ಬೆಂಗಳೂರಿಗರೇ ನಿರ್ಲಕ್ಷ್ಯ ಬೇಡ ಎಚ್ಚರ, ಎಚ್ಚರ.. ಸಿಲಿಕಾನ್ ಸಿಟಿ ಜನರಿಗೆ ಆಘಾತಕಾರಿ ಸುದ್ದಿ ಇದು!

author-image
Ganesh
Updated On
ಏಪ್ರಿಲ್ 7 ರಿಂದ 14 ವರೆಗೆ ಒಟ್ಟು 5 ರಜೆಗಳು: ಊರು-ಕೇರಿ  ಟ್ರಿಪ್​​ ಪ್ಲಾನ್ ಮಾಡಿದ್ದ ಬೆಂಗಳೂರು ಜನಕ್ಕೆ ಬಿಗ್ ಶಾಕ್..!
Advertisment
  • ಬೆಂಗಳೂರಿನ ಯುವಕರಲ್ಲಿ ಹೆಚ್ಚಾಯ್ತು ಹೈಪರ್ ​ಟೆನ್ಷನ್!
  • ಹೈಪರ್​ ಟೆನ್ಷನ್ ನಿರ್ಲ್ಯಕ್ಷಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!
  • ಹೈಪರ್​​ ಟೆನ್ಷನ್​​ ಲಕ್ಷಣಗಳೇನು? ನಿಯಂತ್ರಿಸುವುದು ಹೇಗೆ?

ಬೆಂಗಳೂರಿಗರೇ ನಿಮ್ಮ ಲೈಫ್‌ ಸ್ಟೈಲ್ ಹೈ-ಫೈ ಆಗಿದೆ, ಬದುಕು ಬಂಗಾರವಾಗಿದೆ ಅಂತ ಬೀಗಬೇಡಿ. ಆರೋಗ್ಯ ಸಮಸ್ಯೆ ಕಾಡಿದಾಗ ಅಯ್ಯೋ ಸಣ್ಣದು ಅಂತ ನಿರ್ಲಕ್ಷ್ಯ ಮಾಡ್ಬೇಡಿ. ನಿಮ್ಮ ಲೈಫ್ ಸ್ಟೈಲ್‌, ನಿಮ್ಮ ವರ್ಕ್‌ ಸ್ಟೈಲ್‌, ಕಡಿಮೆಯಾದ ನಿದ್ದೆ, ನಿಮ್ಮ ಆಹಾರ ಕ್ರಮ ಎಲ್ಲವೂ ನಿಮ್ಮನ್ನ ಸಾವಿನ ದವಡೆಯತ್ತ ಕರ್ಕೊಂಡ್ ಹೋಗ್ತಿದೆ.. ಈಗ್ಲೇ ಎಚ್ಚೆತ್ತುಕೊಳ್ಳಿ..!

ಬೆಂಗಳೂರಲ್ಲಿ ಜೀವನ ಒಂಥರಾ ಸ್ಪೆಷಲ್.. ವಾರ ಪೂರ್ತಿ ಕೆಲಸ ಮಾಡು.. ವೀಕೆಂಡ್‌ನಲ್ಲಿ ಪಾರ್ಟಿ.. ತಿನ್ನೋಕೆ ಬೇಕಿದ್ದು ಆರ್ಡರ್‌.. ಲೈಫ್ ಬಿಂದಾಸ್‌.. ಆದ್ರೆ ಇದೇ ಲೈಫ್ ಸ್ಟೈಲ್‌ ಬೋನಸ್‌ ಆಗಿ ದೊಡ್ಡ ಸಮಸ್ಯೆಯನ್ನೇ ಕೊಡ್ತಿದೆ. ಬೆಂಗಳೂರಿನಲ್ಲಿರೋ ಯುವಕರನ್ನೇ ಕಾಡ್ತಿದೆ.. ಇದ್ರಿಂದಾಗಿಯೇ 40ರೊಳಗಿನ ವ್ಯಕ್ತಿಗಳು ನಗರದಾದ್ಯಂತ ಆಸ್ಪತ್ರೆಗಳಿಗೆ ದೌಡಾಯಿಸ್ತಿದ್ದಾರೆ. ಇದಕ್ಕೆ ಕಾರಣ ಹೈಪರ್.. ಹೈಪರ್‌ ಟೆನ್ಶನ್‌. ಏಕಾಏಕಿ 160 ಅಥವಾ 180ಗೆ ಬ್ಲಡ್‌ ಪ್ರಶರ್ ಶೂಟ್‌ ಆಗ್ತಿದ್ದು ಇದು ಸ್ಟ್ರೋಕ್‌, ಮೆದುಳಲ್ಲಿ ರಕ್ತ ಸೋರಿಕೆ, ಹೃದಯ ವೈಫಲ್ಯ, ಕಿಡ್ನಿ ವೈಫಲ್ಯಕ್ಕೆ ಕಾರಣವಾಗ್ತಿದೆ.. ಹಾಗಿದ್ರೆ ಈ ಹೈಪರ್​ ​ಟೆನ್ಷನ್ ಲಕ್ಷಣಗಳೇನು..?

ಇದನ್ನೂ ಓದಿ: ರಾತ್ರಿ ಎಷ್ಟು ಗಂಟೆಗೆ ಊಟ ಮಾಡಿದ್ರೆ ಒಳ್ಳೆಯದು..? ಒಂದು ಸಣ್ಣ ಅಭ್ಯಾಸ, ದೊಡ್ಡ ಪ್ರಯೋಜನ..!

publive-image

ಹೈಪರ್​​ ಟೆನ್ಷನ್​​ ಲಕ್ಷಣಗಳೇನು?

1. ತಲೆಯ ಹಿಂಭಾಗದಲ್ಲಿ ತೀವ್ರ ತಲೆನೋವು
2. ಏಕಾಏಕಿ ಅಸ್ಪಷ್ಟ (ಬ್ಲರ್‌) ಆಗಿ ಕಾಣುವುದು
3. ಎದೆಯಲ್ಲಿ ನೋವು ಅಥವಾ ಸಂಕಟ
4. ಏಕಾಏಕಿ ಉಸಿರಾಟದ ತೊಂದರೆ
5. ವಾಕರಿಕೆ ಮತ್ತು ತಲೆ ತಿರುಗುವಿಕೆ

20ರಿಂದ 25% ಹೆಚ್ಚಳ
ಕಳೆದ 3-4 ವರ್ಷಗಳಿಂದ 40 ವರ್ಷದೊಳಗಿನವರಲ್ಲಿ ಹೈಪರ್ ಟೆನ್ಶನ್‌ ಕೇಸ್‌ಗಳಲ್ಲಿ 20 ರಿಂದ 25 ಶೇಕಡಾದಷ್ಟು ಏರಿಕೆಯಾಗಿದೆ. ದಿನಕ್ಕೆ 10 ರೋಗಿಗಳಾದ್ರೂ ಇದೇ ಕಾರಣಕ್ಕೆ ಆಸ್ಪತ್ರೆಗೆ ಬರ್ತಿದ್ದಾರೆ. ಆತಂಕದ ವಿಚಾರ ಅಂದ್ರೆ ಹಲವರಲ್ಲಿ ಇದು ಆಗ್ಲೇ ಆರಂಭಿಕ ಹಂತವನ್ನೂ ದಾಟಿರುತ್ತೆ ಅಂತಾ ಫೋರ್ಟಿಸ್ ಆಸ್ಪತ್ರೆಯ ಕಾರ್ಡಿಯಲಾಜಿ ಸೀನಿಯರ್ ಕನ್ಸಲ್ಟೆಂಟ್‌ ಡಾ.ಬಸವರಾಜ್ ಉಟಗಿ ಮಾಹಿತಿ ನೀಡಿದ್ದಾರೆ.

publive-image

ಈ ಹೈಪರ್​​​​ ಟೆನ್ಷನ್​​ ರೋಗ ಲಕ್ಷಣಗಳು ಅರಿವಿಗೆ ಬರೋದಿಲ್ಲ.. ಬಿಪಿ ತಪಾಸಣೆಯಿಂದ ಮಾತ್ರ ಹೈಪರ್​​​ಟೆನ್ಷನ್​​ ಪತ್ತೆ ಹಚ್ಚಬಹುದು. ಈ ಕಾರಣಕ್ಕಾಗಿಯೇ ಇದನ್ನ ಸೈಲೆಂಟ್​​ ಕಿಲ್ಲರ್​​ ಅಂತ ಕರೀತಾರೆ. ಇದನ್ನ ನಿಯಂತ್ರಿಸೋದು ಹೇಗೆ?

ನಿಯಂತ್ರಿಸುವುದು ಹೇಗೆ?

  • ಒತ್ತಡದ ಬದುಕಿಗೆ ಬ್ರೇಕ್‌ ಹಾಕಿ
  •  ಉಪ್ಪು ಸೇವನೆ ಕಡಿಮೆ ಮಾಡಬೇಕು
  •  ದೇಹದ ತೂಕ ಆರೋಗ್ಯಕರವಾಗಿರಲಿ
  •  ಮದ್ಯಪಾನ, ತಂಬಾಕು ಸೇವನೆಗೆ ಬ್ರೇಕ್‌
  •  ದಿನ ನಿತ್ಯ ಯೋಗ, ವ್ಯಾಯಾಮ

ಹೈಪರ್​ಟೆನ್ಷನ್​​ ಅನ್ನೋ ಸೈಲೆಂಟ್​​ ಕಿಲ್ಲರ್​​​​​​​​​​​​ ಒತ್ತಡದ ಜೀವನ ನಡೆಸುತ್ತಿರುವವರನ್ನ ಹೆಚ್ಚಾಗಿ ಕಾಡ್ತಿದೆ.. ಹೀಗಾಗಿ ಇದ್ರಲ್ಲಿ ಯಾವುದೇ ಲಕ್ಷಣ ಕಾಣಿಸಿಕೊಂಡ್ರೂ ನಿರ್ಲಕ್ಷ್ಯ ಮಾಡೋಕೆ ಹೋಗ್ಬೇಡಿ. ಇವತ್ತಿನಿಂದ್ಲೇ ಉತ್ತಮ ಲೈಫ್ ಸ್ಟೈಲ್ ರೂಡಿಸಿಕೊಳ್ಳಿ.

ಇದನ್ನೂ ಓದಿ: Health warning: ಮತ್ತೆ ಜಗತ್ತಿಗೆ ಎಚ್ಚರಿಕೆ ಕೊಟ್ಟ ಹೊಸ ಅಲೆ.. ಹೋದ್ಯಾ ಪಿಶಾಚಿ ಅಂದ್ರೆ..

Advertisment