್ನ ಮಾಡಿ, ರಾತ್ರೋರಾತ್ರಿ ಸ್ಟಾರ್​ ಆದವರೂ ಇದ್ದಾರೆ.. ಇದೇ ಸೋಷಿಯಲ್​ ಮೀಡಿಯಾದಲ್ಲಿ ಕಠಿಣ ಪರಿಶ್ರಮ, ಟ್ಯಾಲೆಂಟ್​ನಿಂದ ಜನರಿಗೆ ಹತ್ತಿರವಾದೋರು ಇದ್ದಾರೆ. ಇದೇ ಸಾಲಿಗೆ ಡಾ.ಬ್ರೋ ಹಾಗೂ ಡಿವೋಷನಲಿ ಯುವ ಮನಸ್ಸುಗಳನ್ನು ಕದಿಯುತ್ತಿರುವ ಶ್ರೀನವಲ್​ ಕಿಶೋರಿಯೂ ಸೇರ್ಪಡೆಯಾಗಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಹುಡುಗಿಯ ಟ್ರೆಂಡ್​​ಗೆ ಬದಲಾಗ್ತಿದ್ದಾರೆ ಹುಡುಗರು; ಡಾ. ಬ್ರೋನಂತೆ ಫೇಮಸ್ ಆಗ್ತಿರೋ ಚೆಲುವೆ ಯಾರು..?

https://newsfirstlive.com/wp-content/uploads/2024/07/DR-BRO.jpg

Load More